»   » ಇಂದಿನಿಂದ ನಿರ್ಮಾಪಕರ ಸರಣಿ ಉಪವಾಸ ಸತ್ಯಾಗ್ರಹ

ಇಂದಿನಿಂದ ನಿರ್ಮಾಪಕರ ಸರಣಿ ಉಪವಾಸ ಸತ್ಯಾಗ್ರಹ

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕಲಾವಿದರ ಸಂಘಕ್ಕೆ ನಿರ್ಮಾಪಕರು ನೀಡಿದ ಗಡುವು ಮುಗಿದಿದೆ. ನಿರ್ಮಾಪಕರು ಬೀದಿಗಿಳಿದು ಪ್ರತಿಭಟನೆ ಶುರುಮಾಡಿ ಹತ್ತು ದಿನಗಳಾಗಿವೆ. ಜೂನ್ 10 ರೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೇ ಇದ್ದರೆ, ಕಠಿಣ ಹೋರಾಟ ಶುರುಮಾಡುವುದಾಗಿ ನಿರ್ಮಾಪಕರು ಎಚ್ಚರಿಕೆ ನೀಡಿದ್ದರು.

ಅದರಂತೆ ಇಂದಿನಿಂದ ಸರಣಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ಅನೇಕ ನಿರ್ಮಾಪಕರು ಧರಣಿ ನಡೆಸುತ್ತಿದ್ದಾರೆ. [ಅಂಬಿ ಮಾತಿಗೆ 'ಇವರಿಂದ' ಕವಡೆ ಕಾಸಿನ ಕಿಮ್ಮತ್ತಿಲ್ಲ]

Producers on Hunger Strike in KFCC

ಅಲ್ಲದೇ, ಇಂದು ಸಂಜೆ ಫಿಲ್ಮ್ ಚೇಂಬರ್ ನ ಇತರೆ ಅಂಗ ಸಂಸ್ಥೆಗಳೊಂದಿಗೆ ಸಭೆ ಕೂಡ ನಡೆಸಲಿದ್ದಾರೆ. ಜೂನ್ 12 ನೇ ತಾರೀಖು ನಿರ್ಮಾಪಕರ ಬೃಹತ್ ಸಭೆ ಕೂಡ ಹಮ್ಮಿಕೊಳ್ಳಲಾಗಿದೆ. ನಿರ್ಮಾಪಕರ ಸಮಸ್ಯೆ ಬಗ್ಗೆ ಚರ್ಚಿಸುವುದಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಸಭೆ ನಡೆಸಿದರೂ, ಯಾವುದೇ ನಿರ್ಧಾರಕ್ಕೆ ಬಾರದೆ, ಸಭೆ ವಿಫಲವಾಗಿತ್ತು. [''ರೆಬೆಲ್ ಸ್ಟಾರ್ ಅಂಬರೀಶ್ ಗೆ ಧಿಕ್ಕಾರ...ಧಿಕ್ಕಾರ...'']

ಸತ್ಯಾಗ್ರಹ ಯಾಕೆ? - ಖಾಸಗಿ ವಾಹಿನಿಗಳು ಕನ್ನಡ ಚಿತ್ರಗಳ ಸ್ಯಾಟೆಲೈಟ್ ಹಕ್ಕುಗಳನ್ನ ಪಡೆಯುತ್ತಿಲ್ಲ. ಹೀಗಿದ್ದರೂ, ಅದೇ ಖಾಸಗಿ ವಾಹಿನಿಗಳಲ್ಲಿ ಸ್ಟಾರ್ ಹೀರೋಗಳು ರಿಯಾಲಿಟಿ ಶೋ ನಡೆಸಿಕೊಡುತ್ತಾರೆ. ಶೋಗಳಲ್ಲಿ ಬಿಜಿಯಿರುವ ಸ್ಟಾರ್ ಗಳು ಕಾಲ್ ಶೀಟ್ ಕೂಡ ನೀಡುವುದಿಲ್ಲ. ನಿರ್ಮಾಪಕರು ಲಾಸ್ ನಲ್ಲಿದ್ದಾರೆ. ಪ್ರೊಡ್ಯೂಸರ್ ಗಳ ಕಷ್ಟಕ್ಕೆ ಕಲಾವಿದರು ಸ್ಪಂದಿಸುತ್ತಿಲ್ಲ ಅಂತ ನಿರ್ಮಾಪಕರ ಸಂಘ ಜೂನ್ 1 ರಿಂದ ಪ್ರತಿಭಟನೆ ನಡೆಸುತ್ತಿದೆ.

English summary
Kannada Film Producers are protesting in KFCC from last 10 days. Since, Film Chamber failed to take up any decision with the Artist's Association, Producers are on Hunger Strike from today.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada