For Quick Alerts
  ALLOW NOTIFICATIONS  
  For Daily Alerts

  ಪುನೀತ್ 'ಯಾರೇ ಕೂಗಾಡಲಿ' ಲೇಟೆಸ್ಟ್ ಚಿತ್ರಗಳು

  By Rajendra
  |

  ಇನ್ನೇನು ಡಿಸೆಂಬರ್ ಹೊತ್ತಿಗೆ ಪ್ರೇಕ್ಷಕರ ಮುಂದೆ ಬರಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೊಚ್ಚ ಹೊಸ ಚಿತ್ರ 'ಯಾರೇ ಕೂಗಾಡಲಿ' ಸಿದ್ಧವಾಗುತ್ತಿದೆ. ಈ ಚಿತ್ರ ತಮಿಳಿನ ಯಶಸ್ವಿ 'ಪೊರಾಲಿ' ಚಿತ್ರದ ರೀಮೇಕ್. ಆದರೂ ಕನ್ನಡದಲ್ಲಿ ಹೇಗೆ ಮೂಡಿಬಂದಿರಬಹುದು, ಪುನೀತ್ ಅಭಿನಯ ಹೇಗಿರಬಹುದು ಎಂಬ ಬಗ್ಗೆ ಕುತೂಹಲ ಇದ್ದೇ ಇದೆ.

  ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಸಮುದ್ರ ಖಣಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಡಿಸೆಂಬರ್ 21ಕ್ಕೆ ತೆರೆಕಾಣುವ ಸಾಧ್ಯತೆಗಳಿವೆ. 'ಹುಡುಗರು' ಚಿತ್ರದ ಬಳಿಕ ಮತ್ತೊಮ್ಮೆ ಲೂಸ್ ಮಾದ ಯೋಗೇಶ್ ಅವರು ಪುನೀತ್ ಗೆ ಈ ಚಿತ್ರದಲ್ಲೂ ಸಾಥ್ ನೀಡಿದ್ದಾರೆ.

  ಗೆಟಪ್ ಬದಲಾಯಿಸಿದ ಪುನೀತ್

  ಗೆಟಪ್ ಬದಲಾಯಿಸಿದ ಪುನೀತ್

  ಹೆಚ್ಚಾಗಿ ಸಾಫ್ಟ್ ಪಾತ್ರಗಳಲ್ಲಿ ಕಾಣುತ್ತಿದ್ದ ಪುನೀತ್ ಈ ಚಿತ್ರದಲ್ಲಿ ತಮ್ಮ ಗೆಟಪ್ ಬದಲಾಯಿಸಿದ್ದಾರೆ. 'ಜೋಗಿ' ಸ್ಟೈಲ್ ನಲ್ಲಿ ಉದ್ದ ಕೂದಲನ್ನು ಬಿಟ್ಟು ರಫ್ ಅಂಡ್ ಟಪ್ ಆಗಿ ಕಾಣಿಸಿದ್ದಾರೆ.

  ಕನ್ನಡ, ತಮಿಳು ತಂತ್ರಜ್ಞರ ಸಮಾಗಮ

  ಕನ್ನಡ, ತಮಿಳು ತಂತ್ರಜ್ಞರ ಸಮಾಗಮ

  ಚಿತ್ರಕ್ಕೆ ಗುರುಪ್ರಸಾದ್ ಸಂಭಾಷಣೆ, ಹರಿಕೃಷ್ಣ ಸಂಗೀತ, ಸುಕುಮಾರ್ (ತಮಿಳು ಮೈನಾ ಖ್ಯಾತಿ) ಛಾಯಾಗ್ರಹಣ, ಜಾಕ್ಸನ್ (ಫರುತ್ತಿ ವೀರನ್ ಖ್ಯಾತಿ) ಕಲೆ, ದೀಪು.ಎಸ್. ಕುಮಾರ್ ಸಂಕಲನ, ರವಿವರ್ಮ ಸಾಹಸ, ರುದ್ರೇಶ್ ಎಂ.ಗೌಡ ನಿರ್ದೇಶನ ಸಹಕಾರ, ಚೆನ್ನ ನಿರ್ಮಾಣ ಮೇಲ್ವಿಚಾರಣೆ, ಮಲ್ಲಿಕಾರ್ಜುನ್ ನಿರ್ಮಾಣ-ನಿರ್ವಹಣೆ ಇದ್ದು, ತಮಿಳಿನ ನಾಡೋಡಿಗಳ್, ಪೋರಾಲಿ, ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ದೆಶಿಸಿದ ಹೆಸರಾಂತ ನಿರ್ದೇಶಕ ಸಮುದ್ರ ಖಣಿ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.

  ಭಾರಿ ಮೊತ್ತಕ್ಕೆ ಸ್ಯಾಟಲೈಟ್ ರೈಟ್ಸ್

  ಭಾರಿ ಮೊತ್ತಕ್ಕೆ ಸ್ಯಾಟಲೈಟ್ ರೈಟ್ಸ್

  'ಯಾರೇ ಕೂಗಾಡಲಿ' ಚಿತ್ರದ ಪ್ರಸಾರದ ಹಕ್ಕನ್ನು ಭಾರೀ ಮೊತ್ತ ರು. 4.5 ಕೋಟಿಗೆ ಖಾಸಗಿ ಚಾನೆಲ್ಲೊಂದು ಖರೀದಿಸಿದೆ. ಪುನೀತ್ ಚಿತ್ರ 'ಅಣ್ಣಾಬಾಂಡ್' ಚಿತ್ರವೂ ಭಾರೀ ಮೊತ್ತಕ್ಕೇ (ರು. 4 ಕೋಟಿ) ಸೇಲ್ ಆಗಿತ್ತು. ಆದರೆ ಕನ್ನಡದಲ್ಲಿ ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರ 'ಸಂಗೊಳ್ಳಿ ರಾಯಣ್ಣ', ಭರ್ಜರಿ '6 ಕೋಟಿ' ರು. ಸ್ಯಾಟಲೈಟ್ ರೇಟ್ ಗಳಿಸಿ ದಾಖಲೆ ನಿರ್ಮಿಸಿದೆ.

  ಸಮುದ್ರ ಖಣಿ ಸ್ವಮೇಕ್ ಗೆ ಪುನೀತ್

  ಸಮುದ್ರ ಖಣಿ ಸ್ವಮೇಕ್ ಗೆ ಪುನೀತ್

  ತಮಿಳು 'ಪೊರಾಲಿ' ನಿರ್ದೇಶಿಸಿ ಅದನ್ನೇ ಕನ್ನಡದಲ್ಲಿ ಯಾರೇ ಕೂಗಾಡಲಿ ಹೆಸರಿನಲ್ಲಿ ನಿರ್ದೇಶಿಸುತ್ತಿರುವ ನಿರ್ದೇಶಕ ಸಮುದ್ರ ಖಣಿ, ಪುನೀತ್ ಅವರಿಗೆ ಮತ್ತೊಂದು ಕಥೆಯನ್ನು ಹೇಳಿದ್ದಾರಂತೆ. ಆ ಕಥೆ ಪುನೀತ್ ಅವರಿಗೆ ಇಷ್ಟವಾಗಿದ್ದು ತಾವು ಅದರಲ್ಲಿ ನಟಿಸುವುದಾಗಿ ಪುನೀತ್ ಹೇಳಿದ್ದಾರಂತೆ. ಆದರೆ ಈ ಚಿತ್ರವು 'ಯಾರೇ ಕೂಗಾಡಲಿ' (ಪೊರಾಲಿ) ಯಂತೆ ರೀಮೇಕ್ ಅಲ್ಲ, ಹೊಸ ಕಥೆ ಎಂದಿದ್ದಾರೆ ಸಮುದ್ರ ಖಣಿ.

  ಇಲ್ಲಿ ಎಲ್ಲರೂ ಪಳಗಿದ ಕಲಾವಿದರೇ

  ಇಲ್ಲಿ ಎಲ್ಲರೂ ಪಳಗಿದ ಕಲಾವಿದರೇ

  'ಪೊರಾಲಿ' ಚಿತ್ರವನ್ನು ಹೊಸಬರೊಂದಿಗೆ ಮಾಡಿದ್ದೆ. ಆದರೆ 'ಯಾರೇ ಕೂಗಾಡಲಿ' ಚಿತ್ರದಲ್ಲಿ ಮಾತ್ರ ಎಲ್ಲರೂ ಪಳಗಿದ ಕಲಾವಿದರೇ ಇದ್ದಾರೆ. ಪುನೀತ್ ಇಲ್ಲಿ ಮೂರು ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಫೈಟ್ಸ್ ಸಹಜವಾಗಿ ಮೂಡಿಬಂದಿವೆ ಎನ್ನುತ್ತಾರೆ ಸಮುದ್ರ ಖಣಿ.


  ಪೂರ್ಣಿಮಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ನಾಯಕಿ ಭಾವನಾ. ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನು ಪೋಷಿಸಿದ್ದಾರೆ.

  ವರನಟ ಡಾ.ರಾಜ್ ಕುಮಾರ್ ಅಭಿನಯದ 'ಸಂಪತ್ತಿಗೆ ಸವಾಲ್' ಚಿತ್ರದಲ್ಲಿನ ಜಯಪ್ರಿಯ ಗೀತೆ "ಯಾರೇ ಕೂಗಾಡಲಿ ಊರೇ ಹೋರಾಡಲಿ...". ಈ ಹಾಡಿನ ಸಾಲನ್ನೇ ಚಿತ್ರಕ್ಕೆ ಶೀರ್ಷಿಕೆಯಾಗಿ ಇಡಲಾಗಿದೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಈ ಚಿತ್ರದ ಲೇಟೆಸ್ಟ್ ಫೋಟೋಗಳು ಇಲ್ಲಿವೆ ನೋಡಿ.

  English summary
  The latest pictures of Power Star Puneeth Rajkumar starrer Yaare Koogadali. Yaare Koogadali is a remake of Tamil movie Porali. It is directed by Samuthirakani and produced by Raghavendra Rajkumar. Puneeth appears in three different get ups in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X