»   » 'ಸಪೂರ ಕಟಿ'ಯನು ಕಣ್ತೆರೆದು ನೋಡಿರಿ ಮಿಣಿ ಮಿಣಿ

'ಸಪೂರ ಕಟಿ'ಯನು ಕಣ್ತೆರೆದು ನೋಡಿರಿ ಮಿಣಿ ಮಿಣಿ

Posted By:
Subscribe to Filmibeat Kannada
ಸ್ಯಾಂಡಲ್ ವುಡ್ ಸಿನಿ ಪ್ರಿಯರಿಂದ 'ತುಪ್ಪದ ಹುಡುಗಿ' ಅಂತ ಕರೆಸಿಕೊಳ್ತಿದ್ರು, ಇನ್ನೂ ಸ್ವಲ್ಪ ಸ್ಲಿಮ್ ಆಗಬೇಕು ಎಂಬ ಮಾತುಗಳೆ ಹೆಚ್ಚಾಗಿದ್ದವು. ಆದ್ರೀಗ, ರಾಗಿಣಿಯನ್ನ ನೋಡಿದವರು ಒಂದು ಕ್ಷಣ ಮೂಕ ವಿಸ್ಮಿತರಾಗೋದಂತೂ ಖಂಡಿತಾ. ಹೌದು, ರಾಗಿಣಿ ಈಗ ಮುದ್ದಾದ 'ಅರಗಿಣಿ'ಯಾಗಿ ಬದಲಾಗಿದ್ದಾರೆ.[ತೆಳ್ಳಗೆ ಆಗಲು ನಟಿ ರಾಗಿಣಿ ದ್ವಿವೇದಿ ಮಾಡಿದ್ದು ಹೀಗೆ...]

ಆಕ್ಷನ್ ಸಿನಿಮಾಗಳ ಕಡೆ ಹೆಚ್ಚು ಗಮನ ಹರಿಸಿದ್ದ ರಾಗಿಣಿ ದಪ್ಪ ಆಗಿದ್ದರು. ಆ ಬಳಿಕ ವರ್ಕೌಟ್ ಮಾಡಿ ಮತ್ತೆ ತೆಳ್ಳಗೆ ಬಳುಕುವ ಬಳ್ಳಿ ಹಾಗೆ ಮೇಕ್ ಓವರ್ ಮಾಡಿಕೊಂಡಿದ್ದರು. ಆದ್ರೆ, ಇದನ್ನ ಅವರು, ಇವರು ಹೇಳ್ತಾ ಇದ್ದಿದ್ದನ್ನ ಕೇಳಬೇಕಿತ್ತು ಅಷ್ಟೇ. ಆದ್ರೆ, ಈಗ ರಾಗಿಣಿ ಸ್ಲಿಮ್ ಆಗಿರುವುದಕ್ಕೆ ಸಾಕ್ಷಿ ಸಿಕ್ಕಿದೆ. ಒಮ್ಮೆ ಈ ಫೋಟೋಗಳನ್ನ ನೋಡಿ, ನೀವು ಶಾಕ್ ಆಗೋದಂತೂ ಗ್ಯಾರೆಂಟಿ.

'ಬಳುಕುವ ಬಳ್ಳಿ'ಯಾದ ರಾಗಿಣಿ

'ಕೆಂಪೇಗೌಡ' ಚಿತ್ರದಲ್ಲಿ ನೋಡಿದ್ದ ರಾಗಿಣಿಗೂ 'ಪರಪಂಚ' ಚಿತ್ರದಲ್ಲಿ ನೋಡಿದ್ದ ರಾಗಿಣಿಗೂ ಅಜಗಜಾಂತರ ವ್ಯತ್ಯಾಸವಿದೆ. ಆದ್ರೆ, ಹಿಂದೆಂದೂ ನೋಡದ ರಾಗಿಣಿಯನ್ನ ಇದೀಗ ನೋಡಬಹುದಾಗಿದೆ.[ವಾವ್...ರಾಗಿಣಿ ಬದಲಾಗಿದ್ದಾರೆ.! ಹೊಸ ಫೋಟೋ ನೋಡಿ...]

ಸ್ಲಿಮ್ ಆದ ತುಪ್ಪದ ಹುಡುಗಿ

ಇತ್ತೀಚೆಗೆ ಆಕ್ಷನ್ ಚಿತ್ರಗಳಿಗಾಗಿ ಸಿಕ್ಕಾಪಟ್ಟೆ ದಪ್ಪವಾಗಿದ್ದ ನಟಿ ರಾಗಿಣಿ, ಈಗ ಸಖತ್ ಸ್ಲಿಮ್ ಆಗಿದ್ದಾರೆ. 'ತುಪ್ಪದ ಹುಡುಗಿ' ಎಂದು ಕರೆಸಿಕೊಳ್ಳುವ ರಾಗಿಣಿ ಈಗ 'ಗಿಣಿ'ಯಾಗಿ ಬದಲಾಗಿದ್ದಾರೆ.['ಐಕಾನ್ ಆಫ್ ದ ಇಯರ್' ಪಟ್ಟ ಅಲಂಕರಿಸಿದ ರಾಗಿಣಿ ದ್ವಿವೇದಿ]

ಹೊಸ ಅವತಾರದಲ್ಲಿ 'ನಾಟಿಕೋಳಿ'

2017, ಹೊಸ ವರ್ಷ ಬರುತ್ತಿದ್ದಂತೆ ರಾಗಿಣಿ ಕೂಡ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ದಪ್ಪವಾಗಿದ್ದಾರೆ ಎನ್ನುತ್ತಿದ್ದವರಿಗೆಲ್ಲ ಹೊಸ ಗೆಟಪ್ ನೊಂದಿಗೆ ಹುಬ್ಬೇರಿಸುವಂತೆ ಮಾಡಿದೆ.[ರಾಗಿಣಿ 'ತುಪ್ಪದ ಬೆಡಗಿ' ಅಂದ್ರೆ ಜೋಕೆ, ಇನ್ಮುಂದೆ ಅವರು 'ಸಿಂಡ್ರೆಲಾ']

ಶೀತಲ್ ಜೈನ್ ಫೋಟೋಗ್ರಫಿ

ರಾಗಿಣಿ ಅವರನ್ನ ಇಷ್ಟು ಕಲರ್ ಫುಲ್ ಆಗಿ, ಇಷ್ಟು ಬ್ಯೂಟಿಫುಲ್ ಆಗಿ ತೋರಿಸಿರುವುದು ಫೋಟೋಗ್ರಫರ್ ಶೀತಲ್ ಜೈನ್.

ಸ್ಟೈಲಿಶ್ ಹೇರ್ ಸ್ಟೈಲ್

ರಾಗಿಣಿಯ ಹೊಸ ಲುಕ್ ಗೆ ಮತ್ತಷ್ಟು ಮೆರಗು ನೀಡಿರುವುದು ಸ್ಟೈಲಿಶ್ ಹೇರ್ ಸ್ಟೈಲ್. ಹೌದು, ರಾಗಿಣಿಯ ಹೊಸ ಹೇರ್ ಸ್ಟೈಲ್ ಆಕರ್ಷಣೆಯಾಗಿದ್ದು, ನವಿರಾದ ಕೂದಲಿನ ಮೂಲಕ ಮೋಹಕವೆನಿಸಿದ್ದಾರೆ.[ಬರೀ ಸೀರೆ ಉಡೋಕೆ ರಾಗಿಣಿಗೆ ಅಷ್ಟೊಂದು ಸಂಭಾವನೆ ಕೊಡ್ಬೇಕಿತ್ತಾ.?]

ಥ್ರಿಲ್ ಆದ ಅಭಿಮಾನಿಗಳು

ರಾಗಿಣಿಯ ಈ ಹೊಸ ಗೆಟಪ್ ನೋಡಿ ಅವರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಫೇಸ್ ಬುಕ್ ನಲ್ಲಿ ಫೋಟೋಗಳನ್ನ ನೋಡಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

10 ತಿಂಗಳು ವರ್ಕೌಟ್

ರಾಗಿಣಿ ಈ ಬದಲಾವಣೆಗಾಗಿ ಸುಮಾರು 10 ತಿಂಗಳು ಕಷ್ಟಪಟ್ಟಿದ್ದಾರಂತೆ. ಜಿಮ್ ನಲ್ಲಿ ಸತತವಾಗಿ ವರ್ಕೌಟ್ ಮಾಡಿ, ಫಿಟ್ ಅಂಡ್ ಫೈನ್ ಆಗಿದ್ದಾರಂತೆ.

ಸಾಲು ಸಾಲು ಸಿನಿಮಾಗಳು ತಯಾರಾಗುತ್ತಿದೆ

ಸದ್ಯ, ರಾಗಿಣಿ ಅಭಿನಯದ 'ನಾನೇ ನೆಕ್ಸ್ಟ್ ಸಿಎಂ' ಚಿತ್ರ ಬಿಡುಗಡೆಗೆ ಸಿದ್ದವಾಗುತ್ತಿದೆ. ಅದರ ಬೆನ್ನಲ್ಲೆ, 'ಗಾಂಧಿಗಿರಿ', 'ಕಿಚ್ಚು', 'ಹುಲಿ ದೇವರ ಕಾಡು' ಥಿಯೇಟರ್ ಗೆ ಲಗ್ಗೆಯಿಡಲಿದೆ. ಇನ್ನೂ 'ಅಮ್ಮ' ಚಿತ್ರದ ಶೂಟಿಂಗ್ ಮತ್ತಷ್ಟು ವಿಳಂಬವಾಗುತ್ತಿದೆ.

ಮಲಯಾಳಂ ಚಿತ್ರಗಳಲ್ಲಿ ಬ್ಯುಸಿ

ರಾಗಿಣಿ ಈಗ ಕೇವಲ ಕನ್ನಡದಲ್ಲಿ ಮಾತ್ರವಲ್ಲ ಪರಭಾಷೆಯಲ್ಲೂ ಮಿಂಚಿ ಹರಸಿಲು ಸಿದ್ದವಾಗಿದ್ದಾರೆ. ಮಲಯಾಳಂ ಮತ್ತು ತೆಲುಗಿನ ಒಂದೊಂದು ಚಿತ್ರಗಳಲ್ಲಿ ರಾಗಿಣಿ ಬ್ಯುಸಿಯಾಗಿದ್ದಾರಂತೆ.

English summary
Kannada Actress Ragini Dwivedi has lost Weight and her new look is Hotter than ever. Check out her New Photoshoot Pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada