For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ'ಗೆ ಬಲಿಯಾಯ್ತು ಕನ್ನಡ ಚಿತ್ರ: ಇದು ನಿರ್ದೇಶಕರ ನೋವಿನ 'ರಾಗ'

  By Bharath Kumar
  |

  'ಕನ್ನಡ ಸಿನಿಮಾಗಳನ್ನ ಉಳಿಸಿ, ಕನ್ನಡ ಸಿನಿಮಾ ರಂಗವನ್ನ ಬೆಳಸಿ' ಎಂದು ಬರಿ ಮಾತಿನಲ್ಲಿ ಹೇಳುವವರು ಕಮ್ಮಿಯಿಲ್ಲ. ಆದ್ರೆ, ಕಣ್ಮುಂದೆ ಕನ್ನಡ ಚಿತ್ರಕ್ಕೊಂದು ಅನ್ಯಾಯವಾಗುತ್ತಿದ್ದರೂ ಯಾರೊಬ್ಬರು ಕೆಮ್ಮುತ್ತಿಲ್ಲ. ಇಂತಹ ಅಸಹಾಯಕ ಪರಿಸ್ಥಿತಿಯ ಮಧ್ಯೆ ಕನ್ನಡ ನಿರ್ದೇಶಕ ಪಿ.ಸಿ.ಶೇಖರ್ ತಮ್ಮ ಅಳಲನ್ನ ವಿಡಿಯೋ ಮೂಲಕ ಹೊರ ಹಾಕಿದ್ದಾರೆ.['ರಾಗ' ಚಿತ್ರ ಎತ್ತಂಗಡಿ: ನಟ-ನಿರ್ಮಾಪಕ ಮಿತ್ರ ಆಸ್ಪತ್ರೆಗೆ ದಾಖಲು!]

  ತೆಲುಗು ಮೆಗಾಮೂವಿ 'ಬಾಹುಬಲಿ' ಚಿತ್ರದ ಬಿಡಗಡೆಗೆ ದಾರಿ ಮಾಡಿಕೊಡಲು ಕನ್ನಡ ಸಿನಿಮಾಗಳನ್ನ ಎತ್ತಂಗಡಿ ಮಾಡಲಾಗುತ್ತಿದೆ. ಬಿಡುಗೆಯಾಗಿ ಒಂದೇ ವಾರದಲ್ಲೇ ಚಿತ್ರಮಂದಿಗಳಿಂದ ಕೋಕ್ ನೀಡುತ್ತಿದ್ದಾರೆ. 'ರಾಗ' ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ, ಪ್ರೇಕ್ಷಕರು, ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದರೂ ಸಿನಿಮಾ ಎತ್ತಂಗಡಿ ಆಗುತ್ತಿದೆ ಎಂದು ಕನ್ನಡ ಚಿತ್ರರಂಗದ ಪರಿಸ್ಥಿತಿಯನ್ನ ಎತ್ತು ತೋರಿಸುತ್ತಿದ್ದಾರೆ. 'ರಾಗ' ಚಿತ್ರದ ನಿರ್ದೇಶಕ ಪಿ.ಸಿ ಶೇಖರ್ ಏನು ಹೇಳಿದ್ದಾರೆ ಅಂತ ಮುಂದೆ ಓದಿ......

  ಅಪ್ಪಟ ಕನ್ನಡ ಸಿನಿಮಾಗೆ ಅನ್ಯಾಯ!

  ಅಪ್ಪಟ ಕನ್ನಡ ಸಿನಿಮಾಗೆ ಅನ್ಯಾಯ!

  ಪಿ.ಸಿ.ಶೇಖರ್ ನಿರ್ದೇಶನ ಹಾಗೂ ಮಿತ್ರ ನಟಿಸಿರುವ ರಾಗ, ಅಪ್ಪಟ ಕನ್ನಡ ಸಿನಿಮಾ. ಯಾವುದೇ ರೀಮೇಕ್ ಚಿತ್ರವಲ್ಲ. ಯಾವುದು ಡಬಲ್ ಮೀನಿಂಗ್ ಡೈಲಾಗ್ ಇಲ್ಲ. ಅಸಹ್ಯ ಹುಟ್ಟಿಸುವ ದೃಶ್ಯಗಳಿಲ್ಲ. ಅದ್ಭುತ ಸಂಗೀತ, ಮೋಹಕವಾದ ಕ್ಯಾಮರಾ ವರ್ಕ್. ಗಮನ ಸೆಳೆಯುವಂತಹ ನಟನೆ. ಹೀಗಿದ್ದರೂ ಒಂದೇ ವಾರದಲ್ಲಿ ಚಿತ್ರಮಂದಿರದಿಂದ ಎತ್ತಂಗಡಿಯಾಗುತ್ತಿದೆ ಎಂಬ ಬೇಸರವನ್ನ ಹೊರ ಹಾಕಿದ್ದಾರೆ.[ಏಪ್ರಿಲ್ 28ರಿಂದ ಆಂಧ್ರ, ತೆಲಂಗಾಣ ಆಗಿ ಬದಲಾಗಲಿದೆ ಕನ್ನಡದ ಗಾಂಧಿನಗರ.!]

  ಥಿಯೇಟರ್ ಅವರನ್ನ ಕೇಳಿದ್ರೆ ಕಥೆ ಹೇಳ್ತಾರೆ!

  ಥಿಯೇಟರ್ ಅವರನ್ನ ಕೇಳಿದ್ರೆ ಕಥೆ ಹೇಳ್ತಾರೆ!

  ''ರಾಗ ಚಿತ್ರಕ್ಕೆ ಒಂದೇ ಒಂದು ಶೋ ಆದ್ರು ಚಿತ್ರಮಂದಿರದಲ್ಲಿ ಅವಕಾಶ ಕೊಡಿ ಅಂತ ಕೇಳೋಕೆ ನಿರ್ದೇಶಕರು ಫೋನ್ ಮಾಡಿದ್ರೆ, '' ಬಾಹುಬಲಿ ಸಿನಿಮಾ ಬರ್ತಿದೆ. ನಿಮ್ಮದು ಚಿಕ್ಕ ಸಿನಿಮಾ, ಕಲೆಕ್ಷನ್ ಕಮ್ಮಿ. ಮಿತ್ರ ಅವರು ಕಾಮಿಡಿ ನಟರು, ಯಾರು ಥಿಯೇಟರ್ ಗೆ ಬರಲ್ಲ ಅಂತಾರೆ'' ಎಂದು ತಮ್ಮ ಅಸಹಾಯಕತೆಯನ್ನ ಹೇಳಿಕೊಂಡಿದ್ದಾರೆ.['ಕನ್ನಡದಲ್ಲಿ ಬಾಹುಬಲಿ'ಗಾಗಿ ಮತ್ತೆ ಜೋರಾಗಿದೆ ಕೂಗು]

  ಹಣಕ್ಕಾಗಿ ಸಿನಿಮಾ ಮಾಡಿಲ್ಲ!

  ಹಣಕ್ಕಾಗಿ ಸಿನಿಮಾ ಮಾಡಿಲ್ಲ!

  'ರಾಗ' ಚಿತ್ರವನ್ನ ಹಣಕ್ಕಾಗಿ ಮಾಡಿಲ್ಲ. ಹೆಸರಿಗೊಸ್ಕರ ಮಾಡಿದ್ದೀವಿ. ಕನ್ನಡ ಚಿತ್ರರಂಗವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ನಿರ್ದೇಶಕರಲ್ಲಿ ನಾನು ಒಬ್ಬ. ಹಾಗಿದ್ದರೂ, ನನ್ನ ಸಿನಿಮಾಗೆ ಒಂದು ಶೋನು ಸಿಕ್ತಿಲ್ಲ'' ಎಂದು ಅಳಲನ್ನ ತೋಡಿಕೊಂಡಿದ್ದಾರೆ.[ಬೆಂಗಳೂರಿನಲ್ಲಿ 'ಬಾಹುಬಲಿ-2' ಚಿತ್ರಕ್ಕೆ ಡಿಮ್ಯಾಂಡ್ ಎಷ್ಟಿದೆ ಗೊತ್ತಾ..?]

  ಕರ್ನಾಟಕದಲ್ಲೇ ಕನ್ನಡ ಚಿತ್ರಕ್ಕೆ ಶೋ ಇಲ್ಲ!

  ಕರ್ನಾಟಕದಲ್ಲೇ ಕನ್ನಡ ಚಿತ್ರಕ್ಕೆ ಶೋ ಇಲ್ಲ!

  ದುರಂತ ಅಂದ್ರೆ ಕರ್ನಾಟಕದಲ್ಲೇ ಕನ್ನಡ ಚಿತ್ರಕ್ಕೆ ಶೋ ಇಲ್ಲ. ಪರಭಾಷೆ ಚಿತ್ರಕ್ಕೆ ನೀಡುವ ಅವಕಾಶಗಳಲ್ಲಿ, ಒಂದು ಸಣ್ಣ ಮಟ್ಟದಾದ ಅವಕಾಶ ಕನ್ನಡ ಸಿನಿಮಾಗಳಿಗೆ ಸಿಗದೆ ಇರುವುದು ಕನ್ನಡ ಚಿತ್ರಗಳ ಬಹುದೊಡ್ಡ ಸವಾಲಾಗಿದೆ.

  ನಟ ಮಿತ್ರ ಆಸ್ಪತ್ರೆಗೆ ದಾಖಲಾಗಿದ್ದರು

  ನಟ ಮಿತ್ರ ಆಸ್ಪತ್ರೆಗೆ ದಾಖಲಾಗಿದ್ದರು

  'ರಾಗ' ಚಿತ್ರವನ್ನ ಚಿತ್ರಮಂದಿರದಿಂದ ತೆಗೆಯುತ್ತಿರುವ ಸುದ್ದಿಯನ್ನ ಕೇಳಿದ ನಟ, ನಿರ್ಮಾಪಕ ಮಿತ್ರ ಅವರು ರಕ್ತದೊತ್ತಡ ಹೆಚ್ಚಾಗಿ ಆಘಾತಕ್ಕೊಳಗಾದರು. ತಕ್ಷಣ ಅವರನ್ನ ನಾಗದೇವನಹಳ್ಳಿಯ ಶಿವಶಕ್ತಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ, ಮಿತ್ರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ತಿಳಿದುಬಂದಿದೆ.['ರಾಗ' ಚಿತ್ರ ಎತ್ತಂಗಡಿ: ನಟ-ನಿರ್ಮಾಪಕ ಮಿತ್ರ ಆಸ್ಪತ್ರೆಗೆ ದಾಖಲು!]

  6 ಸಿನಿಮಾ ನಿರ್ದೇಶನ ಮಾಡಿದ್ದರೂ ಪರಿಚಯ ಬೇಕೆ?

  6 ಸಿನಿಮಾ ನಿರ್ದೇಶನ ಮಾಡಿದ್ದರೂ ಪರಿಚಯ ಬೇಕೆ?

  'ನಾಯಕ', 'ರೋಮಿಯೋ', 'ಅರ್ಜುನ', 'ಚಡ್ಡಿದೋಸ್ತ್', 'ಸ್ಟೈಲ್ ಕಿಂಗ್', 'ರಾಗ' ಸೇರಿ ಇದುವರೆಗೂ 6 ಸಿನಿಮಾಗಳನ್ನ ನಿರ್ದೇಶನ ಮಾಡಿದ್ದರೂ ಕನ್ನಡ ಇಂಡಸ್ಟ್ರಿಯಲ್ಲಿ ಗುರುತಿಸುತ್ತಿಲ್ಲ ಎಂದು ನಿರ್ದೇಶಕರು ತೀರಾ ದುಃಖಕ್ಕೊಳಗಾಗಿದ್ದಾರೆ.[ಕನ್ನಡಿಗರ ಹೋರಾಟಕ್ಕೆ ಸಂದ ಜಯ: ಕಡೆಗೂ ತಲೆಬಾಗಿದ ಕಟ್ಟಪ್ಪ.!]

  English summary
  Raaga Movie Director PC Shekar Expressed his Boredom Against Kannada Film Industry in Facebook.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X