For Quick Alerts
  ALLOW NOTIFICATIONS  
  For Daily Alerts

  ರಾಗಿಣಿ ಹೇಳಿಕೊಟ್ಟ ಲೇಸ್ ಚಿಪ್ಸ್ ಆಮ್ಲೆಟ್ ರೆಸಿಪಿ ನೀವೂ ಟ್ರೈ ಮಾಡಿ ನೋಡಿ

  |
  Ragini Dwivedi experiments in Kitchen | Filmibeat Kannada

  ಇವತ್ತು ಬೆಳ್ ಬೆಳಗ್ಗೆ ಎದ್ದು ಏನು ತಿಂಡಿ ಮಾಡೋದು ಅಂತ ಯೋಚನೆ ಮಾಡ್ತಿದ್ದೀರಾ.? ರೈಸ್ ಬಾತ್ ಮಾಡೋಕೆ ಮನೆಯಲ್ಲಿ ತರಕಾರಿ ಇಲ್ವಾ.? ಇಡ್ಲಿ-ದೋಸೆ ತಿಂದು ತಿಂದು ಬೋರ್ ಆಗಿದ್ಯಾ.? ಅದೇ ಹಳೇ ಆಮ್ಲೆಟ್ ನ ಯಾರಪ್ಪಾ ಮಾಡ್ತಾರೆ ಅಂತ ತಲೆ ಕೆರ್ಕೊಳ್ತಿದ್ರೆ, ಒಂದ್ಸಲ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಮಾಡಿರುವ ಅಡುಗೆ ಕಡೆ ನೋಡಿ.

  ರಾಗಿಣಿ ದ್ವಿವೇದಿ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಇರುವ ನಟಿ. ಬೆಳಗೆ ಎದ್ದರೆ ಜಿಮ್-ವರ್ಕೌಟ್ ಅಂತ ಬಿಜಿಯಾಗಿರ್ತಾರೆ. ಹೀಗಿರುವಾಗ, ಅವರಿಗೆ ಅಡುಗೆ ಮಾಡುವ ಟೈಮ್ ಎಲ್ಲಿದೆ ಅಂತ ನೀವು ಕೇಳಬಹುದು. ಇರುವ ಕಡಿಮೆ ಸಮಯದಲ್ಲೇ ರುಚಿ ರುಚಿಯಾದ ಅಡುಗೆಯನ್ನ ಮಾಡಿಕೊಂಡು ಸವಿಯುತ್ತಾರೆ ನಟಿ ರಾಗಿಣಿ. ಅದಕ್ಕೆ ಸಾಕ್ಷಿ ಇನ್ಸ್ಟಾಗ್ರಾಮ್ ನಲ್ಲಿ ಅವರು ಶೇರ್ ಮಾಡಿಕೊಂಡಿರುವ ಹೊಸ ವಿಡಿಯೋ.

  ಆ ವಿಡಿಯೋದಲ್ಲಿ ನಟಿ ರಾಗಿಣಿ ದ್ವಿವೇದಿ ಲೇಸ್ ಚಿಪ್ಸ್ ಆಮ್ಲೆಟ್ ತಯಾರಿಸಿದ್ದಾರೆ. ನಾಲ್ಕು ಮೊಟ್ಟೆಗಳನ್ನ ಒಡೆದು... ಅದಕ್ಕೆ ಈರುಳ್ಳಿ, ಮಸಾಲೆ ಪುಡಿ, ಮೆಣಸಿನಪುಡಿ, ಉಪ್ಪು ಹಾಕಿ... ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ ಮಿಶ್ರಣವನ್ನ ಲೇಸ್ ಚಿಪ್ಸ್ ಹೊಂದಿರುವ ಪಾಕೆಟ್ ನಲ್ಲಿ ಹಾಕಿ... ಕುದಿಯುತ್ತಿರುವ ನೀರೊಳಗೆ ಇಡ್ತಾರೆ. ಅದು ಬೆಂದ ಬಳಿಕ ತಟ್ಟೆಗೆ ಶಿಫ್ಟ್ ಮಾಡಿದರೆ ರುಚಿ ರುಚಿಯಾದ ಲೇಸ್ ಚಿಪ್ಸ್ ಆಮ್ಲೆಟ್ ರೆಡಿ.

  ಪ್ರಕಾಶ್ ಬೆಳವಾಡಿ ಜೊತೆಗೆ ರಾಗಿಣಿ ಸಿನಿಮಾ: ಚಿತ್ರದಲ್ಲಿದೆ ವಿವಾದಾತ್ಮಕ ವಿಷಯ.?

  ರಾಗಿಣಿ ಹೇಳಿರುವ ಹಾಗೆ ಇದು ಚಿಪ್ಸ್ ಲವರ್ಸ್ ಗೆ ತುಂಬಾ ಇಷ್ಟ ಆಗುತ್ತಂತೆ. ಕಡಿಮೆ ಸಮಯ.. ಇರುವ ಕಮ್ಮಿ ಸಾಮಗ್ರಿಗಳಲ್ಲಿ ರುಚಿ ರುಚಿಯಾಗಿ ಏನಾದ್ರೂ ತಿನ್ನಬೇಕು ಅಂತಿದ್ದರೆ ರಾಗಿಣಿ ಹೇಳಿಕೊಟ್ಟಿರುವ ಈ ರೆಸಿಪಿ ನ ಟ್ರೈ ಮಾಡಿ ನೋಡಿ..

  ವಿದೇಶದಲ್ಲಿ 'ಅಧ್ಯಕ್ಷ': ಹೆಚ್ಚಾಯ್ತು ಶರಣ್ - ರಾಗಿಣಿ ನಗುವಿನ ಸದ್ದು

  ಅಂದ್ಹಾಗೆ, 'ಅಧ್ಯಕ್ಷ ಇನ್ ಅಮೇರಿಕಾ' ಬಳಿಕ ರಾಗಿಣಿ ದ್ವಿವೇದಿ ಕೈಯಲ್ಲಿ 'ಗಾಂಧಿಗಿರಿ' ಚಿತ್ರವಿದೆ. ಪ್ರಕಾಶ್ ಬೆಳವಾಡಿ ನಿರ್ದೇಶನ ಮಾಡಲಿರುವ ಹೊಸ ಚಿತ್ರಕ್ಕೂ ರಾಗಿಣಿ ದ್ವಿವೇದಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  English summary
  Ragini Dwivedi experiments in Kitchen. She has tried out Lays Chips Omlet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X