»   » ಹಲವು ವಿಶೇಷಗಳ ಸಂಗಮ ಪುನೀತ್ ಚಿತ್ರ 'ಮೈತ್ರಿ'

ಹಲವು ವಿಶೇಷಗಳ ಸಂಗಮ ಪುನೀತ್ ಚಿತ್ರ 'ಮೈತ್ರಿ'

Posted By:
Subscribe to Filmibeat Kannada

ಆಕ್ಷನ್ ಪ್ರಧಾನ 'ಪವರ್ ***' ಚಿತ್ರದ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರೇಕ್ಷಕರ ಮುಂದೆ ಬರುತ್ತಿರುವ ಚಿತ್ರ 'ಮೈತ್ರಿ'. ಈ ಚಿತ್ರ ಹಲವಾರು ವಿಶೇಷಗಳಿಂದ ಕೂಡಿದ್ದು ಪ್ರೇಕ್ಷಕರು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ. ಅವರ ನಿರೀಕ್ಷೆಗೆ ಇದೇ ಫೆಬ್ರವರಿ 20ರಂದು ತೆರೆ ಬೀಳಲಿದೆ.

ಓಂಕಾರ್ ಮೂವೀಸ್ ಅಡಿಯಲ್ಲಿ ಈ ವಾರ (ಫೆ.20) ಬಿಡುಗಡೆ ಆಗುತ್ತಿದೆ. ಇದು ಮಧುರ 'ಮೈತ್ರಿ' ಯೂ ಹೌದು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಅಪೂರ್ವ ಸಂಗಮ ಈ 'ಮೈತ್ರಿ' ಮೂಲಕ ಸಾಧ್ಯವಾಗಿದೆ. ['ಸಿಪಾಯಿ ರಾಮು' ಆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್]

ಈ ಚಿತ್ರದ ನಿರ್ಮಾಪಕರು ಎನ್.ಎಸ್ ರಾಜಕುಮಾರ್, ಪ್ರತಿಭಾವಂತ ನಿರ್ದೇಶಕ ಬಿ.ಎಂ ಗಿರಿರಾಜ್ ಅವರ ವಿನೂತನ ಕಥೆ ಇಲ್ಲಿದೆ. ಈ ಚಿತ್ರಕ್ಕೆ ನಾದ ಬ್ರಹ್ಮ, ಸಂಗೀತ ಮಾಂತ್ರಿಕ ಇಳಯರಾಜ ಅವರ ಸುಮಧುರ ಸಂಗೀತ ಮತ್ತಷ್ಟು ಆಕರ್ಷಣೆ ತಂದುಕೊಟ್ಟಿದೆ.

'ಮೈತ್ರಿ' ಸಿನಿಮಾದಲ್ಲಿ ಮೋಹಲ್ ಲಾಲ್ ಅವರದು ರಕ್ಷಣಾ ಇಲಾಖೆಯ ವಿಜ್ಞಾನಿ ಪಾತ್ರ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲೇ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡಲ್ಲಿ 'ನವಿಲಾದವರು', 'ಅದ್ವೈತ', 'ಜಟ್ಟ' ಸಿನಿಮಾಗಳ ನಿರ್ದೇಶಕರಾದ ಗಿರಿರಾಜ್ ಇದೇ ಎನ್. ಎಸ್ ರಾಜಕುಮಾರ್ ಅವರೊಂದಿಗೆ ಎರಡನೇ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಎ. ವಿ ಕೃಷ್ಣ ಕುಮಾರ್ ಅವರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಅವರ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ, ಮದನ್ ಹರಿಣಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಮೋಹನ್ ಲಾಲ್, ಪುನೀತ್ ರಾಜಕುಮಾರ್ ಅವರ ಜೊತೆಗೆ ಅರ್ಚನಾ (ಆ ದಿನಗಳು) ಭಾವನ ಮೆನನ್ ಅಲ್ಲದೆ ಅನೇಕ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಬಾಲ ನಟರಾಗಿ ಆದಿತ್ಯ, ಸಮರ್ಥ, ಕುಶಾಲ್, ದೇವು ಹಾಗೂ ಇನ್ನಿತರರು ಅಭಿನಯಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Power Star Puneeth Rajkumar and Malayalam Super Star Mohan Lal combination movie 'Mythri' all set to releases on 20th February. Archana of 'Aa Dinagalu' plays the female lead role opposite Mohanlal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada