»   » ಗ್ಲಾಮರ್ ಡಾಲ್ ರಾಗಿಣಿ ಈ ವರ್ಷ ಫುಲ್ ಬಿಜಿ

ಗ್ಲಾಮರ್ ಡಾಲ್ ರಾಗಿಣಿ ಈ ವರ್ಷ ಫುಲ್ ಬಿಜಿ

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ಗ್ಲಾಮರ್ ಡಾಲ್ ರಾಗಿಣಿ ದ್ವಿವೇದಿಗೆ ಮೇ.24ರಂದು 24ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಾಟ್ ಬೆಡಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಐದುವರ್ಷಗಳಾಯ್ತು. ಐದೇ ವರ್ಷಗಳಲ್ಲಿ ಕನ್ನಡದ ಜೊತೆ ಪಂಚಭಾಷಾ ತಾರೆಯಾಗಿ ಮಿಂಚ್ತಿದ್ದಾರೆ ಈ ಚೆಲುವಿನ ಗಿಣಿ.

ಹುಟ್ಟುಹಬ್ಬದ ಹಿಂದಿನ ದಿನ ಗ್ಲಾಮರ್ ಗಿಣಿಯ ಮುಂದಿನ ಪಂಚಭಾಷಾ ಸಿನಿಮಾ 'ಅಮ್ಮ' ಲಾಂಚ್ ಆಗಿದೆ. ಬಾಲಿವುಡ್ ನಿರ್ದೇಶಕ ಫೈಸಲ್ ಸೈಫ್ ನಿರ್ದೇಶಿಸ್ತಾ ಇರೋ ಪಂಚಭಾಷಾ ಸಿನಿಮಾವನ್ನ ನಿರ್ಮಿಸ್ತಾ ಇರೋದು ಕನ್ನಡದ ನಿರ್ಮಾಪಕ ಸಿ ಆರ್ ಮನೋಹರ್. [ರಾಗಿಣಿ ದ್ವಿವೇದಿಗೆ ಕೂಡಿಬಂತು ಕಂಕಣ ಭಾಗ್ಯ!]


ಅಮ್ಮ ಸಿನಿಮಾ ಮಾತ್ರ ಅಲ್ಲ ಈ ವರ್ಷ ಕನ್ನಡದಲ್ಲಿ ರಾಗಿಣಿ ಫುಲ್ ಬ್ಯುಸಿಯಾಗಿರೋವಷ್ಟು ಸಿನಿಮಾಗಳಿವೆ. ರಾಗಿಣಿಗೆ 2013 ಕನ್ನಡದಲ್ಲಿ ಲಕ್ಕಿ ಈಯರ್ ಆಗದಿದ್ರೂ ಬಾಲಿವುಡ್ ಕಾಲಿವುಡ್, ಟಾಲಿವುಡ್ ಗಳ ಬಾಗಿಲು ತೆರೆದ ವರ್ಷ.

ಬಾಲಿವುಡ್ ನ "ರ್ಯಾಂಬೋ ರಾಜ್ ಕುಮಾರ್' ಸಿನಿಮಾದಲ್ಲಿ ಐಟಂ ಡಾನ್ಸ್ ಮಾಡಿದ ರಾಗಿಣಿ ತಮಿಳಿ ತೆಲುಗಿನ ನಿಮಿರುಂದ್ ನಿಲ್, ಝಂಡಾ ಪೈ ಕಪಿರಾಜು ಸಿನಿಮಾದಲ್ಲಿ ಮಿಂಚಿದರು. ರಾಗಿಣಿಯ ಸಿನಿ ಪರಪಂಚ ಜೋಶ್ ನಲ್ಲಿ ಸಾಗ್ತಿದೆ.

ಈ ಕಥೆ ದಕ್ಷಿಣ ಭಾರತದಲ್ಲಿ ರಾಜಕೀಯದ 'ಅಮ್ಮ' ಎಂದೇ ಕರೆಸಿಕೊಂಡಿರುವ ಕುಮಾರಿ ಜಯಲಲಿತಾ ಅವರಿಗೆ ಸಂಬಂಧಿಸಿದ್ದು ಎನ್ನಲಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. (ಒನ್ಇಂಡಿಯಾ ಕನ್ನಡ)

English summary
Glamour Doll Ragini Dwivedi is full busy with her upcoming projects. On the occasions of 23rd birthday of the actress the makers of Amma has released the first look of the movie. Ragini Dwivedi To Play Tamil Nadu CM Jayalalithaa.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada