For Quick Alerts
  ALLOW NOTIFICATIONS  
  For Daily Alerts

  'ಕನ್ನಡ ಮಾಣಿಕ್ಯ ಕಿಚ್ಚ': ಸುದೀಪ್ ಬಯೋಗ್ರಫಿ ಬಿಡುಗಡೆ ಮಾಡಿದ ಅಪ್ಪು

  |

  ಕಿಚ್ಚ ಸುದೀಪ್ ಅವರ ಬಯೋಗ್ರಫಿ ಪುಸ್ತಕವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು (ಸೆಪ್ಟೆಂಬರ್ 2) ಲೋಕಾರ್ಪಣೆ ಮಾಡಿದ್ದಾರೆ. ಕಿಚ್ಚನ ಹುಟ್ಟುಹಬ್ಬದ ಪ್ರಯುಕ್ತ ಈ ಪುಸ್ತಕ ಬಿಡುಗಡೆ ಮಾಡುವುದಾಗಿ ಸಿನಿ ಪತ್ರಕರ್ತ ಶರಣು ಹುಲ್ಲೂರು ತಿಳಿಸಿದ್ದರು. ಅದರಂತೆಯೇ ಇಂದು ಪುನೀತ್ ನಿವಾಸದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದಿದೆ.

  Sudeep ಹುಟ್ಟು ಹಬ್ಬದಂದು ಅವರ ಬಯೋಗ್ರಫಿ ಬಿಡುಗಡೆ ಮಾಡಿದ Puneeth Rajkumar | Filmibeat Kannada

  ಈ ವೇಳೆ ನಟ ಪುನೀತ್ ರಾಜ್ ಕುಮಾರ್, ಪುಸ್ತಕ ರಚಿಸಿರುವ ಪತ್ರಕರ್ತ ಶರಣು ಹುಲ್ಲೂರು, ನಿರ್ಮಾಪಕ ಜಾಕ್ ಮಂಜು ಹಾಗೂ ಡಾ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಭಾಗಿಯಾಗಿದ್ದರು. ಮುಂದೆ ಓದಿ...

  ಸುದೀಪ್ ಬಯೋಗ್ರಫಿ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ ಪುನೀತ್ ರಾಜ್ ಕುಮಾರ್ಸುದೀಪ್ ಬಯೋಗ್ರಫಿ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ ಪುನೀತ್ ರಾಜ್ ಕುಮಾರ್

  ಪುಸ್ತಕದ ಹೆಸರೇನು?

  ಪುಸ್ತಕದ ಹೆಸರೇನು?

  ಸುದೀಪ್ ಅವರ ಬಯೋಗ್ರಫಿಗೆ ''ಕನ್ನಡದ ಮಾಣಿಕ್ಯ ಕಿಚ್ಚ'' ಎಂದು ಹೆಸರಿಡಲಾಗಿದೆ. ಈ ಪುಸ್ತಕದ ಹೆಸರು ಏನಿರಬಹುದು ಎಂದು ಕಳೆದ ಮೂರ್ನಾಲ್ಕು ದಿನದಿಂದ ಕಿಚ್ಚನ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಂತಾಗಿತ್ತು. ಅಂತಿಮವಾಗಿ ಹೆಸರು ಬಹಿರಂಗವಾಗಿದೆ.

  ಪುನೀತ್ ರಾಜ್ ಕುಮಾರ್ ಏನಂದ್ರು?

  ಪುನೀತ್ ರಾಜ್ ಕುಮಾರ್ ಏನಂದ್ರು?

  ಕನ್ನಡ ಮಾಣಿಕ್ಯ ಕಿಚ್ಚ ಪುಸ್ತಕ ಬಿಡುಗಡೆ ಮಾಡಿದ ಪುನೀತ್ ರಾಜ್ ಕುಮಾರ್ ''ಸುದೀಪ್ ಅವರ ಕುರಿತು ಸಾಕಷ್ಟು ಮಾಹಿತಿ ಇದರಲ್ಲಿದೆ, ಅವರ ಬಾಲ್ಯದ ಫೋಟೋಗಳು, ಸಿನಿಮಾಗಳ ಬಗ್ಗೆ ಮಾಹಿತಿ, ಅವರ ತಂದೆಯ ಬಗ್ಗೆ ವಿವರ ಇದೆ. ಈ ಪುಸ್ತಕ ಅವರ ಅಭಿಮಾನಿಗಳಿಗೆ ಹಾಗೂ ಸಿನಿ ಅಭಿಮಾನಿಗಳಿಗೆ ಖುಷಿ ಕೊಡುತ್ತೆ. ಒಳ್ಳೆಯದಾಗಲಿ...'' ಎಂದು ಶುಭ ಕೋರಿದರು.

  ಅಪರೂಪದ ಫೋಟೋ ಮತ್ತು ಸಂಗತಿ

  ಅಪರೂಪದ ಫೋಟೋ ಮತ್ತು ಸಂಗತಿ

  ಶರಣು ಹುಲ್ಲೂರು ರಚಿಸಿರುವ ಈ ಪುಸ್ತಕದಲ್ಲಿ ಸುದೀಪ್ ಅವರ ಬಗ್ಗೆ ಗೊತ್ತಿಲ್ಲದ ಹಲವು ವಿಚಾರಗಳು ಹಾಗೂ ಇದಕ್ಕೂ ಮುಂಚೆ ಯಾರೂ ನೋಡಿರದ ಹಲವು ಅಪರೂಪದ ಫೋಟೋಗಳಿವೆ. ಸುದೀಪ್ ಅವರ ಸಿನಿಮಾ ಜರ್ನಿ, ಅವರ ಏಳು-ಬೀಳು ಮತ್ತು ವೈಯಕ್ತಿಕ ಜೀವನದ ಸಂಗತಿಗಳನ್ನು ಸಹ ಪುಸ್ತಕ ಒಳಗೊಂಡಿದೆ.

  ಲೇಖಕರ ಬಗ್ಗೆ....

  ಲೇಖಕರ ಬಗ್ಗೆ....

  ಹಲವು ವರ್ಷಗಳಿಂದ ಪತ್ರಿಕೋದ್ಯಮದಲ್ಲಿರುವ ಶರಣು ಹುಲ್ಲೂರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ರೆಬೆಲ್ ಸ್ಟಾರ್ ಕುರಿತು 'ಅಂಬರೀಶ್' ಎಂಬ ಪುಸ್ತಕ ಬರೆದಿದ್ದರು. 'ಕೊರೋನಾ' ಹೆಸರಿನಲ್ಲು ಸಹ ಪುಸ್ತಕ ಬರೆದಿದ್ದರು. 'ಬದುಕು ಹ್ಯಾಕ್ ಆಗಿದೆ', 'ಸಿನಿ ಸಾಂಗತ್ಯ', 'ಜುಗಲ್ ಬಂದಿ ಕವಿತೆಗಳು' ಎಂಬ ಪುಸ್ತಕಗಳನ್ನು ಸಹ ಹುಲ್ಲೂರು ರಚಿಸಿದ್ದಾರೆ.

  English summary
  Kannada actor Puneeth Rajkumar released Kiccha Sudeep's biography Book. written by journalist sharanu hullur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X