Don't Miss!
- News
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದ ಅದಾನಿ, ಇದು ಆರ್ಥಿಕ ದಿವಾಳಿತನದ ಮುನ್ಸೂಚನೆಯೇ
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ವರ್ಷ ಗಣೇಶನ ಜೊತೆ ಬರ್ತಾರೆ ಅಪ್ಪು; 'ದೇವರಿಗೆ ಕರುಣೆ ಇಲ್ಲ' ಎಂದ ಅಭಿಮಾನಿಗಳು!
ಕೊರೊನಾ ಹಾವಳಿಯಿಂದ ಕಳೆದೆರಡು ವರ್ಷ ಗಣೇಶ ಹಬ್ಬದ ಸಡಗರ ಕಳೆಗುಂದಿತ್ತು. ಆದರೆ ಈ ವರ್ಷ ಗಣೇಶ ಹಬ್ಬ ಬಹಳ ಅದ್ಧೂರಿಯಾಗಿ ಕಳೆಕಟ್ಟಲಿದೆ. ಭಕ್ತರು ಈಗಾಗಲೇ ಗಣೇಶ ಹಬ್ಬಕ್ಕೆ ತಯಾರಿ ಶುರು ಮಾಡಿಕೊಳ್ಳುತ್ತಿದ್ದು, ಬೀದಿ ಬೀದಿಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ವಿಘ್ನ ನಿವಾರಕನ ಕೃಪೆಗೆ ಪಾತ್ರರಾಗಲು ಮುಂದಾಗಿದ್ದಾರೆ. ಭಿನ್ನ ವಿಭಿನ್ನ ರೂಪದ ಗಣೇಶ ಮೂರ್ತಿಗಳು ಪ್ರತಿ ವರ್ಷ ರಾರಾಜಿಸಿತ್ತವೆ. ಈ ಬಾರಿ ವಿಶೇಷವಾಗಿ ಗಣಪನ ಜೊತೆ 'ಪರಮಾತ್ಮ' ಪುನೀತ್ ರಾಜ್ ಕುಮಾರ್ ಅವರನ್ನು ಪೂಜಿಸಲು ಅಭಿಮಾನಿಗಳು ಮನಸ್ಸು ಮಾಡಿದ್ದಾರೆ. ಗಣೇಶನ ಜೊತೆ ಪುನೀತ್ ರಾಜ್‍ಕುಮಾರ್ ಇರುವಂತಹ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. 'ಪ್ರಕೃತಿ ಆರ್ಟ್ ಸೆಂಟರ್' ಕಲಾವಿದರ ಕಲ್ಪನೆಯಲ್ಲಿ ಮೂಡಿ ಬಂಡಿರೋ ಗಣಪತಿ ಮೂರ್ತಿ ಎಲ್ಲರ ಗಮನ ಸೆಳೆಯುತ್ತಿದೆ. ಅದರ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದ್ದು, ರಾಘವೇಂದ್ರ ರಾಜ್ ಕುಮಾರ್ ಕೂಡ ಶೇರ್ ಮಾಡಿದ್ದಾರೆ.
ಅಪ್ಪು ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿ ಅವರ ಆರ್ಶೀವಾದ ಪಡೆಯುತ್ತಿರುವಂತೆ ಮೂರ್ತಿಯನ್ನು ಸಿದ್ಧಪಡಿಸಲಾಗಿದೆ. 'ಎಂತಹ ಸುಂದರ ಕಲ್ಪನೆ' ಎಂದು ಬರೆದು ರಾಘಣ್ಣ ಫೋಟೋ ಶೇರ್ ಮಾಡಿದ್ದಾರೆ. ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್ಸ್, ಲೈಕ್ಸ್ ಬಂದಿದೆ. ಬಹಳಷ್ಟು ಜನ ಗಣಪನ ಜೊತೆಗಿರೋ ಅಪ್ಪುನ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. 'ದೇವರಿಗೆ ಕರುಣೆ ಇಲ್ಲ, ನಮ್ಮ ಅಪ್ಪುನ ನಮ್ಮಿಂದ ದೂರ ಮಾಡಿಬಿಟ್ಟ' ಎಂದು ಕೆಲವರು ದೂಷಿಸಿದರೆ ಮತ್ತೆ ಕೆಲವರು ತುಂಬಾ ಒಳ್ಳೆಯ ಕಲ್ಪನೆ. ಮೂರ್ತಿ ಸುಂದರವಾಗಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಪುನೀತ್
ರಾಜ್ಕುಮಾರ್
ಟ್ಟಿಟ್ಟರ್ಗೆ
ಮರಳಿದ
ನೀಲಿ
ಟಿಕ್!
ಗಣೇಶನನ್ನು ನೋಡಿದರೆ ಬಹುತೇಕರಿಗೆ ಅದೇನೋ ಪ್ರೀತಿ, ಮನಸ್ಸಲ್ಲೇನೋ ಭಾವನೆ ಮೂಡುವುದು ಸಹಜ. ಯಾಕೆಂದರೆ ಅವನ ಮುಗ್ಧ ರೂಪವೇ ಆಕರ್ಷಣೀಯ. ಯಾವುದೇ ಕಾರ್ಯಕ್ರಮವಾಗಿರಲಿ, ಶುಭ ಸಮಾರಂಭವೇ ಆಗಿರಲಿ ಅಥವಾ ಯಾವುದೇ ಪೂಜೆಯಿರಲಿ ಮೊದಲ ಪೂಜೆ ಗಣೇಶನಿಗೆ ಸಲ್ಲಿಸಲಾಗುತ್ತದೆ. ಗಣೇಶನ ಪೂಜೆಯಿಲ್ಲದೇ ಯಾವ ಶುಭ ಕಾರ್ಯವನ್ನೂ ಕೂಡ ಆರಂಭಿಸುವುದಿಲ್ಲ. ಈ ಬಾರಿ ಗಣೇಶನ ಜೊತೆ ತಮ್ಮ ಆರಾಧ್ಯ ದೈವ ಅಪ್ಪುನ ಪ್ರತಿಷ್ಠಾಪಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಅಪ್ಪು ಅಗಲಿಕೆಯ ನೋವಿನಿಂದ ಫ್ಯಾನ್ಸ್ ಹೊರಬಂದಿಲ್ಲ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ತಿಂಗಳುಗಳೇ ಕಳೆದರೂ ಈ ಕ್ಷಣಕ್ಕೂ ಅವರು ಇಲ್ಲ ಅನ್ನೋದನ್ನು ಊಹಿಸಿಕೊಳ್ಳೊಕೆ ಅಭಿಮಾನಿಗಳಿಂದ ಸಾಧ್ಯವಾಗುತ್ತಿಲ್ಲ. ದಿನಕ್ಕೊಮ್ಮೆ ಆದರೂ ಯಾವುದಾದರೂ ರೂಪದಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಸಿಕ್ಕಾಪಟ್ಟೆ ಫಿಟ್ ಅಂಡ್ ಫೈನ್ ಆಗಿದ್ದ ಅಪ್ಪು ಹೃದಯಾಘಾತದಿಂದ ದಿಢೀರ್ ನಿಧನರಾಗಿದ್ದು, ಎಲ್ಲರಿಗೂ ಅಚ್ಚರಿ ತಂದಿತ್ತು.
ಪುನೀತ್
ರಾಜ್ಕುಮಾರ್:
ಮರಣೋತ್ತರ
ಬಸವಶ್ರೀ
ಪ್ರಶಸ್ತಿ
ಸ್ವೀಕರಿಸಿದ
ಅಪ್ಪು
ಪತ್ನಿ
ಅಶ್ವಿನಿ

