For Quick Alerts
  ALLOW NOTIFICATIONS  
  For Daily Alerts

  ನಟಿ ರಾಗಿಣಿಗೆ 'ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ

  |

  ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಯವರಿಗೆ 2021ರ 'ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಲಭಿಸಿದೆ. ಈ ಸಂತಸದ ವಿಚಾರವನ್ನು ನಟಿ ರಾಗಿಣಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರಶಸ್ತಿ ಜೊತೆ ಫೋಟೋವನ್ನು ಶೇರ್ ಮಾಡಿ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

  ಲೆಜೆಂಡ್ Dadasaheb Phalke ಪ್ರಶಸ್ತಿ ಪಡೆದ ಮೊದಲ ದಕ್ಷಿಣ ಭಾರತದ ಮಹಿಳೆ Ragini | Filmibeat Kannada

  ಕೆಂಪು ಬಣ್ಣದ ಸೀರೆ ಧರಿಸಿ ಪ್ರಶಸ್ತಿಯನ್ನು ಕೈಯಲ್ಲಿ ಹಿಡಿದು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಕಳೆದ 2 ವರ್ಷಗಳಿಂದ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ರಾಗಿಣಿ ಅವರ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಇನ್ನು ವಿಶೇಷ ಎಂದರೆ ದಕ್ಷಿಣದಿಂದ ಈ ಪ್ರಶಸ್ತಿ ಪಡೆದ ಏಕೈಕ ಮಹಿಳೆ ರಾಗಿಣಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  ಈ ಬಗ್ಗೆ ದೀರ್ಘವಾಗಿ ಬರೆದುಕೊಂಡಿರುವ ರಾಗಿಣಿ, "ಲೆಜೆಂಡ್ ದಾದ ಸಾಹೇಬ್ ಫಾಲ್ಕೆ ಪ್ರಶಸ್ತಿ 2021. ಕರ್ನಾಟಕದಲ್ಲಿ ಕಳದ ಎರಡು ವರ್ಷಗಳಲ್ಲಿ ನನ್ನ ಸಮಾಜಮುಖಿ ಕೆಲಸ ಮತ್ತು ಸೇವೆಗಾಗಿ ನಾನು ಇಂದು ಪಡೆದ ಈ ವಿಶೇಷ ಪ್ರಶಸ್ತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಗೌರವ ಮತ್ತು ಹೆಮ್ಮೆ ಇದೆ. ಕೋವಿಡ್ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ನನ್ನೊಂದಿಗೆ ಹಗಲು ರಾತ್ರಿ ಕೆಲಸ ಮಾಡಿದ ನನ್ನ ಇಡೀ ತಂಡಕ್ಕೆ ಧನ್ಯವಾದಗಳು. ನನ್ನ ರಾಜ್ಯದಿಂದ ನಾನು ತುಂಬಾ ಹೆಮ್ಮೆಯಿಂದ ನಿಲ್ಲುತ್ತೇನೆ. ಮುಂದಿನ ದಿನಗಳಲ್ಲಿ ಹೆಚ್ಚಿನದನ್ನು ಮಾಡಲು ಈ ದೇಶ ನನಗೆ ಸ್ಫೂರ್ತಿದಾಯಕವಾಗಿ" ಎಂದು ಬರೆದುಕೊಂಡಿದ್ದಾರೆ.

  ಇನ್ನು "ಈ ಪ್ರಶಸ್ತಿ ದಕ್ಷಿಣದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಸಿಕ್ಕಿದೆ. ಇದು ಅತ್ಯಂತ ಪ್ರಮುಖ ವಿಷಯವಾಗಿದೆ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ನಟಿ ರಾಗಿಣಿ ಕಳೆದ ಲಾಕ್ ಡೌನ್ ಸಮಯದಿಂದನೂ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

  ಸಂಕಷ್ಟದಲ್ಲಿರುವ ಅನೇಕ ಜನರಿಗೆ ರಾಗಿಣಿ ಸಹಾಯಹಸ್ತ ಚಾಚಿದ್ದಾರೆ. ಪ್ರತಿದಿನ ಸಾವಿರಾರು ಜನರಿಗೆ ಊಟ, ಅಗತ್ಯ ವಸ್ತು ಸೇರಿದಂತೆ ಅನೇಕ ಸಹಾಯಗಳನ್ನು ಮಾಡುತ್ತಾ ಬಂದಿದ್ದಾರೆ. ರಾಗಿಣಿ ಸಾಮಾಜಿಕ ಕೆಲಸಗಳು ಇಂದಿಗೂ ಮುಂದುವರೆದಿದ್ದು, ಇನ್ನು ಹೆಚ್ಚಿನ ಜನರಿಗೆ ಸಹಾಯ ಮಾಡುವ ಗುರಿ ರಾಗಿಣಿ ಮತ್ತು ಅವರ ತಂಡ ಹೊಂದಿದೆ.

  English summary
  Actress Ragini Dwivedi honoured with Legend Dada Saheb Phalke Award.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X