For Quick Alerts
  ALLOW NOTIFICATIONS  
  For Daily Alerts

  ರಾಘಣ್ಣನನ್ನು 'ಗಂಧದಗುಡಿ' ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಕರೆದೊಯ್ಯುತ್ತಿರುವ ಅಪ್ಪು!

  |

  ಕರ್ನಾಟಕ ರತ್ನ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್ ತಾವೇ ಸ್ವತಃ ಮುತುವರ್ಜಿ ವಹಿಸಿ ಮಾಡಿರುವ 'ಗಂಧದ ಗುಡಿ' ಡಾಕ್ಯುಮೆಂಟರಿ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಡಾ.ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌ ಬಳಿಕ ಪುನೀತ್‌ ರಾಜ್‌ಕುಮಾರ್‌ 'ಗಂಧದ ಗುಡಿ' ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದರು.

  ಪುನೀತ್‌ ರಾಜ್‌ಕುಮಾರ್‌ ಅವರ 'ಗಂಧದ ಗುಡಿ', ಸಿನಿಮಾ ರೂಪದ ಬದಲಾಗಿ ಡಾಕ್ಯುಮೆಂಟರಿ ರೂಪದಲ್ಲಿ ತೆರೆ ಕಾಣಲಿದೆ. ಈಗಾಗಲೇ ಟೀಸರ್‌ ಹಾಗೂ ಪೋಸ್ಟರ್‌ಗಳ ಮೂಲಕ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ 'ಗಂಧದ ಗುಡಿ' ಸಾಕ್ಷ್ಯಚಿತ್ರದ ಟ್ರೈಲರ್‌ ಕೆಲವೇ ನಿಮಿಷಗಳಲ್ಲಿ ಬಿಡುಗಡೆಯಾಗಲಿದೆ.

  ಗಂಧದ ಗುಡಿ ಟ್ರೈಲರ್‌ ಬಿಡುಗಡೆಗೆ ಕ್ಷಣಗಣನೆ: ನರ್ತಕಿಯಲ್ಲಿ ಫ್ಯಾನ್ಸ್‌ಗಾಗಿ ವಿಶೇಷ ಪ್ರದರ್ಶನಗಂಧದ ಗುಡಿ ಟ್ರೈಲರ್‌ ಬಿಡುಗಡೆಗೆ ಕ್ಷಣಗಣನೆ: ನರ್ತಕಿಯಲ್ಲಿ ಫ್ಯಾನ್ಸ್‌ಗಾಗಿ ವಿಶೇಷ ಪ್ರದರ್ಶನ

  ಈಗಾಗಲೇ ಕರ್ನಾಟದಲ್ಲಿ 'ಗಂಧದ ಗುಡಿ' ಉತ್ಸವ ಆರಂಭವಾಗಿದ್ದು, ಅಪ್ಪು ಕೋಟ್ಯಂತರ ಅಭಿಮಾನಿಗಳು 'ಗಂಧದ ಗುಡಿ' ಟ್ರೈಲರ್‌ಗಾಗಿ ಕಾತುರರಾಗಿದ್ದಾರೆ. ಒಂದರ್ಥದಲ್ಲಿ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿರುವ ಕೊನೆಯ ಸಿನಿಮಾ 'ಗಂಧದ ಗುಡಿ'. ಇದನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ.

  ನರ್ತಕಿ ಚಿತ್ರಮಂದಿರದಲ್ಲಿ ಕಾರ್ಯಕ್ರಮ

  ನರ್ತಕಿ ಚಿತ್ರಮಂದಿರದಲ್ಲಿ ಕಾರ್ಯಕ್ರಮ

  ಪಿಆರ್‌ಕೆ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಗೂ ಮೊದಲು ಇಂದು (ಅಕ್ಟೋಬರ್‌ 10) ರಂದು ಬೆಳಗ್ಗೆ 9:45ಕ್ಕೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಪುನೀತ್ ರಾಜ್‌ಕುಮಾರ್‌ ಅವರ 'ಗಂಧದ ಗುಡಿ' ಟ್ರೈಲರ್‌ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ನಟ ರಾಘವೇಂದ್ರ ರಾಜ್‌ಕುಮಾರ್‌, ಶಿವರಾಜ್ ಕುಮಾರ್, ಪುನೀತ್ ಸಹೋದರಿಯರು ಹಾಗೂ ಸಹೋದರರ ಮಕ್ಕಳು ಕೂಡ ಭಾಗಿಯಾಗಲಿದ್ದಾರೆ.

  ನರ್ತಕಿಯಲ್ಲಿ 'ಗಂಧದ ಗುಡಿ' ಟ್ರೈಲರ್‌ ವಿಶೇಷ ಪ್ರದರ್ಶ

  ನರ್ತಕಿಯಲ್ಲಿ 'ಗಂಧದ ಗುಡಿ' ಟ್ರೈಲರ್‌ ವಿಶೇಷ ಪ್ರದರ್ಶ

  'ಗಂಧದ ಗುಡಿ' ಟ್ರೈಲರ್‌ ಬಿಡುಗಡೆ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ನಡೆಯಲಿದ್ದು, ಪುನೀತ್ ರಾಜ್‌ಕುಮಾರ್‌ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕೆಲವೇ ನಿಮಿಷಗಳಲ್ಲಿ ನರ್ತಕಿ ಚಿತ್ರಮಂದಿರದಲ್ಲಿ 'ಗಂಧದ ಗುಡಿ' ಟ್ರೈಲರ್‌ ಬಿಡುಗಡೆ ಮಾಡಲಿದ್ದಾರೆ. ಅದೇ ಸಮಯದಲ್ಲಿ ಯೂಟ್ಯೂಬ್‌ನಲ್ಲೂ ಟ್ರೈಲರ್ ಅಪ್‌ಲೋಡ್ ಆಗಲಿದೆ.

