For Quick Alerts
  ALLOW NOTIFICATIONS  
  For Daily Alerts

  ಯುವ ದಸರಾಗೆ ಪುನೀತ್ ಜೊತೆ ದೀಪಿಕಾ ಪಡುಕೋಣೆ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಯುವ ದಸರಾ ಕಾರ್ಯಕ್ರಮಕ್ಕೆ ಈ ಇಬ್ಬರೂ ತಾರೆಗಳು ಚಾಲನೆ ನೀಡುತ್ತಿದ್ದಾರೆ.

  ಈ ಬಾರಿಯ ದಸರಾ ಸಂಭ್ರಮ ಅಕ್ಟೋಬರ್ 7, 2013ರಿಂದ ಆರಂಭವಾಗಲಿದೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಅವುಗಳಲ್ಲಿ ಯುವ ದಸರಾ ಈ ಬಾರಿ ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿದೆ.

  ಮೈಸೂರಿನ ಮಹಾರಾಜ ಮೈದಾನದಲ್ಲಿ 'ಚೆನ್ನೈ ಎಕ್ಸ್ ಪ್ರೆಸ್' ಬೆಡಗಿ ದೀಪಿಕಾ ಜೊತೆ ಪುನೀತ್ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಯುವ ದಸರಾ ಆಯೋಜಕರು, "ದೀಪಿಕಾ ದೀಪ ಬೆಳಗುತ್ತಾರೆ ಎಂಬ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ" ಎಂದಿದ್ದಾರೆ.

  ಈ ಬಾರಿಯ ಯುವ ದಸರಾಗೆ ಗಾಯಕರಾದ ಶಾನ್, ಸುನಿಧಿ ಚೌಹಾಣ್, ವಿಜಯ್ ಪ್ರಕಾಶ್, ಸುಖವಿಂದರ್ ಸಿಂಗ್, ಕೈಲಾಶ್ ಖೇರ್ ಹಾಗೂ ಸೋನು ನಿಗಂ ಸಹ ಪಾಲ್ಗೊಳ್ಳುತ್ತಿದ್ದಾರೆ.

  ಅಕ್ಟೋಬರ್ 7ರಂದು ಗಾಯಕ ಶಾನ್, ಅ.8ರಂದು ಕಲಾವಿದ ಶಿವಮಣಿ (ಡ್ರಮ್ಸ್), ಅ.9ರಂದು ಮೈಸೂರಿನ ಪ್ರತಿಭೆ, ಗಾಯಕ ವಿಜಯ್ ಪ್ರಕಾಶ್, ಅ.10ರಂದು ಹಿನ್ನೆಲೆ ಗಾಯಕ ಸುಕ್ವಿಂದರ್ ಸಿಂಗ್, ಅ.11ರಂದು ಗಾಯಕ ಕೈಲಾಶ್ ಖೇರ್, ಅ.12ರಂದು ಗಾಯಕ ಸೋನು ನಿಗಮ್ ತಂಡದಿಂದ ಸಂಗೀತ ಕಾರ್ಯಕ್ರಮ ಇರುತ್ತದೆ. (ಒನ್ಇಂಡಿಯಾ ಕನ್ನಡ)

  English summary
  Kannada actor Puneet Rajkumar and Bollywood diva Deepika Padukone will be seen together on the same stage. It is said that they both will be inaugurating the Yuva Dasara celebration, which will be held in Mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X