For Quick Alerts
  ALLOW NOTIFICATIONS  
  For Daily Alerts

  2022ರಲ್ಲಿ ಮಿಂಚಿದ ಹೊಸ ನಟಿಯರು; ರಚಿತಾ, ಆಶಿಕಾಗೆ ಸಿಗಲಿಲ್ಲ ಒಂದೇ ಒಂದು ಹಿಟ್!

  By ಫಿಲ್ಮಿಬೀಟ್ ಡೆಸ್ಕ್
  |

  2022 ಕನ್ನಡ ಚಿತ್ರರಂಗದ ಪಾಲಿಗೆ ಗೋಲ್ಡನ್ ಇಯರ್ ಆಗಿದೆ. ಈ ವರ್ಷ ಬಿಡುಗಡೆಗೊಂಡ ಹಲವಾರು ಕನ್ನಡ ಚಿತ್ರಗಳು ಗೆದ್ದು ಬೀಗಿವೆ. ಜೇಮ್ಸ್, ಕೆಜಿಎಫ್ ಚಾಪ್ಟರ್ 2, ವಿಕ್ರಾಂತ್ ರೋಣ, 777 ಚಾರ್ಲಿ ಹಾಗೂ ಕಾಂತಾರ ಈ ಐದೂ ಚಿತ್ರಗಳೂ ಸಹ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿಗಿಂತ ಅಧಿಕ ಹಣ ಗಳಿಸಿ ಅಬ್ಬರಿಸಿವೆ.

  ಈ ಪೈಕಿ ಕೆಜಿಎಫ್ ಚಾಪ್ಟರ್ 2, ಕಾಂತಾರ ಹಾಗೂ 777 ಚಾರ್ಲಿ ಚಿತ್ರಗಳು ಈ ವರ್ಷ ಐಎಂಡಿಬಿ ಬಿಡುಗಡೆಗೊಳಿಸಿದ ಜನಪ್ರಿಯ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಹೀಗೆ ಕನ್ನಡ ಚಿತ್ರರಂಗ ಈ ವರ್ಷ ಇತರೆ ಚಿತ್ರರಂಗಗಳಿಗಿಂತ ದೊಡ್ಡ ಯಶಸ್ಸನ್ನು ಪಡೆದುಕೊಂಡಿದ್ದರೆ, ಕೆಲ ಚಿತ್ರಗಳು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿ ಸೋತು ಮಕಾಡೆ ಮಲಗಿದ್ದೂ ಇದೆ.

  ಇನ್ನು ನಟರ ವಿಚಾರಕ್ಕೆ ಬಂದರೆ ಈ ವರ್ಷ ಬಿಡುಗಡೆಯಾದ ಸ್ಟಾರ್ ನಟರಾದ ಪುನೀತ್ ರಾಜ್‌ಕುಮಾರ್ ಅವರ ಎಲ್ಲಾ ಚಿತ್ರಗಳೂ ಹಿಟ್ ಆಗಿವೆ. ಯಶ್ ಚಿತ್ರ ಇಡೀ ಭಾರತದಲ್ಲೇ ಅತಿಹೆಚ್ಚು ಗಳಿಸಿದ ಚಿತ್ರ ಎನಿಸಿಕೊಂಡಿದೆ. ಸುದೀಪ್ ಅವರ ವಿಕ್ರಾಂತ್ ರೋಣ ಸಹ ನೂರು ಕೋಟಿ ಕ್ಲಬ್ ಸೇರಿದೆ. ರಿಷಬ್ ಹಾಗೂ ರಕ್ಷಿತ್ ಶೆಟ್ಟಿ ಸಹ ಗೆದ್ದಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಗಾಳಿಪಟ 2 ಮೂಲಕ ಗೆದ್ದು ತ್ರಿಬಲ್ ರೈಡಿಂಗ್‌ನಲ್ಲಿ ಸೋತಿದ್ದಾರೆ. ಇನ್ನು ನಟಿಯರ ವಿಚಾರಕ್ಕೆ ಬಂದರೆ ಈ ವರ್ಷ ಸಾಮಾಜಿಕ ಜಾಲತಾಣದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿರುವ ನಟಿಯರ ಚಿತ್ರಗಳು ಮಕಾಡೆ ಮಲಗಿದ್ದು, ಯುವ ನಟಿಯರ ಚಿತ್ರಗಳು ಗೆದ್ದು ಬೀಗಿವೆ. ಹಾಗಿದ್ದರೆ ಈ ವರ್ಷ ಗೆದ್ದ ನಟಿಯರು ಯಾರು ಹಾಗೂ ಸೋತ ಫೇಮಸ್ ನಟಿಯರು ಯಾರು ಎಂಬ ಮಾಹಿತಿ ಈ ಕೆಳಕಂಡಂತಿದೆ..

