ರಸ್ತೆ ಅಪಘಾತದಲ್ಲಿ ರೇಡಿಯೋ ಮಿರ್ಚಿ ಆರ್ ಜೆ ಸಾವು
Recommended Video

ರೇಡಿಯೋ ಮಿರ್ಚಿ ಸಂಸ್ಥೆಯ ಆರ್ ಜೆ ತನಿಯಾ ಖನ್ನ ಅವರು ರಸ್ತೆ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. ನೋಯ್ಡಾ ಸೆಕ್ಟರ್ 94 ನಲ್ಲಿ ತನಿಯಾ ಅವರಿದ್ದ ಕಾರು ನಿಯಂತ್ರಣ ತಪ್ಪಿ ನಾಲೆಗೆ ಬಿದ್ದಿದೆ. ಅತ್ಯಂತ ವೇಗವಾಗಿ ಕಾರು ಚಲಾಯಿಸಿದ್ದರಿಂದ ಅಪಘಾತದ ತೀವ್ರತೆ ಹೆಚ್ಚಾಗಿತ್ತು. ಕಾರು ಚಲಾಯಿಸುತ್ತಿದ್ದ ತನಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
26 ವರ್ಷ ವಯಸ್ಸಿನ ತನಿಯಾ ಅವರಿದ್ದ ಕಾರು ರಸ್ತೆ ಬದಿಗೆ ಡಿಕ್ಕಿ ಹೊಡೆದು, ನಂತರ ನಾಲೆಗೆ ಬಿದ್ದಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕಚೇರಿಯಿಂದ ಮನೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ತಡರಾತ್ರಿ ಈ ಘಟನೆ ನಡೆದಿದ್ದು, ಕ್ರೇನ್ ಸಹಾಯದಿಂದ ಕಾರನ್ನು ಹೊರಕ್ಕೆ ತೆಗೆಯಲಾಗಿದೆ. ಅಪಘಾತದಿಂದ ಗಾಯಗೊಂಡಿದ್ದ ತನಿಯಾ ಅವರನ್ನು ಆಸ್ಪತ್ರೆಗೆ ಸಾಗಿಸಿ, ಉಳಿಸಿಕೊಳ್ಳುವ ಪ್ರಯತ್ನ ವಿಫಲವಾಗಿದೆ. ಆಸ್ಪತ್ರೆ ತಲುಪುವ ವೇಳೆಗೆ ವೈದ್ಯರು ತನೊಯಾ ಸಾವನಪ್ಪಿದ್ದಾರೆ ಎನ್ನುವುದನ್ನು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್ ಸಿ ಆರ್ ವಲಯದ ಪೊಲೀಸರು, ಅತಿ ವೇಗ ಹಾಗೂ ಅಜಾಗರೂಕತೆಯೆ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಕೆ ಮುಂದುವರೆದಿದೆ.


Click it and Unblock the Notifications











