»   » ನಟನೆಗೆ ಗುಡ್ ಬೈ ಹೇಳ್ತಾರಂತೆ ನಟಿ ರಾಧಿಕಾ ಕುಮಾರಸ್ವಾಮಿ.!

ನಟನೆಗೆ ಗುಡ್ ಬೈ ಹೇಳ್ತಾರಂತೆ ನಟಿ ರಾಧಿಕಾ ಕುಮಾರಸ್ವಾಮಿ.!

Posted By:
Subscribe to Filmibeat Kannada

ನಟಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಇತ್ತೀಚೆಗೆ ಅಂತೆ-ಕಂತೆ ಸುದ್ದಿಗಳೇ ಹೆಚ್ಚಾಗಿವೆ. ಮೊದಲು ಅವರ ವೈಯುಕ್ತಿಕ ಜೀವನದ ಬಗ್ಗೆ, ನಂತರ ಅವರ ಸಿನಿಮಾ ಕೆರಿಯರ್ ಬಗ್ಗೆ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ವೆರೈಟಿ ವೆರೈಟಿ ಗಾಸಿಪ್ ಗಳು ಹರಿದಾಡಿದವು.

ಈಗ ಅವರ ವೃತ್ತಿ ಜೀವನದ ಬಗ್ಗೆ ಹೊಸ ಬ್ರೇಕಿಂಗ್ ನ್ಯೂಸ್ ಬಂದಿದೆ. ರಾಧಿಕಾ ಕುಮಾರಸ್ವಾಮಿ ರವರ ಕಟ್ಟಾ ಅಭಿಮಾನಿಗಳು ಈ ಸುದ್ದಿ ಕೇಳಿದ್ರೆ, ಹಾರ್ಟ್ ಬ್ರೇಕ್ ಆಗುವುದು ಗ್ಯಾರೆಂಟಿ. [ನಟಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಹಬ್ಬಿದ ಗಾಸಿಪ್ ಸುಳ್ಳು!]

ಆ ಸುದ್ದಿ ಏನು ಅಂತ ಹೇಳ್ತೀವಿ, ನೀವು ರಾಧಿಕಾ ಕುಮಾರಸ್ವಾಮಿ ಅವರ ಫ್ಯಾನ್ ಆಗಿದ್ರೆ ಸ್ವಲ್ಪ ಸಮಾಧಾನ ಚಿತ್ತದಿಂದ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

ರಾಧಿಕಾ ಕುಮಾರಸ್ವಾಮಿ ಬಗ್ಗೆ ಸುದ್ದಿ ಸ್ಫೋಟ

ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ 'ನಮಗಾಗಿ' ಸಿನಿಮಾದಲ್ಲಿ ಅಭಿನಯಿಸುತ್ತಿರುವ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ಸದ್ಯಕ್ಕೆ ಶೂಟಿಂಗ್ ಗೆ ಹಾಜರಾಗದ ರಾಧಿಕಾ ಕುಮಾರಸ್ವಾಮಿ ಬಗ್ಗೆ 'ನಮಗಾಗಿ' ಚಿತ್ರತಂಡದಿಂದಲೇ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಅದೇನು ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

ಬಣ್ಣದ ಬದುಕಿಗೆ ರಾಧಿಕಾ ಕುಮಾರಸ್ವಾಮಿ ಗುಡ್ ಬೈ?!

ನೀವು ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ...'ನಮಗಾಗಿ' ಚಿತ್ರತಂಡದಿಂದ ಬಂದಿರುವ ಮಾಹಿತಿ ಪ್ರಕಾರ, ರಾಧಿಕಾ ಕುಮಾರಸ್ವಾಮಿ ನಟಿಸುವ ಕೊನೆಯ ಸಿನಿಮಾ 'ನಮಗಾಗಿ'.! [ರಾಧಿಕಾ ಕುಮಾರಸ್ವಾಮಿ ಬಗ್ಗೆ ಸ್ಫೋಟಗೊಂಡಿರುವ ಸುದ್ದಿ ನಿಜವೇ?]

'ನಮಗಾಗಿ' ನಂತರ ನಟಿಸುವುದಿಲ್ಲ!

'ನಮಗಾಗಿ' ಚಿತ್ರದ ನಿರ್ದೇಶಕ ರಘುರಾಮ್ ರವರಿಗೆ ರಾಧಿಕಾ ಕುಮಾರಸ್ವಾಮಿ ಸಹೋದರ ರವಿ ಹೇಳಿರುವ ಪ್ರಕಾರ, 'ನಮಗಾಗಿ' ಚಿತ್ರದ ನಂತರ ರಾಧಿಕಾ ಕುಮಾರಸ್ವಾಮಿ ನಟಿಸುವುದಿಲ್ಲ! [ರಾಧಿಕಾ ಕುಮಾರಸ್ವಾಮಿ ಬಗ್ಗೆ ನಟಿ ರಮ್ಯಾ ಮಾಡಿದ ಕಾಮೆಂಟ್ ಏನು?]

ಚಿತ್ರರಂಗದಲ್ಲಿ ಇರುತ್ತಾರಾ?

ಸದ್ಯದ ಮಟ್ಟಿಗೆ ನಟನೆಗೆ ಗುಡ್ ಬೈ ಹೇಳಲು ರಾಧಿಕಾ ಕುಮಾರಸ್ವಾಮಿ ನಿರ್ಧರಿಸಿದ್ದಾರಂತೆ. ನಿರ್ಮಾಪಕಿ ಆಗಿ ಮುಂದುವರಿಯುವ ಬಗ್ಗೆ ರಾಧಿಕಾ ಮೇಡಂ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ.

ಇದ್ದಕ್ಕಿದ್ದಂತೆ ನಟನೆಗೆ ಗುಡ್ ಬೈ ಯಾಕೆ?

'ರುದ್ರತಾಂಡವ' ಚಿತ್ರದ ಪ್ರಚಾರದ ವೇಳೆ, 'ನಟಿಸುವುದು ನನಗೆ ಇಷ್ಟ. ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವ ಆಸೆ ಇದೆ' ಅಂತ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದ ರಾಧಿಕಾ ಕುಮಾರಸ್ವಾಮಿ ಇದ್ದಕ್ಕಿದ್ದ ಹಾಗೆ ನಟನೆಗೆ ಗುಡ್ ಬೈ ಹೇಳಲು ಕಾರಣವೇನು ಅನ್ನೋದು ಮಾತ್ರ ತಿಳಿದುಬಂದಿಲ್ಲ.

'ನಿನಗಾಗಿ' ಇಂದ 'ನಮಗಾಗಿ'.!

ರಾಧಿಕಾ ಕುಮಾರಸ್ವಾಮಿ ಹಾಗೂ ವಿಜಯ್ ರಾಘವೇಂದ್ರ ಅಭಿನಯಿಸಿದ್ದ 'ನಿನಗಾಗಿ' ಸಿನಿಮಾ 2002ರಲ್ಲಿ ತೆರೆ ಕಂಡಿತ್ತು. ಚಿತ್ರ ಸೂಪರ್ ಹಿಟ್ ಆಗಿತ್ತು. ಇದೀಗ ಅದೇ ವಿಜಯ್ ರಾಘವೇಂದ್ರ ಜೊತೆ ರಾಧಿಕಾ ಕುಮಾರಸ್ವಾಮಿ ಅಭಿನಯಿಸುತ್ತಿರುವ 'ನಮಗಾಗಿ' ಚಿತ್ರದ ಮೂಲಕ ಸಿನಿ ಜರ್ನಿಗೆ ಫುಲ್ ಸ್ಟಾಪ್ ಇಡುವ ತೀರ್ಮಾನ ಮಾಡಿದ್ದಾರೆ ರಾಧಿಕಾ ಕುಮಾರಸ್ವಾಮಿ.

ರಾಧಿಕಾ ಮನಸ್ಸಿನಲ್ಲಿ ಇರುವುದು ಇದೇ.!

''ನಿನಗಾಗಿ' ಇಂದ ಶುರುವಾದ ನನ್ನ ಸಿನಿ ಜರ್ನಿ 'ನಮಗಾಗಿ' ಮೂಲಕ ಉತ್ತಮ ರೀತಿಯಲ್ಲಿ ಶುಭಂ'' ಆಗಬೇಕು ಅಂತ ಆಪ್ತರ ಬಳಿ ರಾಧಿಕಾ ಕುಮಾರಸ್ವಾಮಿ ಹೇಳಿಕೊಂಡಿದ್ದಾರಂತೆ.

ರಘುರಾಮ್ ಏನಂತಾರೆ?

''ನನಗೆ ರಾಧಿಕಾ ಮೇಡಂ ಸಹೋದರ ರವಿ ಅವರು, ''ನಮಗಾಗಿ' ಚಿತ್ರವೇ ರಾಧಿಕಾ ರವರ ಲಾಸ್ಟ್ ಸಿನಿಮಾ'' ಅಂತ ಹೇಳಿದ್ದು ನಿಜ. ಆಕ್ಟಿಂಗ್ ನಲ್ಲಿ 'ನಮಗಾಗಿ' ಲಾಸ್ಟ್ ಆಗಬಹುದು. ನಿರ್ಮಾಪಕಿ ಆಗಿ ಅವರು ಮುಂದುವರಿಯುತ್ತಾರೋ, ಇಲ್ವೋ ಗೊತ್ತಿಲ್ಲ'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ನಿರ್ದೇಶಕ ರಘುರಾಮ್ ಹೇಳಿದರು.

ರಘುರಾಮ್ ಮತ್ತೊಂದು ಪ್ರಾಜೆಕ್ಟ್ ಕೂಡ ಕ್ಲೋಸ್!

ನಟನೆಯಲ್ಲಿ ರಾಧಿಕಾ ಕುಮಾರಸ್ವಾಮಿ ತೋರಿದ ಇಂಟ್ರೆಸ್ಟ್ ನೋಡಿ ನಿರ್ದೇಶಕ ರಘುರಾಮ್ 'ನಮಗಾಗಿ' ನಂತರ ರಾಧಿಕಾ ಕುಮಾರಸ್ವಾಮಿಗಾಗಿ ಮತ್ತೊಂದು ಸಿನಿಮಾ ಮಾಡಲು ಕಥೆ ರೆಡಿ ಮಾಡಿದ್ದರು. ಆದ್ರೀಗ, ''ನಟಿಸುವುದಿಲ್ಲ'' ಅಂತ ರಾಧಿಕಾ ಕುಮಾರಸ್ವಾಮಿ ನಿರ್ಧರಿಸಿರುವ ಕಾರಣ 'ಆ ಚಿತ್ರ ಸೆಟ್ಟೇರುವ ಚಾನ್ಸೇ ಇಲ್ಲ' ಎನ್ನುತ್ತಾರೆ ನಿರ್ದೇಶಕ ರಘುರಾಮ್.

ರಾಧಿಕಾ ಕೈಯಲ್ಲಿದ್ದ ಆಫರ್ಸ್ ಯಾವುದು?

'ನಮಗಾಗಿ' ನಿರ್ದೇಶಕ ರಘುರಾಮ್ ಜೊತೆ ಎರಡು ಚಿತ್ರಗಳು, ನಂದಕಿಶೋರ್ ನಿರ್ದೇಶನದ ಚಿತ್ರಗಳಿಗೂ ರಾಧಿಕಾ ಕುಮಾರಸ್ವಾಮಿ ಗ್ರೀನ್ ಸಿಗ್ನಲ್ ನೀಡಿದ್ದರು. ಆದ್ರೀಗ, ಅಭಿನಯಕ್ಕೆ ಗುಡ್ ಬೈ ಹೇಳಿದ್ದಾರೆ ರಾಧಿಕಾ ಕುಮಾರಸ್ವಾಮಿ.

'ನಮಗಾಗಿ' ಶೂಟಿಂಗ್ ಯಾವಾಗ?

'ನಮಗಾಗಿ' ಚಿತ್ರದ ಶೂಟಿಂಗ್ ತಡವಾಗುತ್ತಿರುವುದಕ್ಕೆ ನಟಿ ರಾಧಿಕಾ ಕುಮಾರಸ್ವಾಮಿ ಕಾರಣ ಅಲ್ಲ. ನಿರ್ಮಾಪಕರು ಹಣ ಪಾವತಿಸದ ಹಿನ್ನಲೆಯಲ್ಲಿ ಶೂಟಿಂಗ್ ಶುರು ಆಗಿಲ್ಲ ಅಷ್ಟೆ.

ಶೂಟಿಂಗ್ ಗೆ ಬರ್ತಾರೆ ರಾಧಿಕಾ ಮೇಡಂ

ನಿರ್ಮಾಪಕ ವೇಣುಗೋಪಾಲ್ ದುಡ್ಡು ಹೊಂದಿಸಿಕೊಂಡು ಶೂಟಿಂಗ್ ಗೆ ಚಾಲನೆ ನೀಡಿದ ಕೂಡಲೆ ರಾಧಿಕಾ ಕುಮಾರಸ್ವಾಮಿ ಲೋಕೇಷನ್ ಗೆ ಆಗಮಿಸುವುದು ಪಕ್ಕಾ ಆಗಿದೆ.

'ನಮಗಾಗಿ'ಗೆ ನಿರ್ಮಾಪಕಿ ಆಗ್ಬೇಕಿತ್ತು ರಾಧಿಕಾ!

ನಿರ್ಮಾಪಕರು ಆರ್ಥಿಕ ಸಂಕಷ್ಟದಲ್ಲಿದ್ದ ಕಾರಣ, 'ನಮಗಾಗಿ' ಚಿತ್ರಕ್ಕೆ ಬಂಡವಾಳ ಹಾಕುವುದಾಗಿ ರಾಧಿಕಾ ಕುಮಾರಸ್ವಾಮಿ ಮುಂದೆ ಬಂದಿದ್ದರು. ಆದ್ರೆ, ನಿರ್ಮಾಪಕ ವೇಣುಗೋಪಾಲ್ ತಾವೇ ನಿರ್ಮಾಣ ಮಾಡುವುದಾಗಿ ಹೇಳಿದ್ದರಿಂದ ರಾಧಿಕಾ ಕುಮಾರಸ್ವಾಮಿ ಬರೀ ನಟನೆಗೆ ಮಾತ್ರ ಈಗ ಸೀಮಿತವಾಗಿದ್ದಾರೆ.

ಈಗೆಲ್ಲಿದ್ದಾರೆ ರಾಧಿಕಾ ಮೇಡಂ?

ಮೂಲಗಳ ಪ್ರಕಾರ, ರಾಧಿಕಾ ಕುಮಾರಸ್ವಾಮಿ ಬೆಂಗಳೂರಿನಲ್ಲೇ ಇದ್ದಾರೆ. ಆಗಾಗ ಮಂಗಳೂರಿಗೆ ಹೋಗಿ ಬರ್ತಾರೆ. ಯಾರ ಕೈಗೂ ಸಿಗುತ್ತಿಲ್ಲ ಅಷ್ಟೆ.

ವಿಡಿಯೋ ನೋಡಿ....

ನಟನೆಗೆ ಗುಡ್ ಬೈ ಹೇಳಲಿರುವ ರಾಧಿಕಾ ಕುಮಾರಸ್ವಾಮಿ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ವಿಡಿಯೋ ನೋಡಿ...

English summary
Kannada Actress cum Producer Radhika Kumaraswamy has decided to bid Good Bye for acting. According to the sources, 'Namagagi' will be her last film as an Actress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada