For Quick Alerts
  ALLOW NOTIFICATIONS  
  For Daily Alerts

  ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟ 'ರಂಗಿತರಂಗ' ಸುಂದರಿ ರಾಧಿಕಾ ನಾರಾಯಣ್?

  |

  ಸ್ಯಾಂಡಲ್ ವುಡ್ ನಟಿ ರಾಧಿಕಾ ನಾರಾಯಣ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದ ಧಾರಾವಾಹಿಯೊಂದರಲ್ಲಿ ರಾಧಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಅಂದರೆ ರಾಧಿಕಾ ಸಿನಿಮಾ ಬಿಟ್ಟು ಟಿವಿಯಲ್ಲಿ ಬ್ಯುಸಿಯಾದ್ರಾ ಅಂತ ಯೋಚಿಸಬೇಡಿ. ರಾಧಿಕಾ ನಟಿಸುತ್ತಿರುವುದು ಅತಿಥಿ ಪಾತ್ರದಲ್ಲಿ.

  ಹೌದು, ರಾಧಿಕಾ ನಾರಾಯಣ್ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆಲ್ಲಲು ರಾಧಿಕಾ ಸಜ್ಜಾಗಿದ್ದಾರೆ. ಮೊದಲ ಬಾರಿಗೆ ರಾಧಿಕಾ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ನಟಿಮಣಿಯರು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವುದು ಇದೇ ಮೊದಲೇನಲ್ಲ.

  ಹೆಸರು ಬದಲಿಸಿಕೊಂಡ ನಟಿ ರಾಧಿಕಾ ಚೇತನ್ಹೆಸರು ಬದಲಿಸಿಕೊಂಡ ನಟಿ ರಾಧಿಕಾ ಚೇತನ್

  ವಿಶೇಷ ಸಂದರ್ಭದಲ್ಲಿ ನಟಿಯರು ಧಾರಾವಾಹಿಯಲ್ಲಿ ಮಿಂಚುತ್ತಾರೆ. ಇತ್ತೀಚಿಗೆ ನಟಿ ಮಾನ್ವಿತಾ ಕಾಮತ್ ಸಹ ಅತಿಥಿ ಪಾತ್ರದ ಮೂಲಕ ಕಿರುತೆರೆಯಲ್ಲಿ ಮಿಂಚಿದ್ದರು. ಸಾಕಷ್ಟು ನಟಿಯರು ಧಾರಾವಾಹಿ ಲೋಕದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮೊದಲ ಬಾರಿಗೆ ರಾಧಿಕಾ ನಾರಾಯಣ್ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

  ಅಂದ್ಹಾಗೆ ರಾಧಿಕಾ ಬಣ್ಣಹಚ್ಚಿರುವ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಆಕೃತಿ ಮತ್ತು ಮನಸಾರೆ ಧಾರಾವಾಹಿಯಲ್ಲಿ. ಈ ಎರಡು ಧಾರಾವಾಹಿಯ ಮಹಾ ಸಂಚಿಕೆಯಲ್ಲಿ ರಾಧಿಕಾ ನಟಿಸಿದ್ದಾರೆ. ಧಾರಾವಾಹಿಯಲ್ಲಿ ನಡೆಯುವ ಕಬ್ಬಡಿ ಪಂದ್ಯದಲ್ಲಿ ರಾಧಿಕಾ ರೆಫರಿಯಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

  ಸಿನಿಮಾ ವಿಚಾರಕ್ಕೆ ಬರುವುದಾದರೆ ರಾಧಿಕಾ ನಾರಾಯಣ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ರಂಗಿತರಂಗ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಾಧಿಕಾ, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ರಾಧಿಕಾ ಮುಂದಿನ ನಿಲ್ದಾಣ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸೂರತ್ಕಲ್ ಮತ್ತು ಚೇಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Actress Radhika Narayan enter to Small screen. Radhika Narayan will playing cameo role in Kannada Serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X