»   » ಜೈಲಲ್ಲಿ ಜಯಲಲಿತಾ, 'ಅಮ್ಮ' ಕ್ಲೈಮ್ಯಾಕ್ಸ್ ಬದಲು

ಜೈಲಲ್ಲಿ ಜಯಲಲಿತಾ, 'ಅಮ್ಮ' ಕ್ಲೈಮ್ಯಾಕ್ಸ್ ಬದಲು

Posted By:
Subscribe to Filmibeat Kannada

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅಭಿನಯಿಸುತ್ತಿರುವ 'ಅಮ್ಮ' ಚಿತ್ರದ ಕ್ಲೈಮ್ಯಾಕ್ಸ್ ಬದಲಾಗಲಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುಮಾರಿ ಜಯಲಲಿತಾ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ ಮೇಲೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲೂ ಬದಲಾವಣೆ ಮಾಡಲು ಚಿತ್ರದ ನಿರ್ದೇಶಕ ಫೈಜಲ್ ಮುಂದಾಗಿದ್ದಾರೆ.

ಜಯಲಲಿತಾ ಅವರ ಜೀವನ ಕಥೆ ಆಧಾರಿತ ಚಿತ್ರ ಇದು ಎಂದೇ ಬಿಂಬಿಸಲಾಗಿದ್ದು, ಇದೀಗ ಜಯಲಲಿತಾ ಜೈಲು ಪಾಲಾಗುವುದರೊಂದಿಗೆ ಕಥೆಯನ್ನೂ ಬದಲಾಯಿಸಲಾಗುತ್ತಿದೆ. 'ಅಮ್ಮ' ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ರಾಜಕಾರಣಿಯೊಬ್ಬರು ನ್ಯಾಯಾಲಯದ ತೀರ್ಪಿನಲ್ಲಿ ಅರೆಸ್ಟ್ ಆಗುತ್ತಾರೆ ಎಂದಿದ್ದಾರೆ ನಿರ್ದೇಶಕರು. [ಅಮ್ಮ ಆಗಲಿರುವ ಘಮಘಮ ತುಪ್ಪದ ಬೆಡಗಿ ರಾಗಿಣಿ]

ಜಯಲಲಿತಾ ಅವರ ಕಥೆಗೆ ಸಾಮ್ಯತೆ ಇರುವಂತಹ ಪಾತ್ರವನ್ನು ರಾಗಿಣಿ ಪೋಷಿಸುತ್ತಿದ್ದಾರೆ. ಸಿನಿಮಾ ನಾಯಕಿಯೊಬ್ಬಳು ರಾಜಕೀಯಕ್ಕೆ ಬರಬೇಕಾದರೆ ಏನೆಲ್ಲಾ ಕಷ್ಟಗಳನ್ನು ಅನುಭವಿಸಬೇಕಾಯಿತು ಎಂಬ ಅಂಶಗಳನ್ನಿಟ್ಟುಕೊಂಡು ಕಥೆಯನ್ನು ತೆರೆಗೆ ತರುತ್ತಿದ್ದೇನೆ.

ಹಾಗಂತ ಇದು ಜಯಲಲಿತಾ ಅವರದೇ ಕಥೆ ಎಂದು ಹೇಳಲು ಆಗುವುದಿಲ್ಲ. ಹಾಗಂತ ತಳ್ಳಿ ಹಾಕುವಂತೆಯೂ ಇಲ್ಲ. ಏಕೆಂದರೆ ಜಯಲಲಿತಾ ಅವರ ಘನತೆಗೆ ಧಕ್ಕೆ ಬರುವಂತೆ ನಾವು ಚಿತ್ರವನ್ನು ಮಾಡುತ್ತಿಲ್ಲ ಎಂದಿದ್ದಾರೆ ಫೈಸಲ್.

ಕಥೆಯ ಬಗ್ಗೆ ರಾಗಿಣಿ ಮಾತ್ರ ಮೌನಂ ಸಮ್ಮತಿ ಲಕ್ಷಣಂ. ಅವರದೇನಿದ್ದರೂ ಮಾತು ಬೆಳ್ಳಿ ಮೌನ ಬಂಗಾರದ ವರಸೆ. ಈ ಚಿತ್ರವನ್ನು ಐದು ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದ್ದು ರಾಗಿಣಿ ಪಂಚಭಾಷಾ ತಾರೆಯಾಗಿ ಈ ಚಿತ್ರದ ಮೂಲಕ ಬದಲಾಗಲಿದ್ದಾರೆ.

ಬಾಲಿವುಡ್ ನಿರ್ದೇಶಕ ಫೈಸಲ್ ಸೈಫ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಜೂನ್ ತಿಂಗಳಿಂದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. (ಫಿಲ್ಮಿಬೀಟ್ ಕನ್ನಡ)

English summary
After Tamilnadu former Chief Minister J Jayalalithaa convicted and sentenced to four years jail, the story of Kannada movie Amma climax also changed. It is said that Ragini Dwivedi's character name about the film to be based on the life of Jayalalithaa

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada