For Quick Alerts
  ALLOW NOTIFICATIONS  
  For Daily Alerts

  ನಟಿ ರಾಗಿಣಿಯ ಬಾಡಿಗಾರ್ಡ್ ಅಪಘಾತದಲ್ಲಿ ನಿಧನ

  |

  ತುಪ್ಪದ ಬೆಡಗಿ ರಾಗಿಣಿ ಅಭಿಮಾನಿಗಳ ಬಳಗ ದೊಡ್ಡದಿದೆ. ರಾಗಿಣಿ ಎಲ್ಲೆ ಹೋದರು, ಯಾವುದೇ ಸಿನಿಮಾ ಪ್ರಚಾರಕ್ಕೆ ಹೋದರು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ರಾಗಿಣಿಯ ಸುರಕ್ಷತೆಯನ್ನು ಕಾಪಾಡುವಂತಹ ಕೆಲಸ ಮಾಡುವುದು ಬಾಡಿಗಾರ್ಡ್ ಶಶಿ.

  ರಾಗಿಣಿಯ ಸಿನಿ ಜೀವನದ ಪ್ರಮುಖ ಭಾಗವಾಗಿದ್ದ ಬಾಡಿಗಾರ್ಡ್ ಶಶಿ ಇತ್ತೀಚಿಗಷ್ಟೆ ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದಾರೆ. ಶಶಿ, ಅನೇಕ ವರ್ಷಗಳಿಂದ ರಾಗಿಣಿ ಅವರಿಗೆ ಪರ್ಸನಲ್ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಆದ್ರೀಗ ಶಶಿಯನ್ನು ಕಳೆದುಕೊಂಡು ರಾಗಿಣಿ ನೋವಿನಿಂದ ಮರುಗುತ್ತಿದ್ದಾರೆ.

  ರಿಯಲ್ ಸುದ್ದಿ: ಬೀದಿಬೀದಿಯಲ್ಲಿ ಸೌತೇಕಾಯಿ, ಮಾವಿನಕಾಯಿ ಮಾರಿದ ರಾಗಿಣಿ

  ತುಪ್ಪದ ಬೆಡಗಿಯ ದಿನಚರಿಯನ್ನು ನಿಗದಿಮಾಡಿ, ಪ್ರತಿ ದಿನದ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದರು ಶಶಿ. ಅಷ್ಟೆಯಲ್ಲ ರಾಗಿಣಿ ಅವರ ಕಾರ್ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದ ಶಶಿಯನ್ನು ಕಳೆದುಕೊಂಡು ರಾಗಿಣಿ ಕಣ್ಣೀರಾಕಿದ್ದಾರೆ. ಅಷ್ಟಕ್ಕೂ ಶಶಿ ಸಾವನ್ನಪ್ಪಿದ್ದು ಹೇಗೆ..? ಮುಂದೆ ಓದಿ

  ಜಾತ್ರೆಗೆ ಹೋದ ಶಶಿ ವಾಪಸ್ ಬರಲಿಲ್ಲ

  ಜಾತ್ರೆಗೆ ಹೋದ ಶಶಿ ವಾಪಸ್ ಬರಲಿಲ್ಲ

  ರಾಗಿಣಿ ಅವರ ಸಿನಿಮಾಗೆ ಸಂಬಂಧಿಸಿದ ಪ್ರತಿದಿನದ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ಶಶಿ ಮಂಗಳವಾರ ರಾತ್ರಿ ರಸ್ತೆ ಅಪಘಾತದಲ್ಲಿ ನಿಧರಾಗಿದ್ದಾರೆ. ಸೋಮವಾರದವರೆಗೂ ರಾಗಿಣಿ ಜೊತೆಯಲ್ಲೆ ಇದ್ದ ಶಶಿ, ಜಾತ್ರೆ ಪ್ರಯುಕ್ತ ಊರಿಗೆ ಹೋಗಿದ್ದರು. ಕನಕಪುರ ಮೂಲದವರಾದ ಶಶಿ ಊರಿನ ಜಾತ್ರೆ ಮುಗಿಸಿ ವಾಪಸ್ ಬರುತ್ತೀನಿ ಅಂತ ಹೇಳಿ ಹೋದವರು ವಾಪಸ್ ಬರಲೇ ಇಲ್ಲ. ಈ ಸುದ್ದಿ ನಟಿ ರಾಗಿಣಿಗೆ ತೀವ್ರ ಆಘಾತ ತಂದಿದೆ.

  ನನ್ನ ಫ್ಯಾಮಿಲಿ ಸದಸ್ಯನಾಗಿದ್ದ ಶಶಿ

  ನನ್ನ ಫ್ಯಾಮಿಲಿ ಸದಸ್ಯನಾಗಿದ್ದ ಶಶಿ

  ರಾಗಿಣಿ ಪಾಲಿಗೆ ಶಶಿ ಕೇವಲ ಬಾಡಿಗಾರ್ಡ್ ಮಾತ್ರ ಆಗಿರಲಿಲ್ಲ. ತಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದರು. ರಾಗಿಣಿ ಎಲ್ಲಿಗೆ ಹೋಗುತ್ತಿದ್ದರು ಅವರ ಜೊತೆ ಇರುತಿದ್ದರು. ಅಂಗರಕ್ಷಕನಾಗಿ ಕೆಲಸ ಮಾಡುವ ಜೊತೆಗೆ ರಾಗಿಣಿ ಅವರ ಕಾರಿನ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದರು. ಈ ಮೂಲಕ ರಾಗಿಣಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವುದರೊಂದಿಗೆ ರಾಗಿಣಿ ಅವರ ಕುಟುಂಬದ ಸದಸ್ಯನಾಗಿ ಬೆರೆತು ಹೋಗಿದ್ದರು ಶಶಿ.

  ರಮ್ಯಾ ಬರ್ತಡೇಗೆ ವಿಶ್ ಮಾಡಿದ ರಾಗಿಣಿ ಇಟ್ಟ ಬೇಡಿಕೆ ಏನು.?

  ಅತಿಯಾದ ನೋವು ಕಾಡ್ತಿದೆ

  ಅತಿಯಾದ ನೋವು ಕಾಡ್ತಿದೆ

  ಸದಾ ಜೊತೆಯಲ್ಲೆ ಇರುತ್ತಿದ್ದ ಶಶಿಯನ್ನು ಕಳೆದುಕೊಂಡಿರುವ ರಾಗಿಣಿ ತುಂಬಾ ದುಃಖದಲ್ಲಿದ್ದಾರೆ. ಭಾನುವಾರ ನಡೆದ ಅಂಬಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಗಿಣಿ ಅವರ ಜೊತೆಯಲ್ಲಿಯೆ ಇದ್ದು ಕಾರ್ಯಕ್ರಮ ಮುಗಿಸಿ ನಂತರ ರಾಗಿಣಿ ಅವರನ್ನು ಮನೆಗೆ ಬಿಟ್ಟು, ಸೋಮವಾರ ಊರಿಗೆ ತೆರಳಿದ್ದರು ಶಶಿ. ವಾಪಸ್ ಬರುವುದಾಗಿ ಹೇಳಿ ಹೋಗಿದ್ದ ಶಶಿ ಮತ್ತೆ ಬರಲ್ಲ ಅನ್ನುವ ನೋವು ರಾಗಿಣಿಯನ್ನು ಬಿಡದೆ ಕಾಡುತ್ತಿದೆ.

  ಈ ವರ್ಷ ಸ್ಟಾರ್ ಕಿರೀಟ ತೊಟ್ಟ ನಟಿ ಯಾರು?

  ಆರು ವರ್ಷದಿಂದ ಜೊತೆಯಿದ್ದ ಶಶಿ

  ಅಂದ್ಹಾಗೆ, ಶಶಿ ನಟಿ ರಾಗಿಣಿ ಅವರಿಗೆ ಒಂದೆರಡು ವರ್ಷದ ಪರಿಚಯವಲ್ಲ. ಸುಮಾರು 6 ವರ್ಷಗಳಿಂದ ರಾಗಿಣಿ ಅವರಿಗೆ ಬಾಡಿಗಾರ್ಡ್ ಆಗಿ ಕೆಲಸ ಮಾಡುತಿದ್ದರು. ರಾಗಿಣಿ ಎಲ್ಲಿರುತ್ತಿದ್ದರು ಅಲ್ಲಿ ಶಶಿ ಇದ್ದೇ ಇರುತ್ತಿದ್ದರು. ಈಗ ಶಶಿಯ ನೆನಪು ರಾಗಿಣಿ ಅವರನ್ನ ಕಾಡುತ್ತಿದ್ದು, ಶಶಿ ಆತ್ಮಕ್ಕೆ ಶಾಂತಿ ಸಿಗಲೆಂದಷ್ಟೇ ಈಗ ವಿನಂತಿಸಕೊಳ್ಳಬೇಕಿದೆ.

  English summary
  Kannada top actress Ragini Dwivedi's Bodyguard shashi met with an accident on spot yesterday (March 5th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X