'ಮಾಲ್ಗುಡಿ ಡೇಸ್' ಕನ್ನಡಕ್ಕೆ ಬರುವುದು ಬಿಡುವುದು ಕನ್ನಡ ವಾಹಿನಿಗಳ ಕೈಯಲ್ಲಿದೆ.!
Recommended Video

ಜನಸಾಮಾನ್ಯರಲ್ಲಿ ಜ್ಞಾನ ಭಂಡಾರ ಹೆಚ್ಚಿಸುವ ಕಾರ್ಯಕ್ರಮಗಳು ಹಾಗೂ ಉತ್ತಮ ಪರಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬರಲಿ ಎನ್ನುವುದು ಹಲವರ ಒತ್ತಾಯ.
ಆದ್ರೆ, ಕನ್ನಡಕ್ಕೆ ಡಬ್ಬಿಂಗ್ ಬಂದುಬಿಟ್ಟರೆ, ಕಲಾವಿದರಿಗೆ, ಕಾರ್ಮಿಕರಿಗೆ ಕೆಲಸ ಸಿಗಲ್ಲ ಅನ್ನೋದು ಚಿತ್ರರಂಗದ ಅಭಿಪ್ರಾಯ. ಸ್ಯಾಂಡಲ್ ವುಡ್ ನಲ್ಲಿ ಡಬ್ಬಿಂಗ್ ವಿವಾದಕ್ಕೆ ಪೂರ್ಣ ವಿರಾಮ ಬಿದ್ದಿಲ್ಲ. ಹೀಗಿದ್ದರೂ, ಆಗೊಮ್ಮೆ ಈಗೊಮ್ಮೆ ಡಬ್ಬಿಂಗ್ ಸಿನಿಮಾಗಳು ಬಿಡುಗಡೆ ಆಗುತ್ತಲೇ ಇರುತ್ತವೆ.
ಈ ನಡುವೆ ದೂರದರ್ಶನದಲ್ಲಿ ಪ್ರಸಾರ ಆಗಿದ್ದ 'ಮಾಲ್ಗುಡಿ ಡೇಸ್' ಧಾರಾವಾಹಿ ಕನ್ನಡಕ್ಕೆ ಡಬ್ ಆಗಬೇಕು ಎಂಬ ಅಭಿಯಾನ ಇತ್ತೀಚೆಗಷ್ಟೇ ಟ್ವಿಟ್ಟರ್ ನಲ್ಲಿ ನಡೆದಿತ್ತು. ಅನೇಕ ಕನ್ನಡಿಗರು ಈ ಅಭಿಯಾನದಲ್ಲಿ ಪಾಲ್ಗೊಂಡು, ಬೆಂಬಲ ಸೂಚಿಸಿದ್ದರು.

#MalgudiDaysInKannada ಬೆಂಗಳೂರಿನಲ್ಲಿ ಟ್ರೆಂಡ್ ಆಗುತ್ತಿದ್ದ ಹಾಗೆ, ಅದರ ನೇತೃತ್ವ ವಹಿಸಿದ್ದವರು 'ಮಾಲ್ಗುಡಿ ಡೇಸ್' ಡಬ್ಬಿಂಗ್ ರೈಟ್ಸ್ ಹೊಂದಿದ್ದವರ ಜೊತೆಗೆ ಮಾತುಕತೆ ಕೂಡ ನಡೆಸಿ ಬಂದಿದ್ದಾರೆ.
ಕನ್ನಡಕ್ಕೆ 'ಮಾಲ್ಗುಡಿ ಡೇಸ್' ಡಬ್ಬಿಂಗ್ ಹಕ್ಕು ನೀಡಲು ನಿರ್ಮಾಪಕರು ಸಮ್ಮತಿ ಸೂಚಿಸಿದ್ದಾರೆ. ಆದ್ರೆ, ಒಂದು ಷರತ್ತಿನ ಮೇಲೆ. ಏನಪ್ಪಾ ಆ ಷರತ್ತು ಅಂದ್ರೆ, ''ಕನ್ನಡದ ಲೀಡಿಂಗ್ ಮನರಂಜನಾ ವಾಹಿನಿ, ಕನ್ನಡಕ್ಕೆ ಡಬ್ ಆದ 'ಮಾಲ್ಗುಡಿ ಡೇಸ್' ಧಾರಾವಾಹಿಯನ್ನ ಪ್ರಸಾರ ಮಾಡಲು ಒಪ್ಪಿಕೊಂಡರೆ ಖಂಡಿತ ರೈಟ್ಸ್ ಕೊಡ್ತೀವಿ'' ಅಂತ ನಿರ್ಮಾಪಕರು ಹೇಳಿದ್ದಾರಂತೆ.
ಅಂತೂ, ಕನ್ನಡ ಭಾಷೆಯಲ್ಲಿ 'ಮಾಲ್ಗುಡಿ ಡೇಸ್' ಬರಲು ಸಿದ್ಧವಾಗಿದೆ. ಆದ್ರೆ, ಅದಕ್ಕೆ ಕನ್ನಡ ಮನರಂಜನಾ ವಾಹಿನಿಗಳ ಸಪೋರ್ಟ್ ಅತ್ಯಗತ್ಯ.


Click it and Unblock the Notifications