ಗಣೇಶ- ಅಪ್ಪು ಒಟ್ಟಿಗಿರೋ ಮೂರ್ತಿಗಳಿಗೆ ಡಿಮ್ಯಾಂಡ್
ಸೂಪರ್ ಹಿಟ್ ಸಿನಿಮಾಗಳ ಥೀಮ್ ಬಳಸಿ ಗಣೇಶ ಮೂರ್ತಿಗಳನ್ನು ತಯಾರು ಮಾಡೋದು ಬಹಳ ದಿನಗಳಿಂದ ನಡೆದುಕೊಂಡು ಬರುತ್ತಿದೆ. ಈ ಹಿಂದೆ 'ಬಾಹುಬಲಿ', 'ದಿ ವಿಲನ್', 'ಕೆಜಿಎಫ್' ರಾಕಿಭಾಯ್ ರೀತಿಯ ಗಣೇಶ ಮೂರ್ತಿಗಳು ಭಕ್ತರ ಗಮನ ಸೆಳೆದಿತ್ತು. ಈ ಬಾರಿ ಗಣೇಶನ ಜೊತೆಗಿರುವ ಪುನೀತ್ ರಾಜ್‌ಕುಮಾರ್ ಮೂರ್ತಿಗಳಿಗೆ ಭಾರೀ ಡಿಮ್ಯಾಂಡ್ ಇದೆ. ಈಗಾಗಲೇ ಇಂತಹ ಸಾಕಷ್ಟು ಮೂರ್ತಿಗಳು ತಯಾರಾಗುತ್ತಿವೆ.

ಪುನೀತ್ ಗಲ್ಲ ಹಿಡಿದ ಗಣೇಶನ ಫೋಟೊ ವೈರಲ್
ಹಾಗೆ ನೋಡಿದರೆ ಗಣೇಶನ ಜೊತೆಗೆ ಅಪ್ಪು ಇರುವ ಮೂರ್ತಿ ತಯಾರಿ ಮಾಡಿರುವುದು ಇದೇ ಮೊದಲಲ್ಲ. ನಾಲ್ಕು ತಿಂಗಳ ಹಿಂದೆ ಇಂತದ್ದೇ ಗಣೇಶ ಮೂರ್ತಿಯ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಗುಮೊಗದ ಅಪ್ಪು ಗಲ್ಲವನ್ನು ಗಣೇಶ ಹಿಡಿದುಕೊಂಡಂತೆ ಅಪ್ಪು ಭುಜದ ಮೇಲೆ ಮೂಷಿಕ ಕುಳಿತಂತೆ ಮಣ್ಣಿನಲ್ಲಿ ಮಾಡಿದ್ದ ವಿಗ್ರಹ ಅಭಿಮಾನಿಗಳ ಮನಗೆದ್ದಿತ್ತು.

ಅಕ್ಟೋಬರ್ 28ಕ್ಕೆ ತೆರೆಮೇಲೆ ಅಪ್ಪು 'ಗಂಧದಗುಡಿ'
3 ಸಿನಿಮಾಗಳ ಶೂಟಿಂಗ್ ನಡುವೆಯೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಎದ್ದು ಹೊರಟುಬಿಟ್ಟರು. ಪುನೀತ್ ರಾಜ್‌ಕುಮಾರ್ ಹೀರೋ ನಟಿಸಿದ ಕೊನೆಯ ಸಿನಿಮಾ 'ಜೇಮ್ಸ್' ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡಿದೆ. 'ಲಕ್ಕಿಮ್ಯಾನ್' ಸಿನಿಮಾದಲ್ಲೂ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಆ ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಾಗಿದೆ. ಪುನೀತ್ ರಾಜ್‌ಕುಮಾರ್ ಕನಸಿನ ಸಿನಿಮಾ 'ಗಂಧದಗುಡಿ' ಅಕ್ಟೋಬರ್ 28ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.