»   » ಆಸ್ಕರ್ ಗೆ ಅಂಗಳಕ್ಕೆ ಹಾರಲಿದೆಯೇ 'ಪುಷ್ಪಕ ವಿಮಾನ'?

ಆಸ್ಕರ್ ಗೆ ಅಂಗಳಕ್ಕೆ ಹಾರಲಿದೆಯೇ 'ಪುಷ್ಪಕ ವಿಮಾನ'?

Posted By:
Subscribe to Filmibeat Kannada

ರಮೇಶ್ ಅರವಿಂದ್ ಅಭಿನಯದ 100ನೇ ಚಿತ್ರ 'ಪುಷ್ಪಕ ವಿಮಾನ' ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಬಿಡುಗಡೆಗೂ ಮುಂಚೆನೇ ಆಸ್ಕರ್ ಪ್ರಶಸ್ತಿ ಮೇಲೆ ಕಣ್ಣೀಟ್ಟಿದೆ. ಹೌದು, ಕನ್ನಡದ ಈ ಚಿತ್ರ 'ಅತ್ಯುತ್ತಮ ವಿದೇಶಿ ಭಾಷಾ ಅಳವಡಿತ ಚಿತ್ರಕಥೆ' ಗುಂಪಿನಲ್ಲಿ ಆಸ್ಕರ್ ರೇಸ್ ನಲ್ಲಿ ಸ್ಪರ್ಧಿಸಲಿದೆಯಂತೆ.

ನವ ನಿರ್ದೇಶಕ ಎಸ್.ರವೀಂದ್ರನಾಥ್ ಅವರ ಚೊಚ್ಚಲ ನಿರ್ದೇಶನದ 'ಪುಷ್ಪಕ ವಿಮಾನ' ಚಿತ್ರವನ್ನು ಆಸ್ಕರ್ ಗೆ ನಾಮನಿರ್ದೇಶನ ಮಾಡುವ ಪ್ರಚಾರ ಕಾರ್ಯವನ್ನು 'ಹಿಂದಿವುಡ್ ಸಂಸ್ಥೆ' ಒಪ್ಪಿಕೊಂಡಿದೆಯಂತೆ.['ಪುಷ್ಪಕ ವಿಮಾನ' ರೀಮೇಕ್ ಸಿನಿಮಾನಾ? ಕ್ಲಾರಿಟಿ ಇಲ್ಲಿದೆ!]

Pushpaka Vimana will goes to Oscars

ಮಾರ್ಚ್ ನಲ್ಲಿ ಆಸ್ಕರ್ ಮೊದಲ ಸುತ್ತಿನ ಸ್ಪರ್ಧೆಗೆ ಚಿತ್ರವನ್ನು ಕಳುಹಿಸಲು ನಿರ್ಧರಿಸಿದ್ದು, ನ್ಯೂಯಾರ್ಕ್ ನಲ್ಲಿ ಚಿತ್ರದ ಸೆನ್ಸಾರ್ ಮಾಡಿ ನಂತರ ಚಿತ್ರದ ವಿಶೇಷ ಪ್ರದರ್ಶನವನ್ನು ಮಾಡಲು ಯೋಚಿಸಲಾಗಿದೆ. ಇನ್ನೂ ಚಿತ್ರದ ಪ್ರಚಾರ ಮತ್ತು ಇನ್ನಿತರ ಕೆಲಸಗಳಿಗಾಗಿ ಸುಮಾರು 20 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಇದೆಲ್ಲವನ್ನು 'ಹಿಂದಿವುಡ್ ಸಂಸ್ಥೆ' ನೋಡಿಕೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕರಲ್ಲೊಬ್ಬರಾದ ವಿಖ್ಯಾತ್ ತಿಳಿಸಿದ್ದಾರೆ.[ಯು-ಪ್ರಮಾಣ ಪತ್ರ ಪಡೆದ 'ಪುಷ್ಪಕ ವಿಮಾನ: ರಿಲೀಸ್ ಗೆ ದಿನಗಣನೆ]

ಚಿತ್ರದಲ್ಲಿ ರಮೇಶ್ ಅರವಿಂದ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮೇಶ್ ಅವರಿಗೆ ಮಗಳಾಗಿ ಯುವಿನ ಪಾರ್ಥವಿ ಕಾಣಿಸಿಕೊಂಡಿದ್ದು, ರಚಿತ ರಾಮ್ ಮತ್ತು ಜೂಹಿ ಚಾವ್ಲ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ.

English summary
Ramesh Aravind’s 100th film 'Pushapaka Vimana' lateral entry into the Oscars this year for the ‘The best adapted screenplay in foreign language’ category. the movie Directed by S Ravindranath and also featured Rachitha ram and baby yuvina.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada