Don't Miss!
- Sports
WPL Auction 2023: ದುಬಾರಿ ಮೊತ್ತಕ್ಕೆ ಹರಾಜಾಗಬಹುದಾದ ಐವರು ಆಟಗಾರರು
- News
ಬೆಂಗಳೂರಿನ ಜೆಪಿ ನಗರದಲ್ಲಿ ದುರಂತ: ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಬಾಲಕರು, ಕೋಚ್ ಬಂಧನ
- Technology
ನೀವು ಎಸ್ಬಿಐ ಗ್ರಾಹಕರೇ?... ಯುಪಿಐ ಪೇಮೆಂಟ್ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ!
- Finance
Economic Survey: ನವೆಂಬರ್ವರೆಗೆ 135.2 ಕೋಟಿ ಆಧಾರ್ ಸಂಖ್ಯೆ ಜನರೇಟ್, 12-ಡಿಜಿಟ್ ಪ್ರಾಮುಖ್ಯತೆ ತಿಳಿಯಿರಿ
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪುನೀತ್ ರಾಜ್‌ಕುಮಾರ್ ಕಿರುಚಿತ್ರ ಕಂಡು ಹರಿದ ಕಣ್ಣೀರು!
'ಪುನೀತ್ ನಮನ' ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಹಮ್ಮಿ ಕೊಳ್ಳಲಾಗಿದೆ. 'ಪುನೀತ್ ನಮನ' ಕಾರ್ಯಕ್ರಮದಲ್ಲಿ ಸಿನಿಮಾ ರಂಗ ಮತ್ತು ರಾಜಕೀಯ ಗಣ್ಯರು ಭಾಗಿ ಆಗಿದ್ದಾರೆ. ಪುನೀತ್ ರಾಜ್‌ಕುಮಾರ್ ಕುರಿತಾದ ಈ ಕಾರ್ಯಕ್ರಮವನ್ನು ಸಿನಿಮಾ ರಂಗದ ಗಣ್ಯರಿಗಾಗಿ ಹಮ್ಮಿಕೊಳ್ಳಲಾಗಿದೆ. ಇನ್ನೂ ಕಾರ್ಯಕ್ರಮದ ಆರಂಭದಲ್ಲಿ ಮೊದಲು ನಟ ಪುನೀತ್ ರಾಜ್‌ಕುಮಾರ್ ಕುರಿತಾದ ಕಿರು ಚಿತ್ರವನ್ನು ಪ್ರದರ್ಶನ ಮಾಡಲಾಯಿತು.
ಈ ಕಿರು ಚಿತ್ರ ಕಾರ್ಯಕ್ರಮದ ಪ್ರಮುಖ ಭಾಗ. ನಟ ಪುನೀತ್ ರಾಜ್ ಕುಮಾರ್ ಅವರ ಇಡೀ ಜೀವನವನ್ನು ಈ ಕಿರು ಚಿತ್ರದಲ್ಲಿ ಹಿಡಿದಿಡಲಾಗಿದೆ. ಅಪ್ಪು ಅವರ ಬದುಕು ಒಂದು ಈ ಕಿರುಚಿತ್ರದಲ್ಲಿ ಕಣ್ಣ ಮುಂದೆ ಬಂದು ಹೋಗುತ್ತದೆ.
ಕಾರ್ಯಕ್ರಮದಲ್ಲಿ ಸಿನಿಮಾರಂಗದ ಅನೇಕರು ಭಾಗಿ ಆಗಿದ್ದಾರೆ. ಇನ್ನುಳಿದಂತೆ ತಮಿಳು, ತೆಲುಗು ಸಿನಿಮಾರಂಗದ ಗಣ್ಯರು ಕೂಡ ಭಾಗಿ ಆಗಿದ್ದಾರೆ. ಎಲ್ಲರೂ ಅಪ್ಪು ಕಿರುಚಿತ್ರವನ್ನು ಕಣ್ಣತಂಬಿ ಕೊಂಡಿದ್ದಾರೆ.

ಅಪ್ಪು ಜೀವನ ಕಿರುಚಿತ್ರಕ್ಕೆ ಗೆಳೆಯ ಕಿಚ್ಚನ ಧ್ವನಿ!
ನಟ ಪುನೀತ್ ರಾಜ್‌ಕುಮಾರ್ ಕುರಿತಾದ ಈ ಕಿರು ಚಿತ್ರಕ್ಕೆ ನಟ ಕಿಚ್ಚ ಸುದೀಪ್ ಧ್ವನಿ ನೀಡಿದ್ದಾರೆ. ಆಪ್ತ ಗೆಳೆಯ ಸುದೀಪ್ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಪುನೀತ್ ರಾಜ್‌ಕುಮಾರ್ ಅವರ ಕಿರುಚಿತ್ರ ನೋಡುವಾಗ ಮನ ಮುಟ್ಟಿದೆ. ಕಣ್ಣು ಒದ್ದೆ ಆಗುವಂತೆ ಮಾಡಿದೆ.

ಕಾರ್ಯಕ್ರಮದ ಆರಂಭದಲ್ಲೇ ಶಿವಣ್ಣ ಕಣ್ಣೀರು!
ಪುನೀತ್ ರಾಜ್‌ಕುಮಾರ್ ಹಿರಿಯಣ್ಣ ನಟ ಶಿವರಾಜ್‌ಕುಮಾರ್ ಭಾವುಕ ಜೀವಿ. ಅಪ್ಪು ಇಲ್ಲವಾದ ದಿನದಿಂದಲೂ ಶಿವರಾಜ್ ಕುಮಾರ್ ಕಣ್ಣೀರು ಸುರಿಸುತ್ತಿದ್ದಾರೆ. ಮನಸಿನಲ್ಲಿ ಬೆಟ್ಟದಷ್ಟು ನೋವು ಹೊತ್ತು ಕೊಂಡಿರುವ ಶಿವರಾಜ್‌ಕುಮಾರ್ ಎಲ್ಲವನ್ನು ನುಂಗಿ ಸಹಜವಾಗಿ ಇರುತ್ತಾರೆ. ಆದರೆ ಇದು ಶಿವರಾಜ್ ಕುಮಾರ್ ಅವರ ಮನಸ್ಸಿನಲ್ಲಿ ಆರಲಾರದ ಗಾಯ. ಹಾಗಾಗಿ ಕಾರ್ಯಕ್ರಮ ಆರಂಭದಲ್ಲಿ ಪುನೀತ್ ಅವರ ಕುರಿತಾದ ಕಿರು ಚಿತ್ರವನ್ನು ನೋಡುತ್ತಲೇ ಅವರ ಕಣ್ಣುಗಳು ಒದ್ದೆ ಆದವು. ಕಣ್ಣೀರು ಒರೆಸಿ ಕೊಳ್ಳುತ್ತಲೇ ಕಿರುಚಿತ್ರ ಕಣ್ತುಂಬಿ ಕೊಂಡರು ಶಿವಣ್ಣ.

ಪುನೀತ್ ಪತ್ನಿ ಮತ್ತು ಮಗಳು ಭಾವುಕ
ಕಾರ್ಯಕ್ರಮ ಆರಂಭ ಆಗುತ್ತಿದ್ದಂತೆ ಕುಟುಂಬಸ್ಥರು ಮತ್ತು ನೆರೆದ ಕಲಾವಿದರು ಭಾವುಕರಾದರು. ಅದರಲ್ಲಿ ಶಿವರಾಜ್ ಕುಮಾರ್ ಒಂದು ಕಡೆ ಭಾವುಕರಾಗಿ ಕಣ್ಣೀರು ಹಾಕಿದರೆ. ಮತ್ತೊಂದು ಕಡೆ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ಮತ್ತು ಕಿರಿಯ ಮಗಳು ವಂದಿತಾ ಭಾವುಕರಾಗಿ ಕಣ್ಣೀರು ಹಾಕಿದರು.

ಅಪ್ಪು ಸಂಪೂರ್ಣ ಜೀವ ಕಿರು ಚಿತ್ರದಲ್ಲಿ!
ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಂಪೂರ್ಣ ಜೀವನದನ್ನು ಈ ಸಣ್ಣ ಕಿರು ಚಿತ್ರದಲ್ಲಿ ತೋರಿಸಲಾಗಿದೆ. 1975 ರಲ್ಲಿ ಚೆನ್ನೈನ ಆಸ್ಪತ್ರೆಯಲ್ಲಿ ಒಂದು ನಕ್ಷತ್ರ ಜನಿಸುತ್ತೆ. ಎಂದು ಶುರುವಾಗುವ ಈ ಕಿರು ಚಿತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರು ಹೇಗೆ ಬಾಲ ನಟನಾಗಿ ಚಿತ್ರರಂಗಕ್ಕೆ ಬಂದರು, ಯಾವೆಲ್ಲಾ ಸಿನಿಮಾಗಳಲ್ಲಿ ಅಭಿನಯಿಸಿದರು. ಎನ್ನುವುದರ ಜೊತೆಗೆ ಅಪ್ಪು ನಾಯಕನಾಗಿ ಹೇಗೆ ಸಿನಿಮಾ ಜರ್ನಿ ಮುಂದುವರೆಸಿದ್ದಾರೆ. ಎನ್ನುವುದನ್ನು ಹೇಳುವುದರ ಜೊತೆಗೆ ಪುನೀತ್ ರಾಜ್‌ಕುಮಾರ್ ಅವರ ಸಮಾಜ ಸೇವೆ ಮತ್ತು ಅವರು ನಿಧನದ ನಂತ್ರ ಅವರಿಗಾಗಿ ಹರಿದು ಬಂದ ಪ್ರೀತಿ- ಅಭಿಮಾನವನ್ನೂ ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ.