For Quick Alerts
  ALLOW NOTIFICATIONS  
  For Daily Alerts

  ಮೈಸೂರು ಅಭಿಮಾನಿಯ ಪ್ರೀತಿಗೆ ಮನಸೋತ ಅಪ್ಪು

  |
  Yuvaratna Movie: ಮೈಸೂರು ಅಭಿಮಾನಿಯ ಪ್ರೀತಿಗೆ ಮನಸೋತ ಅಪ್ಪು | FILMIBEAT KANNADA

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಮೈಸೂರಿನ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. 'ಯುವರತ್ನ' ಸಿನಿಮಾದ ಚಿತ್ರೀಕರಣದ ವೇಳೆ ಅಲ್ಲಿನ ಜನರಿಂದ ಸಿಕ್ಕ ಬೆಂಬಲಕ್ಕೆ ಥ್ಯಾಂಕ್ಯು ಎಂದಿದ್ದಾರೆ.

  ಮೈಸೂರಿನ ಯುವರಾಜ ಮಹಾರಾಜ ಕಾಲೇಜಿನಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದು, ಅಲ್ಲಿಗೆ ಬಂದ ಅಭಿಮಾನಿಗಳಲ್ಲಿ ಸಾಕಷ್ಟು ಜನರನ್ನು ಭೇಟಿ ಮಾಡಿ ಫೋಟೋ ನೀಡಿದ್ದೇನೆ. ಫೋಟೋ ನೀಡಲು ಆಗದೆ ಇರುವ ಅಭಿಮಾನಿಗಳು ಬೇಸರ ಮಾಡಿಕೊಳ್ಳಬೇಡಿ. ಎಲ್ಲರೂ ನಮ್ಮ ಅಭಿಮಾನಿಗಳಿಗೆ ಎಂದು ಅಪ್ಪು ಹೇಳಿದ್ದಾರೆ

  ಮೈಸೂರಿನ ಒಬ್ಬ ಅಭಿಮಾನಿಯ ಅಭಿಮಾನ ಪುನೀತ್ ಗೆ ವಿಶೇಷವಾಗಿ ಕಂಡಿದೆ. ಆತನ ಮನೆಗೆ ಅಪ್ಪು ಭೇಟಿ ನೀಡಿದ್ದಾರೆ. ಆ ಮನೆಯ ಮಾಲಿಕ ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಯಂತೆ.

  'ಯುವರತ್ನ' ಚಿತ್ರದಲ್ಲಿ 'ಸಾಹೋ' ಸಾಹಸ ನಿರ್ದೇಶಕ

  ತಮ್ಮ ಮನೆಗೆ ಕಸ್ತೂರಿ ನಿವಾಸ ಎಂದು ಹೆಸರಿಟ್ಟಿರುವ ಅವರು ಮನೆಯ ಎಲ್ಲ ಕಡೆ ರಾಜ್ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ದೇವರ ಮನೆಯಲ್ಲಿ ದೇವರ ಜೊತೆಗೆ ರಾಜ್ ಫೋಟೋ ಇಟ್ಟು ಪೂಜೆ ಮಾಡುತ್ತಿದ್ದಾರೆ. ರಾಜ್ ಅಭಿಮಾನಿಗಳನ್ನು ದೇವರು ಎಂದಿದ್ದು, ಅದೇ ರೀತಿ ಅಭಿಮಾನಿಯೂ ರಾಜ್ ರನ್ನು ದೇವರಂತೆ ಕಾಣುತ್ತಿದ್ದಾರೆ.

  ಇಂತಹ ಅಭಿಮಾನಿಗಳಿಗೆ ಪುನೀತ್ ಧನ್ಯವಾದ ಹೇಳಿದ್ದಾರೆ. ಅಪ್ಪಾಜಿ ಹಾಗೂ ನಮ್ಮ ಮೇಲೆ ಈ ಮಟ್ಟದ ಪ್ರೀತಿ ತೋರಿಸುವ ಮೈಸೂರು ಮತ್ತು ಕರ್ನಾಟಕದ ಎಲ್ಲ ಅಭಿಮಾನಿಗಳಿಗೆ ಚಿರಋಣಿ ಎಂದಿದ್ದಾರೆ.

  ವಿಡಿಯೋ ನೋಡಲು ಕ್ಲಿಕ್ ಮಾಡಿ

  English summary
  Kannada actor Punneth Rajkuamar thanked mysore fans. 'Yuvaratna' movie shooted in Mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X