  ಅಪ್ಪು ಮಗನೇ ಎಂದ ರಾಘವೇಂದ್ರ ರಾಜ್‌ಕುಮಾರ್‌

  ಅಪ್ಪು ಮಗನೇ ಎಂದ ರಾಘವೇಂದ್ರ ರಾಜ್‌ಕುಮಾರ್‌

  ಅಪ್ಪು ಅಭಿಮಾನಿಗಳಂತೆ ರಾಘವೇಂದ್ರ ರಾಜ್‌ಕುಮಾರ್‌ ಅವರು ಕೂಡ ಪುನೀತ್‌ ಅವರನ್ನು ಬೆಳ್ಳಿತೆರೆ ಮೇಲೆ ನೋಡಲು ಕಾತುರರಾಗಿದ್ದು, ಟ್ರೈಲರ್‌ ಬಿಡುಗಡೆ ಕಾರ್ಯಕ್ರಮಕ್ಕೂ ತೆರಳುವ ಮುನ್ನ ರಾಘಣ್ಣ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ನರ್ತಕಿ ಚಿತ್ರಮಂದಿರ ಮುಂದೆ ತಾವು ಹಾಗೂ ಅಪ್ಪು ಇರುವಂತೆ ಪುನೀತ್‌ ರಾಜ್‌ಕುಮಾರ್‌ ಅವರ ಜೊತೆಗಿನ ಫೋಟೋ ಹಂಚಿಕೊಂಡಿರುವ ರಾಘವೇಂದ್ರ ರಾಜ್‌ಕುಮಾರ್‌, ಅಪ್ಪು ಮಗನೇ..ನೀನೆ ನನ್ನನ್ನು ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಕರೆದೊಯ್ಯುತ್ತಿರುವೆ ಎಂಬ ಭಾವನೆ ಎಂದು ಬರೆದುಕೊಂಡಿದ್ದಾರೆ. ನರ್ತಕಿ ಅಪ್ಪು ಫೇವರಿಟ್ ಥಿಯೇಟರ್. ಈ ಹಿಂದೆ ಹಲವು ಸಿನಿಮಾಗಳನ್ನು ರಾಘಣ್ಣನಿಗೆ ತೋರಿಸಲು ಇದೇ ರೀತಿ ಕರೆದುಕೊಂಡು ಹೋಗುತ್ತಿದ್ದರು. ಅದನ್ನು ಇತ್ತೀಚೆಗೆ ರಾಘಣ್ಣ ಹೇಳಿಕೊಂಡಿದ್ದರು.

  ಕೊನೆಯ ಬಾರಿ ಅಪ್ಪು ತೆರೆಮೇಲೆ ಕಾಣಲು ಫ್ಯಾನ್ಸ್‌ ಕಾತುರ

  ಕೊನೆಯ ಬಾರಿ ಅಪ್ಪು ತೆರೆಮೇಲೆ ಕಾಣಲು ಫ್ಯಾನ್ಸ್‌ ಕಾತುರ

  ಈಗಾಗಲೇ ಅಪ್ಪು ಅಗಲಿ ಒಂದು ವರ್ಷ ಸಮೀಪಿಸುತ್ತಿದ್ದು, ಅಪ್ಪು ನಟಿಸಿದ ಕೊನೆಯ ಎರಡು ಚಿತ್ರ 'ಜೇಮ್ಸ್‌' ಹಾಗೂ 'ಲಕ್ಕಿಮ್ಯಾನ್‌' ಈಗಾಗಲೇ ಬಿಡುಗಡೆಯಾಗಿದ್ದು, ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವವಾಗಿರುವ ಅಪ್ಪು ಅವರನ್ನು ತೆರೆಯ ಮೇಲೆ ನೋಡಿ ಅಭಿಮಾನಿಗಳು ಭಾವುಕರಾಗಿದ್ದರು. ಇದೀಗ ಪುನೀತ್‌ ರಾಜ್‌ಕುಮಾರ್ ಅವರು ಕೊನೆಯ ಬಾರಿ ತೆರೆ ಮೇಲೆ ಕಾಣಿಸಿಕೊಳ್ಳುವ 'ಗಂಧದ ಗುಡಿ'ಗಾಗಿ ಎಲ್ಲರೂ ತುದಿಗಾಲಿನಲ್ಲಿ ನಿಂತಿದ್ದಾರೆ. ರಾಜ್ಯದಲ್ಲಿ ಗಂಧದ ಗುಡಿ ಉತ್ಸವ ಆರಂಭವಾಗಿದೆ. ಎಲ್ಲರ ಸೋಶಿಯಲ್‌ ಮೀಡಿಯಾದಲ್ಲಿ 'ಗಂಧದ ಗುಡಿ' ಪೋಸ್ಟರ್‌ ರಾರಾಜಿಸುತ್ತಿದೆ.

  English summary
  Actor Raghavendra Rajkumar shared emotional post about Going to gandhada gudi trailer Launch Event.
  Sunday, October 9, 2022, 9:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X