Don't Miss!
- News
Breaking: ಹೆಸರಾಂತ ಗಾಯಕಿ 'ವಾಣಿ ಜಯರಾಮ್' ನಿಧನ
- Automobiles
ಜಪಾನ್ ಅಂಬಾಸಿಡರ್ಗೆ ಬಹುಬೇಡಿಕೆಯ ಗ್ರ್ಯಾಂಡ್ ವಿಟಾರಾ ಎಸ್ಯುವಿ ಗಿಫ್ಟ್ ನೀಡಿದ ಮಾರುತಿ ಸುಜುಕಿ
- Finance
World Cancer Day: ಕ್ಯಾನ್ಸರ್ ವಿಮೆ ಎಂದರೇನು, ಪ್ರಾಮುಖ್ಯತೆ, ಇತರೆ ಮಾಹಿತಿ
- Technology
ಜಿಯೋದ ಈ ಪ್ಲ್ಯಾನ್ ಸಖತ್ ಆಗಿದೆ!..ರೀಚಾರ್ಜ್ ಮಾಡಬೇಕಾ?.ಬೇಡವೇ?
- Lifestyle
Chankya Neeti: ಶತ್ರುವಿನ ವಿರುದ್ಧ ಗೆಲ್ಲಬೇಕಾ..? ಚಾಣಾಕ್ಯನ ಈ ನೀತಿ ಅನುಸರಿಸಿ..!
- Sports
ಕೊಹ್ಲಿ ಅಲ್ಲ, ರೋಹಿತ್ ಅಲ್ಲ; ಈತ ಭಾರತದ ಬ್ಯಾಟಿಂಗ್ ಕ್ರಮಾಂಕದ ಬೆನ್ನೆಲುಬು ಎಂದ ಆರ್ ಅಶ್ವಿನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೈಲಿನಿಂದ ಹೊರಬಂದ ಬಳಿಕ ಹೊಸ ಸಿನಿಮಾ ಕೈಗೆತ್ತಿಕೊಂಡ ರಾಗಿಣಿ
ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ನಟಿ ರಾಗಿಣಿ ದ್ವಿವೇದಿ 145ಕ್ಕೂ ಹೆಚ್ಚು ದಿನಗಳ ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದು ಕಾನೂನು ಪ್ರಕ್ರಿಯೆ ಮುಗಿಸಿ ಜನವರಿ 25 ರಂದು ರಾಗಿಣಿ ಪರಪ್ಪನ ಅಗ್ರಹಾರದಿಂದ ಹೊರಬಂದಿದ್ದರು.
ರಾಗಿಣಿ ಜೈಲಿನಿಂದ ಹೊರಬರುತ್ತಿದ್ದಂತೆ ''ಮಾತನಾಡುವುದು ಹೆಚ್ಚಿದೆ, ಸ್ವಲ್ಪ ಸಮಯ ಕೊಡಿ, ಪ್ರೆಸ್ ಮೀಟ್ ಮಾಡಿ ಎಲ್ಲವೂ ಹೇಳುತ್ತೇನೆ'' ಎಂದಿದ್ದರು. ರಾಗಿಣಿಯ ಈ ಮಾತು ಕೇಳಿ ಡ್ರಗ್ಸ್ ಜಾಲದ ಮತ್ತಷ್ಟು ರಹಸ್ಯಗಳು, ಅದರ ಹಿಂದಿರುವ ರೂವಾರಿಗಳ ಬಣ್ಣ ಬಯಲಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದ್ರೆ, ತಿಂಗಳು ಕಳೆದರೂ ಈ ಕೇಸ್ ಬಗ್ಗೆ ರಾಗಿಣಿ ಮಾತನಾಡಿಲ್ಲ. ಮೌನಕ್ಕೆ ಶರಣಾಗಿ ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇದೀಗ, ಚಿತ್ರಪ್ರೇಮಿಗಳಿಗೆ ರಾಗಿಣಿ ಸರ್ಪ್ರೈಸ್ ಕೊಟ್ಟಿದ್ದಾರೆ. ಮುಂದೆ ಓದಿ...

ಹೊಸ ಸಿನಿಮಾ ಕೈಗೆತ್ತಿಕೊಂಡ ರಾಗಿಣಿ
ಜೈಲಿನಿಂದ ಹೊರಬಂದ ಬಹಳ ದಿನಗಳ ಬಳಿಕ ನಿರ್ಮಾಪಕ ಕೆ ಮಂಜು ರಾಗಿಣಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಮೂಲಕ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ ನಟಿ ರಾಗಿಣಿ. ಕೃಷ್ಣ ಚೈತನ್ಯ ನಿರ್ಮಾಣ ಮಾಡುತ್ತಿರುವ 'ಕರ್ವ-2' ಚಿತ್ರಕ್ಕೆ ರಾಗಿಣಿ ಪ್ರಮುಖ ನಟಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಜೈಲಿನಿಂದ ಹೊರಬಂದ ಮೇಲೆ ರಾಗಿಣಿ ಸಹಿ ಮಾಡಿದ ಮೊದಲ ಸಿನಿಮಾ ಇದಾಗಿದೆ.
ಕಷ್ಟದ
ದಿನಗಳನ್ನು
ನೆನೆದು
ಕಣ್ಣೀರಿಟ್ಟ
ನಟಿ
ರಾಗಿಣಿ:
ಕೆಟ್ಟ
ಕಾಮೆಂಟ್
ಮಾಡೋರಿಗೆ
ಹೇಳಿದ್ದೇನು?

