»   » ರಾಧಿಕಾ ಕುಮಾರಸ್ವಾಮಿ ಈಗ 'ಭೈರಾ ದೇವಿ': ಸದ್ದಿಲ್ಲದೆ ಮುಗಿದಿದೆ ಮುಹೂರ್ತ

ರಾಧಿಕಾ ಕುಮಾರಸ್ವಾಮಿ ಈಗ 'ಭೈರಾ ದೇವಿ': ಸದ್ದಿಲ್ಲದೆ ಮುಗಿದಿದೆ ಮುಹೂರ್ತ

Posted By:
Subscribe to Filmibeat Kannada
ರಾಧಿಕಾ ಕುಮಾರಸ್ವಾಮಿ ಅವರ ಮುಂದಿನ ಚಿತ್ರದ ಮುಹೂರ್ತ ಸದ್ದಿಲ್ಲದೆ ಮುಗಿದಿದೆ | Filmibeat Kannada

ಲಾಂಗ್ ಗ್ಯಾಪ್ ನಂತರ ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ರಾಧಿಕಾ ಕುಮಾರಸ್ವಾಮಿ 'ಸ್ವೀಟಿ' ಹಾಗೂ 'ರುದ್ರತಾಂಡವ' ಚಿತ್ರಗಳ ಮೂಲಕ ಮತ್ತೆ ಪ್ರೇಕ್ಷಕರ ಮನಗೆದ್ದರು.

'ಕಾಂಟ್ರ್ಯಾಕ್ಟ್', 'ರಾಜೇಂದ್ರ ಪೊನ್ನಪ್ಪ', 'ನಮಗಾಗಿ' ಚಿತ್ರಗಳ ಶೂಟಿಂಗ್ ನಲ್ಲಿ ಬಿಜಿಯಾಗಿರುವ ರಾಧಿಕಾ ಕುಮಾರಸ್ವಾಮಿ ಗ್ರೀನ್ ಸಿಗ್ನಲ್ ನೀಡಿರುವ ಹೊಸ ಚಿತ್ರದ ಮುಹೂರ್ತ ಸಮಾರಂಭ ಇಂದು ಸದ್ದಿಲ್ಲದೇ, ಸುದ್ದಿ ಮಾಡದೇ ಮುಗಿದು ಹೋಗಿದೆ.

ಹೌದು, ರಾಧಿಕಾ ಕುಮಾರಸ್ವಾಮಿ ಅಭಿನಯಿಸಲಿರುವ 'ಭೈರಾ ದೇವಿ' ಚಿತ್ರದ ಮುಹೂರ್ತ ಸಮಾರಂಭ ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ದೇವಸ್ಥಾನವೊಂದರಲ್ಲಿ ನಡೆದಿದೆ.

Radhika Kumaraswamy starrer 'Bhaira Devi' started today

'ಭೈರಾ ದೇವಿ' ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಜೊತೆಗೆ ರಮೇಶ್ ಅರವಿಂದ್ ಕೂಡ ಮುಖ್ಯಭೂಮಿಕೆಯಲ್ಲಿದ್ದಾರೆ. ಮೂರು ಭಾಷೆಗಳಲ್ಲಿ ಈ ಚಿತ್ರ ತಯಾರಾಗಲಿದ್ಯಂತೆ.

ಈ ಹಿಂದೆ ದುನಿಯಾ ವಿಜಯ್ ಅಭಿನಯದ 'ಆರ್.ಎಕ್ಸ್.ಸೂರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಶ್ರೀಜೈ, 'ಭೈರಾ ದೇವಿ' ಚಿತ್ರದ ನಿರ್ದೇಶಕ.

ಅಂದ್ಹಾಗೆ, 'ಭೈರಾ ದೇವಿ' ಚಿತ್ರದ ಕಥೆ ಏನು.? ಇದು ದೈವ ಶಕ್ತಿ ಹಾಗೂ ದುಷ್ಟ ಶಕ್ತಿ ನಡುವಿನ ಕಥೆ ಹೊಂದಿದ್ಯಾ.? ಎಂಬುದರ ಬಗ್ಗೆ ಕ್ಲಾರಿಟಿ ಇಲ್ಲ. ಯಾಕಂದ್ರೆ, ನಿರ್ದೇಶಕ ಶ್ರೀಜೈ ಇನ್ನೂ 'ಭೈರಾ ದೇವಿ' ಬಗ್ಗೆ ತುಟಿ ಎರಡು ಮಾಡಿಲ್ಲ.

'ಭೈರಾ ದೇವಿ' ಬಗ್ಗೆ ಹೆಚ್ಚಿನ ಮಾಹಿತಿ ಕೊಡ್ತಾಯಿರ್ತೀವಿ, ಫಿಲ್ಮಿಬೀಟ್ ಕನ್ನಡ ಓದ್ತಾಯಿರಿ..

English summary
Kannada Actress Radhika Kumaraswamy and Ramesh Aravind starrer 'Bhaira Devi' muhoortha was held at a temple today (Feb 12th) in Chamarajpet, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada