Don't Miss!
- News
Shimoga airport; ಸಿವಿಲ್ ಏವಿಯೇಷನ್ ಕಾರ್ಯದರ್ಶಿಗಳ ಭೇಟಿ
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೆ ಸುದೀಪ್ ಜತೆ ಸಿನಿಮಾ ಮಾಡ್ತಾರಾ ರಾಗಿಣಿ ದ್ವಿವೇದಿ?
ಸುದೀಪ್ ಜತೆ 'ವೀರ ಮದಕರಿ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ನಟಿ ರಾಗಿಣಿ ದ್ವಿವೇದಿ. 'ಕೆಂಪೇಗೌಡ' ಚಿತ್ರದಲ್ಲಿ ಈ ಜೋಡಿ ಮತ್ತೆ ತೆರೆಯ ಮೇಲೆ ಅಭಿಮಾನಿಗಳನ್ನು ಮುದಗೊಳಿಸಿತ್ತು. ಈ ನಡುವೆ ಅನೇಕ ನಟರ ಜತೆ ಸಿನಿಮಾ ಮಾಡಿದ ರಾಗಿಣಿ, ಸೋಲೋ ಹಿರೋಯಿನ್ ಆಗಿ ಹಲವು ಆಕ್ಷನ್ ಚಿತ್ರಗಳಲ್ಲಿಯೂ ಸೈ ಎನಿಸಿಕೊಂಡರು.
Recommended Video
ಸದ್ಯಕ್ಕೀಗ ರಾಗಿಣಿ ದಿನವೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ನಿಜ. ಲಾಕ್ ಡೌನ್ ಕಾರಣದಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ನಿತ್ಯವೂ ಅವರು ತಮ್ಮ ತಂಡದೊಂದಿಗೆ ಆಹಾರ ಸಾಮಗ್ರಿಗಳನ್ನು ಕೊಂಡೊಯ್ದು ವಿತರಣೆ ಮಾಡುತ್ತಿದ್ದಾರೆ. ತಮ್ಮ ಈ ಕೆಲಸ ಮತ್ತಷ್ಟು ಜನರಿಗೆ ಪ್ರೇರೇಪಣೆ ನೀಡಲಿ ಎನ್ನುವುದು ಅವರ ಉದ್ದೇಶ. ಇದಕ್ಕಾಗಿ ಅವರು ತಮ್ಮ ಸಮಾಜಮುಖಿ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಮೊದಲ ಬಾರಿ ಲೈವ್ ಬಂದಿದ್ದೇನೆ
ಹೀಗಾಗಿ ಲಾಕ್ ಡೌನ್‌ನಲ್ಲಿಯೂ ಬಿಜಿಯಾಗಿರುವ ರಾಗಿಣಿ, ಅದರ ನಡುವೆ ಬಿಡುವು ಮಾಡಿಕೊಂಡು ಫಿಲ್ಮಿ ಬೀಟ್‌ನಲ್ಲಿ ಲೈವ್ ನಡೆಸಿಕೊಟ್ಟರು. ತಮ್ಮ ಸಾಮಾಜಿಕ ಜಾಲತಾಣದ ಖಾತೆ ಹೊರತುಪಡಿಸಿ ಇದೇ ಮೊದಲ ಬಾರಿಗೆ ಬೇರೆ ಮಾಧ್ಯಮದಲ್ಲಿ ಲೈವ್ ಬಂದಿರುವ ಖುಷಿಯನ್ನು ರಾಗಿಣಿ ಹಂಚಿಕೊಂಡರು. ಈ ವೇಳೆ ಅವರು ಅಭಿಮಾನಿಗಳ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು.
ವಿಡಿಯೋ:
ನಿಜವಾದ
ಹೀರೋಗಳೊಂದಿಗೆ
ರಾಗಿಣಿ
ಸಂವಾದ
ಮತ್ತು
ಸಲಾಂ

ಎಲ್ಲರಿಗೂ ಶುಭಾಶಯಗಳು
ಮೊದಲು ಕಾರ್ಮಿಕರ ದಿನಾಚರಣೆಯ ಶುಭಾಶಯ ಕೋರಿದ ರಾಗಿಣಿ, ಕೆಲಸ ಮಾಡುವ ಪ್ರತಿಯೊಬ್ಬರೂ ಕಾರ್ಮಿಕರು. ಎಲ್ಲರೂ ಒಂದೇ ರೀತಿ ಪ್ರೀತಿ ಗೌರವ ಕೊಡುತ್ತಾರೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದರು.

ಸಂಯಮದಿಂದ ಇರಿ
ಲಾಕ್‌ಡೌನ್ ಸಮಯದಲ್ಲಿ ಎಲ್ಲರೂ ತಮ್ಮ ಸಂಯಮ, ಸಹನೆ ಪರಿಶೀಲಿಸಿಕೊಂಡಿದ್ದಾರೆ. ಇದರಿಂದ ಜನರು ಉದ್ವಿಗ್ನರಾಗೋದು ಸಹಜ. ಆದರೆ ನಾವು ಕೆಲವು ಸಮಯ ಹೀಗೆಯೇ ಇರಬೇಕಾಗುತ್ತದೆ. ಆರೋಗ್ಯದ ಸಲುವಾಗಿ ಮುನ್ನೆಚ್ಚರಿಕೆ ವಹಿಸಬೇಕು. ಅಕ್ಕಪಕ್ಕದವರಗೆ ಸಹಾಯ ಮಾಡಿ. ಯಾವಾಗಲೂ ಸ್ಟ್ರಾಂಗ್ ಆಗಿರಿ ಎಂದು ಸಲಹೆ ನೀಡಿದರು.
ಕೊರೊನಾ
ಭೀತಿ:
ಜನರ
ಸಹಾಯಕ್ಕೆ
ಧಾವಿಸಿದ
ತುಪ್ಪದ
ಹುಡುಗಿ
ರಾಗಿಣಿ

ಸುದೀಪ್ ಜತೆ ಸಿನಿಮಾ ಯಾವಾಗ?
ಸುದೀಪ್ ಜತೆ ಯಾವಾಗ ಸಿನಿಮಾ ಮಾಡ್ತೀರಿ ಎಂಬ ಪ್ರಶ್ನೆ ಅಭಿಮಾನಿಗಳಿಂದ ಎದುರಾಯ್ತು. ಸುದೀಪ್ ಜತೆ ನಟಿಸುವ ಒಳ್ಳೆಯ ಅವಕಾಶ ಬಂದರೆ ಖಂಡಿತಾ ಮಾಡೋಣ. ಆದರೆ ಯಾವಾಗ ಬರುತ್ತದೆಯೋ ಗೊತ್ತಿಲ್ಲ ಎಂದರು. ಮುಂದಿನ ಸಿನಿಮಾ ಪ್ರಕಾಶ್ ಬೆಳವಾಡಿ ಜತೆ ಮಾಡುತ್ತಿದ್ದು, ಬಹಳ ಇಂಟರೆಸ್ಟಿಂಗ್ ಆಗಿದೆ ಎಂದು ತಿಳಿಸಿದರು.

ಎರಡು ಆಕ್ಷನ್ ಸಿನಿಮಾಗಳು
ಎರಡು ಆಕ್ಷನ್ ಸಿನಿಮಾಗಳಗೆ ಯೋಜನೆ ನಡೆಯುತ್ತಿದೆ. ಮುಂದಿನ ವರ್ಷದಲ್ಲಿ ಒಂದು ಸೋಲೋ ಸಿನಿಮಾ ಇದೆ. ಅದು ಸೋಷಿಯಲ್ ಓರಿಯೆಂಟೆಡ್ ಸಿನಿಮಾ. ಸದ್ಯಕ್ಕೆ ಮನೆ ಸ್ವಚ್ಛಗೊಳಿಸುವುದು ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದೇನೆ ಎಂದರು.