»   » ಪುನೀತ್ ಚಿತ್ರದ ಬಗ್ಗೆ ಸಿಹಿ ಸುದ್ದಿ ಕೊಟ್ಟ ರಾಕ್ ಲೈನ್ ವೆಂಕಟೇಶ್

ಪುನೀತ್ ಚಿತ್ರದ ಬಗ್ಗೆ ಸಿಹಿ ಸುದ್ದಿ ಕೊಟ್ಟ ರಾಕ್ ಲೈನ್ ವೆಂಕಟೇಶ್

Posted By:
Subscribe to Filmibeat Kannada

ಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೋಡಿಯಿಂದ ಸಿನಿಮಾ ಬರಲಿದೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ. ಈಗ ಈ ಸುದ್ದಿಯನ್ನ ಸ್ವತಃ ರಾಕ್ ಲೈನ್ ವೆಂಕಟೇಶ್ ಅವರೇ ಸ್ಪಷ್ಟಪಡಿಸಿದ್ದಾರೆ.

11 ವರ್ಷದ ಬಳಿಕ ಪುನೀತ್ ರಾಜ್ ಕುಮಾರ್ ಜೊತೆ ಸಿನಿಮಾ ಮಾಡುತ್ತಿರುವ ರಾಕ್ ಲೈನ್, ದೊಡ್ಡ ಬಜೆಟ್ ಸಿನಿಮಾವನ್ನ ನಿರ್ಮಾಣ ಮಾಡಲಿದ್ದಾರಂತೆ. ಈ ಚಿತ್ರಕ್ಕೆ ತಮಿಳು ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದು, ಇದೊಂದು ರೀಮೇಕ್ ಸಿನಿಮಾ ಎನ್ನಲಾಗಿತ್ತು. ಆದ್ರೆ, ಇದನ್ನ ಅಲ್ಲೆಗಳೆದಿರುವ ರಾಕ್ ಲೈನ್ ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಏನದು?

ರೀಮೇಕ್ ಸಿನಿಮಾ ಅಲ್ಲ

ರಾಕ್ ಲೈನ್ ವೆಂಕಟೇಶ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜುಗಲ್ ಬಂಧಿಯ ಚಿತ್ರ ರೀಮೇಕ್ ಸಿನಿಮಾ ಅಲ್ಲ. ಇದು ಸ್ವಮೇಕ್ ಸಿನಿಮಾವಾಗಿರಲಿದೆ ಎಂದು ಸ್ವತಃ ರಾಕ್ ಲೈನ್ ಅವರೇ ಖಚಿತ ಪಡಿಸಿದ್ದಾರೆ.

ಮತ್ತೊಂದು ತಮಿಳು ರಿಮೇಕ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್?

'ವಿಸಾರಣೈ' ರೀಮೇಕ್ ಹಕ್ಕು ನನ್ನ ಬಳಿ ಇದೆ

''ತಮಿಳಿನ 'ವಿಸಾರಣೈ' ಚಿತ್ರದ ರೀಮೇಕ್ ಹಕ್ಕು ನನ್ನ ಬಳಿಯೇ ಇದೆ. ಆದ್ರೆ, ಈ ಕಥೆ ಪುನೀತ್ ಅವರಿಗೆ ಸೂಕ್ತವಲ್ಲ. 'ವಿಸಾರಣೈ' ಚಿತ್ರವನ್ನ ಹೊಸಬರೊಂದಿಗೆ ಮಾಡುತ್ತೇನೆ. ಆದ್ರೆ, ಪುನೀತ್ ಜೊತೆ ಸ್ವಮೇಕ್ ಸಿನಿಮಾ ಮಾಡುತ್ತಿದ್ದೇನೆ'' ಎಂದಿದ್ದಾರೆ.

'ವೆಟ್ರಿಮಾರನ್' ನಿರ್ದೇಶನ

ಈ ಚಿತ್ರವನ್ನ ತಮಿಳಿನ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನ ಮಾಡಲಿದ್ದಾರೆ. ಕಥೆಯನ್ನ ವೆಟ್ರಿಮಾರನ್ ಅವರೇ ಸಿದ್ದ ಮಾಡಿದ್ದಾರೆ. ಈಗಾಗಲೇ ಕಥೆ ಕೇಳಿರುವ ಪುನೀತ್, ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರಂತೆ.

ತಮಿಳು ನಿರ್ದೇಶಕನ ಮುಂದಿನ ಚಿತ್ರಕ್ಕೆ ಪುನೀತ್ ನಾಯಕ.!

ಪುನೀತ್ ಮಾತ್ರ ಪಕ್ಕಾ

ಅಂದ್ಹಾಗೆ, ಈ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಮಾತ್ರ ಪಕ್ಕಾ ಆಗಿದ್ದು, ಬೇರೆ ಕಲಾವಿದರು ಆಯ್ಕೆ ಆಗಿಲ್ಲ. ಸದ್ಯ, ಈ ಸಿನಿಮಾ ಸ್ಕ್ರಿಪ್ಟ್ ಹಂತದಲ್ಲಿದ್ದು, 'ಅಂಜನಿ ಪುತ್ರ' ಮುಗಿಸಿದ ಮೇಲೆ ಶುರು ಮಾಡಲಿದ್ದಾರಂತೆ.

11 ವರ್ಷದ ನಂತರ ಒಂದಾದ ಜೋಡಿ

ಪುನೀತ್ ರಾಜ್ ಕುಮಾರ್ ಚಿತ್ರವನ್ನ 11 ವರ್ಷದ ನಂತರ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ 'ಮೌರ್ಯ' ಹಾಗೂ 'ಅಜಯ್' ಚಿತ್ರಗಳನ್ನ ರಾಕ್ ಲೈನ್ ನಿರ್ಮಾಣ ಮಾಡಿದ್ದರು.

ಪರಭಾಷೆ ನಿರ್ದೇಶಕರ ಪ್ರೀತಿಗೆ ಪಾತ್ರರಾದ 'ಪವರ್ ಸ್ಟಾರ್' ಪುನೀತ್

Puneeth Rajkumar and Kiccha Sudeep Dance together video | Filmibeat kannada
English summary
Kannada Actor Puneeth Rajkumar's Next Film Not A Remake Says Producer Rockline Venkatesh. The Movie Directed by Tamil Director Vetrimaaran and Produced by Rockline Venkatesh.
Please Wait while comments are loading...