  ಹೊಸಬರ ಹಾವಳಿ

  ಹೊಸಬರ ಹಾವಳಿ

  ಈ ವರ್ಷ ಯುವ ನಟಿಯರು ನಟಿಸಿದ ಚಿತ್ರಗಳೇ ಹೆಚ್ಚಾಗಿ ಗೆದ್ದಿವೆ. ಈ ಹಿಂದೆ ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ನಟಿಸಿದ್ದ ಸಪ್ತಮಿ ಗೌಡ ಈ ವರ್ಷ ಕಾಂತಾರ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡು ಗೆದ್ದಿದ್ದಾರೆ ಹಾಗೂ ನಟಿಗೆ ಬೃಹತ್ ಬೇಡಿಕೆ ಹುಟ್ಟಿಕೊಂಡಿದೆ. ಇದೇ ರೀತಿ ರಿಷಬ್ ಶೆಟ್ಟಿ ನಟನೆಯ ಹೀರೋ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಗಾನವಿ ಲಕ್ಷ್ಮಣ್ ಈ ವರ್ಷ ವೇದ ಮೂಲಕ ಬೃಹತ್ ಗೆಲುವು ಕಂಡಿದ್ದಾರೆ. ಈ ಇಬ್ಬರೂ ನಟಿಯರು ಈ ವರ್ಷ ನಿರ್ವಹಿಸಿದ್ದು ಪಕ್ಕಾ ಹಳ್ಳಿ ಹುಡುಗಿ ಪಾತ್ರಗಳು. ಈ ಮೂಲಕ ನಟಿಯರು ದೊಡ್ಡ ಗೆಲುವು ಸಾಧಿಸಲು ಗ್ಲಾಮರಸ್ ಪಾತ್ರಗಳನ್ನು ಮಾಡಬೇಕು ಎಂಬುದನ್ನು ಹುಸಿಗೊಳಿಸಿದ್ದಾರೆ.

  ರಚಿತಾಗಿಲ್ಲ ಹಿಟ್

  ರಚಿತಾಗಿಲ್ಲ ಹಿಟ್

  ಕನ್ನಡ ಚಿತ್ರರಂಗದಲ್ಲಿ ಸದ್ಯ ಫೇಮಸ್ ನಟಿಯರು ಎಂಬ ವಿಷಯ ಕೇಳಿದರೆ ಎಲ್ಲರಿಗೂ ನೆನಪಾಗುವ ಇಬ್ಬರು ನಟಿಯರೆಂದರೆ ಅದು ಆಶಿಕಾ ರಂಗನಾಥ್ ಹಾಗೂ ರಚಿತಾ ರಾಮ್. ಈ ಇಬ್ಬರೂ ನಟಿಯರೂ ಸಹ ಈ ವರ್ಷ ಹಿಟ್ ಸಿಗಲಾರದೇ ಹಿನ್ನಡೆ ಅನುಭವಿಸಿದ್ದಾರೆ. ಇದೇ ವರ್ಷ ಇಬ್ಬರೂ ಪರಭಾಷಾ ಚಿತ್ರರಂಗಗಳ ಪ್ರವೇಶ ಮಾಡಿದರಾದರೂ ಅಲ್ಲಿ ಸಿಕ್ಕಿದ್ದು ಮಾತ್ರ ಹೀನಾಯ ಸೋಲು. ರಚಿತಾ ರಾಮ್ ನಟನೆಯ ಏಕ್ ಲವ್ ಯಾ, ಮಾನ್ಸೂನ್ ರಾಗ ಚಿತ್ರಗಳು ಸೋತವು. ಸೂಪರ್ ಮಚ್ಚಿ ಎಂಬ ತೆಲುಗು ಚಿತ್ರದಲ್ಲಿ ರಚಿತಾ ರಾಮ್ ನಟಿಸಿದ್ದರಾದರೂ ಚಿತ್ರ ಮಕಾಡೆ ಮಲಗಿತ್ತು. ಹಾಗೆ ನೋಡುವುದಾದರೆ ನಟಸಾರ್ವಭೌಮ ಬಳಿಕ ರಚಿತಾ ರಾಮ್ ನಟನೆಯ ಯಾವ ಚಿತ್ರವೂ ಅಬ್ಬರಿಸಿಲ್ಲ. ಮುಂದಿನ ವರ್ಷ ತೆರೆ ಕಾಣುವ ಕ್ರಾಂತಿ ಚಿತ್ರದ ಮೇಲೆ ಸದ್ಯ ನಿರೀಕ್ಷೆ ಇದ್ದು, ಈ ಚಿತ್ರ ರಚಿತಾಗೆ ಹಿಟ್ ತಂದುಕೊಡುತ್ತಾ ಕಾದು ನೋಡಬೇಕಿದೆ.

  ಆಶಿಕಾ ಕೈಹಿಡಿಯಲಿಲ್ಲ 2022

  ಆಶಿಕಾ ಕೈಹಿಡಿಯಲಿಲ್ಲ 2022

  ಮೊದಲೇ ಹೇಳಿದ ಹಾಗೆ ರಚಿತಾ ಬಿಟ್ಟರೆ ಕನ್ನಡ ಚಲನಚಿತ್ರರಂಗದಲ್ಲಿ ಹೆಚ್ಚಾಗಿ ಕೇಳಿಬರುವ ನಟಿಯ ಹೆಸರು ಆಶಿಕಾ ರಂಗನಾಥ್ ಅವರದ್ದು. ಇನ್ನೂ ಸಹ ಕನ್ನಡದ ಯಾವ ದೊಡ್ಡ ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗದ ಆಶಿಕಾ ನಟನೆಯ ಈ ವರ್ಷದ ಚಿತ್ರಗಳು ಸೋತಿವೆ. ಅವತಾರ ಪುರುಷ, ಗರುಡ, ಕಾಣೆಯಾದವರ ಬಗ್ಗೆ ಪ್ರಕಟಣೆ ಹಾಗೂ ರೇಮೊ ಚಿತ್ರಗಳು ಸೋತವು. ಇನ್ನು ಪಟ್ಟದು ಅರಸನ್ ಎಂಬ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಆಶಿಕಾ ಮೊದಲ ಚಿತ್ರದಲ್ಲೇ ಸೋಲನ್ನು ಕಂಡಿದ್ದಾರೆ.

  English summary
  Rachita Ram and Ashika Ranganath failed to get a single hit film in 2022. Read on
  Friday, December 30, 2022, 11:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X