For Quick Alerts
  ALLOW NOTIFICATIONS  
  For Daily Alerts

  ರಾಘಣ್ಣ ನಟನೆಯ 'ಆಪರೇಷನ್ ಯು' ಸಿನಿಮಾ ಮುಹೂರ್ತ

  |

  ರಾಘವೇಂದ್ರ ರಾಜ್‌ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. 'ಕನ್ನಡ ದೇಶದೋಳ್', 'ಕಲಿವೀರ' ಸಿನಿಮಾಗಳ ಸಾರಥಿ ಅವಿರಾಮ್ ಹೊಸ ಸಿನಿಮಾ ಸೆಟ್ಟೇರಿದೆ. ಚಿತ್ರಕ್ಕೆ 'ಆಪರೇಷನ್ ಯು'ಸೆ ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಪೂಜೆ ನೆರವೇರಿಸಿ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ.

  ರಾಘಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಆಪರೇಷನ್ ಯು' ಚಿತ್ರದಲ್ಲಿ ಉತ್ತಮ್ ಪಾಲಿ, ಯಶ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದು, ಸೋನಲ್ ಮೊಂಥೆರೋ-ಲಾಸ್ಯ ನಾಗರಾಜ್ ನಾಯಕಿಯರಾಗಿ ಬಣ್ಣ ಹಚ್ಚಲಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದ್ದು, ರಾಘವೇಂದ್ರ ರಾಜ್ ಕುಮಾರ್ ಪತ್ನಿ ಮಂಗಳ ಪತಿಗೆ ಸಿನಿಮಾಗೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

  ನಿರ್ದೇಶಕ ಅವಿರಾಮ್ ಮಾತನಾಡಿ, 'ಆಪರೇಷನ್ ಯು' ಟೈಟಲ್ ತುಂಬಾ ವಿಶೇಷವಾಗಿದೆ. ಸೈಕಾಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು. ಸಾಮಾನ್ಯ ಮನುಷ್ಯನನ್ನು ತಟ್ಟುವ, ಬಡಿದೆಬ್ಬಿಸುವ, ಎಚ್ಚರಿಕೆ ನೀಡುವ ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. 'ಕಲಿವೀರ' ಬಳಿಕ ಇದು ಒಳ್ಳೆ ಪ್ರಾಜೆಕ್ಟ್. ಇದು ಬೇರೆ ತರ ರೀತಿ ಸಿನಿಮಾ. ಚಿತ್ರದಲ್ಲಿ ರಾಘಣ್ಣ ಪಾತ್ರ ವಿಶೇಷವಾಗಿರುತ್ತದೆ. ಕಂಪ್ಲೀಟ್ ಆಗಿ ಇಲ್ಲಿ ರಿವೀಲ್ ಮಾಡಲು ಆಗುವುದಿಲ್ಲ. ಫಸ್ಟ್ ಲುಕ್ ಪ್ರೆಸೆಂಟ್ ಮಾಡಿದಾಗ ರಿವೀಲ್ ಮಾಡುತ್ತೇವೆ. ಎಂದು ಮಾಹಿತಿ ನೀಡಿದ್ದಾರೆ.

  ವಿದ್ಮಯಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಉದ್ಯಮಿ ಮಂಜುನಾಥ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಆರ್ಮುಗ ರವಿಶಂಕರ್, ಧರ್ಮ, ಅವಿನಾಶ್, ಮಾಳವಿಕ ಅವಿನಾಶ್, ಸ್ಪರ್ಶ ರೇಖಾ, ಗೋವಿಂದೇ ಗೌಡ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸ್ತಿದ್ದಾರೆ. ರಾಘವೇಂದ್ರ ವಿ. ಸಂಗೀತ, ಹಾಲೇಶ್ ಎಸ್. ಸಂಕಲನ 'ಆಪರೇಷನ್ ಯು' ಚಿತ್ರಕ್ಕಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಆಪರೇಷನ್ ಯು ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಶೀಘ್ರದಲ್ಲೇ ಶುರುವಾಗಲಿದೆ.

  'ಅಮ್ಮನ ಮನೆ' ಚಿತ್ರದಿಂದ ರಾಘವೇಂದ್ರ ರಾಜ್‌ಕುಮಾರ್ ಮತ್ತೆ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ರಾಘಣ್ಣ ನಟನೆಯ 25ನೇ ಸಿನಿಮಾ 'ಆಡಿಸಿದಾತ' ಕಾರಣಾಂತರಗಳಿಂದ ತಡವಾಗುತ್ತಿದೆ. ಮತ್ತಷ್ಟು ಚಾಲೆಂಜಿಂಗ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ.

  English summary
  Raghavendra Rajkumar Starrer Operation U launched with a pooja ceremony. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X