For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್‌ಕುಮಾರ್ ಹೆಗಲ ಮೇಲೆ ಕೈ ಹಾಕಿ ನಿಂತ ಗಣೇಶ!

  By ಚಿಕ್ಕಮಗಳೂರು ಪ್ರತಿನಿಧಿ
  |

  ದೇವರು ಗಣೇಶ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಗಲ ಮೇಲೆ ಕೈಹಾಕಿ ನಿಂತಿರೊ ಗಣೇಶನ ಮೂರ್ತಿಗೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಭಾರಿ ಬೇಡಿಕೆ ಬಂದಿದೆ.

  ತರೀಕೆರೆ ಪಟ್ಟಣದ ಕುಂಬಾರ ಬೀದಿಯಲ್ಲಿ ಹತ್ತಾರು ವರ್ಷಗಳಿಂದ ನಾನಾ ರೀತಿಯ ಗಣಪತಿ ಮೂರ್ತಿಯನ್ನು ಮಾಡುತ್ತಿದ್ದಾರೆ. ಈ ವರ್ಷ ಪುನೀತ್ ಅಗಲಿಕೆಯಿಂದ ಅವರ ಅಭಿಮಾನಿ ಆದ ಕಲಾವಿದ ಚಂದ್ರು ಹಾಗೂ ಪ್ರಸನ್ನ ಎಂಬುವರು ಈ ಅದ್ಭುತ ಮೂರ್ತಿಯನ್ನ ನಿರ್ಮಿಸಿದ್ದಾರೆ.

  ತರೀಕೆರೆ ಪಟ್ಟಣದ ಮೋಹಿತ್ ಕುಮಾರ್ ಎಂಬುವರು ಈ ಮೂರ್ತಿಯನ್ನು ಆರ್ಡರ್ ಕೊಟ್ಟು ಮಾಡಿಸಿದ್ದಾರೆ. ಗಣೇಶನ ಜೊತೆ ಪುನೀತ್ ಕುಮಾರ್ ನಿಂತಿದ್ದು, ಗಣೇಶ ಅಪ್ಪುವಿನ ಹೆಗಲ ಮೇಲೆ ಕೈಹಾಕಿದ್ದಾನೆ. ಈ ಮೂರ್ತಿ ಭಾರೀ ಬೇಡಿಕೆ ಪಡೆದುಕೊಂಡಿದೆ. ಗಣಪತಿ ಮಾಡುವ ಸ್ಥಳಕ್ಕೆ ಬಂದು ಇದನ್ನ ನೋಡುವ ಎಲ್ಲಾ ಯುವಕರು ಈ ಮೂರ್ತಿ ನಮಗೆ ಬೇಕು ಕೊಡಿ ಎಂದು ಕೇಳುತ್ತಿದ್ದಾರೆ. ಸುಮಾರು 10 ಸಾವಿರ ಮೌಲ್ಯದ ಈ ಗಣಪತಿಗೆ ಮೋಹಿತ್ ಕುಮಾರ್ ಅಡ್ವಾನ್ಸ್ ಆಗಿ ಹಣವನ್ನೂ ನೀಡಿದ್ದಾರೆ.

  ಸ್ಥಳಕ್ಕೆ ಭೇಟಿ ನೀಡುತ್ತಿರುವ ಯುವಕರು 15-20 ಸಾವಿರ ಕೊಡುತ್ತೇವೆ ಎಂದು ಕೇಳುತ್ತಿದ್ದಾರೆ. ಆದರೆ, ಚಂದ್ರು ಅವರು ಇದನ್ನು ಯಾರಿಗೂ ನೀಡಿಲ್ಲ. ಇನ್ನೂ ತರೀಕೆರೆ ಪಟ್ಟಣದ ಕುಂಬಾರಬೀದಿಯ ಪುಟ್ಟಣ್ಣ ಎಂಬ ಕಲಾವಿದ ಕೂಡ ಗಣಪತಿ ಜೊತೆ ಅಪ್ಪು ಇರುವ ಮೂರ್ತಿ ಕೂಡ ಮಾಡಿದ್ದು ಈ ಮೂರ್ತಿ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಗಣಪತಿಯ ಎಡೆಭಾಗದಲ್ಲಿ ಗೌರಿ ಇರುವಂತೆ ಸ್ಥಳ ಬಿಟ್ಟಿದ್ದು ಬಲಭಾಗದಲ್ಲಿ ಪುನೀತ್ ರಾಜ್ ಕುಮಾರ್ ಇರುವಂತೆ ಮೂರ್ತಿಯನ್ನ ರಚಿಸಿದ್ದಾರೆ. ಹತ್ತಾರು ವರ್ಷಗಳಿಂದ ಗಣಪತಿ ಮೂರ್ತಿ ಮಾಡಿಕೊಂಡು ಬರುತ್ತಿರುವ ಈ ಕಲಾವಿದರ ಈ ವರ್ಷದ ಅಪ್ಪು ಮೂರ್ತಿಗೆ ಭಾರೀ ಬೇಡಿಕೆ ಬಂದಿದೆ.

  Puneeth Rajkumar Statue With Ganesh Idol In Chikkamagaluru

  ಕೇವಲ ಚಿಕ್ಕಮಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪುನೀತ್ ರಾಜ್‌ಕುಮಾರ್ ಗಣೇಶನಿಗೆ ಭಾರಿ ಬೇಡಿಕೆ ಇದೆ. ಬೆಂಗಳೂರಿನಲ್ಲಿ ಈ ಬಾರಿ ಅಪ್ಪು ಗಣಪತಿಯದ್ದೇ ಹವಾ. ಯಾವ ಗಣೇಶನ ಮೂರ್ತಿಯ ಶೆಡ್‌ಗೆ ಹೋದರೂ ಅಪ್ಪು ಗಣಪತಿ ಕಾಣುತ್ತಿದೆ. ಯುವಕರು, ಮಕ್ಕಳು ಮುಗಿಬಿದ್ದು ಅಪ್ಪು ಗಣಪತಿ ಕೊಳ್ಳುತ್ತಿದ್ದಾರೆ.

  English summary
  In Chikkamagaluru Ganesh idol with Puneeth Rajkumar's statue have huge demand. Many people purchasing Appu Ganesha for festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X