ತಿಲಕ್-ಮೇಘನಾ ಜೊತೆ ರಾಗಿಣಿ
ವಿಶಾಲ್ ಶೇಖರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ಸ್ವರ್ಣಲತಾ ಪ್ರೊಡಕ್ಷನ್ ಅಡಿ ಕೃಷ್ಣ ಚೈತನ್ಯ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ತಿಲಕ್ ಮತ್ತು ಮೇಘನಾ ಗಾಂವ್ಕರ್ ನಟಿಸುತ್ತಿದ್ದಾರೆ. ಈ ಇಬ್ಬರು ಜೊತೆ ಈಗ ರಾಗಿಣಿ ದ್ವಿವೇದಿ ಜೊತೆಯಾಗಿದ್ದಾರೆ. ಅಂದ್ಹಾಗೆ, 2017ರಲ್ಲಿ ಬಿಡುಗಡೆಯಾಗಿದ್ದ ಕರ್ವ ಸಿನಿಮಾ ಯಶಸ್ಸು ಕಂಡಿತ್ತು. ಬಳಿಕ, ನಿರ್ಮಾಪಕರು 'ಕರ್ವ-2' ಘೋಷಿಸಿದರು. ಆದ್ರೀಗ, ಈ ಚಿತ್ರ ಬದಿಗಿಟ್ಟು 'ಕರ್ವ-3' ಮುಂದುವರಿಸುತ್ತಿದ್ದಾರೆ.

ಹೊಸ ಹೆಜ್ಜೆಗಳ ಜೊತೆ ಬದುಕು ಆರಂಭ
ಕಳೆದ ವರ್ಷ ರಾಗಿಣಿ ಪಾಲಿಗೆ ಕೆಟ್ಟದಾಗಿತ್ತು. ಕೊರೊನಾ ವೈರಸ್ ಒಂದು ಕಡೆಯಾದರೆ, ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಸುಮಾರು ನಾಲ್ಕುವರೆ ತಿಂಗಳಿಗೂ ಅಧಿಕ ಕಾಲ ಜೈಲಿನಲ್ಲಿ ವಾಸಿಸಬೇಕಾಯಿತು. ಈ ಕೆಟ್ಟ ಘಳಿಗೆಯನ್ನು ಮರೆತು 2021ರಲ್ಲಿ ಹೊಸ ಹೆಜ್ಜೆಗಳ ಮೂಲಕ ಬದುಕು ಮುಂದುವರಿಸಲು ರಾಗಿಣಿ ನಿರ್ಧರಿಸಿದ್ದಾರೆ. ಈ ವರ್ಷದಲ್ಲಿ ರಾಗಿಣಿ ಆರಂಭಿಸುತ್ತಿರುವ ಮೊದಲ ಸಿನಿಮಾ ಕರ್ವ 3.
ಜೈಲಿನಿಂದ
ಹೊರಬಂದ
ರಾಗಿಣಿ:
'ಮಾತಾಡೋದು
ಜಾಸ್ತಿ
ಇದೆ,
ಪ್ರೆಸ್
ಮೀಟ್
ಮಾಡ್ತೀನಿ'

ಹೆಚ್ಚು ಸಿನಿಮಾಗಳು ಬರ್ತಿವೆ
ರಾಗಿಣಿ ಮೇಲಿನ ಆರೋಪಗಳ ನಡುವೆಯೂ ಹೆಚ್ಚು ಹೆಚ್ಚು ಅವಕಾಶಗಳು ಬರ್ತಿವೆ ಎಂಬ ವಿಚಾರ ಹೊರಬಿದ್ದಿದೆ. ಸದ್ಯ ರಾಗಿಣಿ ಅವರು 8 ರಿಂದ 9 ಸ್ಕ್ರಿಪ್ಟ್‌ಗಳ ಕುರಿತು ಚರ್ಚೆಯಲ್ಲಿದ್ದಾರೆ. ಅದರಲ್ಲಿ ವಿಶೇಷ ಹಾಗೂ ವಿಭಿನ್ನತೆ ಹೊಂದಿರುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ತನ್ನ ಚಿತ್ರಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುವಂತಹ ಸಿನಿಮಾ ಮಾಡಬೇಕು ಎಂಬ ಉದ್ದೇಶ ಹೊಂದಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ರಾಗಿಣಿ ಬಂಧನ
ಕಾಟನ್‌ಪೇಟೆ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಎ2 ಆಗಿದ್ದರು. ಈ ಹಿನ್ನೆಲೆ ಕಳೆದ ವರ್ಷ ಸೆಪ್ಟೆಂಬರ್ 4 ರಂದು ನಟಿ ರಾಗಿಣಿ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಸೆಪ್ಟೆಂಬರ್ 14ರವರೆಗೂ ಸಿಸಿಬಿ ಕಸ್ಟಡಿಯಲ್ಲಿದ್ದ ನಟಿಯನ್ನು ಸೆಪ್ಟೆಂಬರ್ 15 ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಸುಮಾರು 145ಕ್ಕೂ ಹೆಚ್ಚು ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ರಾಗಿಣಿ ಇರಬೇಕಾಯಿತು. ಜನವರಿ 21 ರಂದು ರಾಗಿಣಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಆದರೆ, ಕಾನೂನು ಪ್ರಕ್ರಿಯೆ ವಿಳಂಬವಾದ ಕಾರಣ ಜನವರಿ 25 ರಂದು ಜೈಲಿನಿಂದ ರಿಲೀಸ್ ಆದರು.