»   » ದುಷ್ಮನ್ ಅಂದ್ರೆ ದೂಸ್ರಾ ಮಾತೇ ಇಲ್ಲ 'ಪವರ್' ಸ್ಟಾರ್

ದುಷ್ಮನ್ ಅಂದ್ರೆ ದೂಸ್ರಾ ಮಾತೇ ಇಲ್ಲ 'ಪವರ್' ಸ್ಟಾರ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಪವರ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪವರ್ ಫುಲ್ ಆಗಿರುವ ಈ ಟೀಸರ್ ನಲ್ಲಿ ಪುನೀತ್ ಭರ್ಜರಿಯಾಗಿ ಫೈಟ್ಸ್, ಪಂಚಿಂಗ್ ಡೈಲಾಗ್ ಸಹ ಹೊಡೆದಿದ್ದಾರೆ.

"ಮುಕ್ಕೋಟಿ ದೇವರು ಕನ್ಫೂಸ್ ಆಗಿ ಹೋದರು ನೋಡ್ತಾ ಇವರ ಮೀಟರು... ದುಷ್ಮನ್ ಅಂದ್ರೆ ದೂಸ್ರಾ ಮಾತೇ ಇಲ್ಲ..." ಎಂದು ಎದುರಾಳಿಗೆ ಜಾಡಿಸಿ ಒದೆಯುತ್ತಾರೆ. ಗನ್ ತೋರಿಸಿ ಶೂಟ್ ಮಾಡುತ್ತಾರೆ. ಪುನೀತ್ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಟೀಸರ್ ಇದೆ. [ಪವರ್ ಸ್ಟಾರ್ ಸಿನಿಮಾ 'ಕೆಂಡಸಂಪಿಗೆ' ಶೂಟಿಂಗ್?]

<iframe width="600" height="360" src="//www.youtube.com/embed/tshkW2vUpp4?feature=player_embedded" frameborder="0" allowfullscreen></iframe>

ಇದೇ ಜೂನ್ 28ರಂದು ಬಳ್ಳಾರಿಯಲ್ಲಿ ಚಿತ್ರದ ಆಡಿಯೋ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. 14 ರೀಲ್ ಎಂಟರ್ ಟೈನ್ ಮೆಂಟ್ ನಿರ್ಮಾಣದ ಈ ಬಿಗ್ ಬಜೆಟ್ ಚಿತ್ರದ ಆಡಿಯೋ ಬಗ್ಗೆ ಪ್ರೇಕ್ಷಕರಲ್ಲಿ ಸಖತ್ ಕ್ರೇಜ್ ಇದೆ. ಇದೇ ಮೊದಲ ಸಲ ಪುನೀತ್ ಗೆ ಜೋಡಿಯಾಗಿ ದಕ್ಷಿಣದ ಚೆಲುವೆ ತ್ರಿಷಾ ಕೃಷ್ಣನ್ ಅಭಿನಯಿಸುತ್ತಿದ್ದಾರೆ.

ತೆಲುಗಿನ ಯಶಸ್ವಿ ಚಿತ್ರ ದೂಕುಡು ಚಿತ್ರದ ರೀಮೇಕ್ ಇದಾಗಿದ್ದು ಕೆ ಮಹೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಸ್ಪೈನ್, ಹೈದರಾಬಾದ್, ಮುಂಬೈ, ಸಂಡೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

Power movie tease

ಶ್ರೀನು ವೈಟ್ಲ ನಿರ್ದೇಶನದ 'ದೂಕುಡು' ಚಿತ್ರ ಬಾಕ್ಸ್ ಆಫೀಸಲ್ಲಿ ರು.100 ಕೋಟಿ ಗಳಿಸುವ ಮೂಲಕ ಟಾಲಿವುಡ್ ನಲ್ಲಿ ದಾಖಲೆ ನಿರ್ಮಿಸಿತ್ತು. ಹಳಿತಪ್ಪಿದ್ದ ಮಹೇಶ್ ಬಾಬು ಅವರ ವೃತ್ತಿಜೀವನದಲ್ಲಿ ಮಹತ್ತರ ತಿರುವು ನೀಡಿದ ಚಿತ್ರವಿದು. ನಂದಿ ಪ್ರಶಸ್ತಿ ಸೇರಿದಂತೆ ಫಿಲಂಫೇರ್ ಪ್ರಶಸ್ತಿಗಳಿಗೆ ಚಿತ್ರ ಪಾತ್ರವಾಗಿದೆ.

ಈ ಹಿಂದೆ ಮಹೇಶ್ ಬಾಬು ಅಭಿನಯದ 'ಒಕ್ಕಡು' ಚಿತ್ರ 'ಅಜಯ್' ಆಗಿ ಕನ್ನಡಕ್ಕೆ ರೀಮೇಕ್ ಆಗಿತ್ತು. ತೆಲುಗಿನ ಮತ್ತೊಂದು ಚಿತ್ರ 'ರೆಡಿ' ಕನ್ನಡಕ್ಕೆ 'ರಾಮ್' ಆಗಿ ರೀಮೇಕ್ ಆಗಿತ್ತು. ಈಗ ದೂಕುಡು ಚಿತ್ರದ ಸರದಿ. ಅಂದಹಾಗೆ ಮೂಲ ಚಿತ್ರದಲ್ಲಿ ಸಮಂತಾ ನಾಯಕಿ.

ಐದು ಹಾಡುಗಳಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಸಂಗೀತ ನೀಡುತ್ತಿದ್ದಾರೆ. ಕನ್ನಡದಲ್ಲಿ ಇದು ಅವರ ಪ್ರಥಮ ಚಿತ್ರ. ಕೃಷ್ಣಕುಮಾರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಕೆ.ಎಸ್.ಚಂಪಕಧಾಮ(ಬಾಬು), ಎಸ್.ಕುಮಾರ್ ನಿರ್ಮಾಣ ನಿರ್ವಹಣೆ ಮಾಡುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Power Star Puneeth Rajkumar's upcoming power packed movie 'Power' first look teaser released. Punching dialogues, powerful fights are the main attraction of the movie, directed by K Mahesh.
Please Wait while comments are loading...