For Quick Alerts
  ALLOW NOTIFICATIONS  
  For Daily Alerts

  ಸಿಂಗಪೂರ್ ಗೆ ಹಾರಿದ ನೀಳ ಕಾಲ್ಗಳ ಚೆಲುವೆ ರಾಗಿಣಿ

  By Rajendra
  |

  ಇನ್ನೇನು ಖಾಕಿ ಕದರ್ ತೋರಿಸಲು ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ 'ರಾಗಿಣಿ ಐಪಿಎಸ್'. ಇತ್ತೀಚೆಗಷ್ಟೇ ರಾಗಿಣಿ ತಮ್ಮ 23ನೇ ಹುಟ್ಟುಹಬ್ಬವನ್ನೂ ಆಚರಿಸಿಕೊಂಡು ಸಂಭ್ರಮಿಸಿದರು. ಆದರೆ ತಮ್ಮ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕ ಬಗ್ಗೆ ಸ್ವಲ್ಪ ಬೇಸರವನ್ನೂ ವ್ಯಕ್ತಪಡಿಸಿದ್ದರು.

  ಈ ಎಲ್ಲಾ ಜಂಜಾಟಗಳ ನಡುವೆ ರಾಗಿಣಿ ಸ್ವಲ್ಪ ರಿಲ್ಯಾಕ್ಸ್ ಆಗಲು ಸಿಂಗಪುರಕ್ಕೆ ಹಾರಿದ್ದಾರೆ. ಜೊತೆಗೆ ಅವರ ತಂದೆ ತಾಯಿಯನ್ನೂ ಕರೆದೊಯ್ದಿದ್ದಾರೆ. ಸಿಂಗಪುರದಲ್ಲಿ ರಾಗಿಣಿ ಸಹೋದರ ರುದ್ರಾಕ್ಷ್ ಫ್ಯಾಷನ್ ಡಿಸೈನ್ ತರಬೇತಿ ಪಡೆಯುತ್ತಿದ್ದಾರಂತೆ.

  ಈ ಬಾರಿಯ ಬರ್ತ್ ಡೇಗೆ ಅವರು ಜೊತೆಗಿರಲಿಲ್ಲ ಎಂಬ ನೋವು ರಾಗಿಣಿ ಅವರನ್ನು ಕಾಡುತ್ತಿತ್ತು. ಸಹೋದರನನ್ನೂ ನೋಡಿದಂತಾಗುತ್ತದೆ, ಸ್ವಲ್ಪ ರಿಲ್ಯಾಕ್ಸ್ ಆಗಬಹುದು ಎಂಬ ಆಲೋಚನೆ ಅವರದು. ಸ್ವಲ್ಪ ಸಮಯ ಅಲ್ಲೇ ಕಳೆದು ಹೊಸ ಉತ್ಸಾಹದೊಂದಿಗೆ ಮರಳಲಿದ್ದಾರೆ.

  ಸಿಂಗಪುರದಿಂದ ಹಿಂತಿರುಗಿದ ಬಳಿಕ ಇನ್ನೊಂದಿಷ್ಟು ಹೊಸ ಚಿತ್ರಗಳಿಗೆ ಸಹಿ ಹಾಕುವ ಸಾಧ್ಯತೆಗಳಿವೆ. ತುಪ್ಪ ಬೇಕಾ ತುಪ್ಪ ಎಂದು ಸೊಂಟ ಬಳುಕಿಸಿ 'ಕಳ್ಳ ಮಳ್ಳ ಸುಳ್ಳ'ರ ಮೂಗಿಗೆ ನಾಟಿ ತುಪ್ಪ ಸವರಿದ್ದ ರಾಗಿಣಿ ಈಗ ಶರಣ್ ನಾಯಕ ನಟನಾಗಿರುವ 'ವಿಕ್ಟರಿ' ಚಿತ್ರದಲ್ಲೂ ಹೆಜ್ಜೆ ಹಾಕಿದ್ದಾರೆ.

  ಕೈಲಾಶ್ ಖೇರ್ ಹಾಡಿರುವ 'ವಿಕ್ಟರಿ' ಚಿತ್ರದ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡಿಗೆ ರಾಗಿಣಿ ಸ್ಟೈಪ್ ಹಾಕಿದ್ದಾರೆ. ವಿಭಿನ್ನ ಸೆಟ್ ಗಳಲ್ಲಿ ಚಿತ್ರೀಕರಿಸಿರುವ ಈ ಹಾಡು ಇನ್ನೇನು ಗದ್ದಲ ಮಾಡುತ್ತದೋ ಎಂಬ ಕುತೂಹಲ ಇದ್ದೇ ಇದೆ. (ಏಜೆನ್ಸೀಸ್)

  English summary
  Kannada actress Ragini Dwivedi has reportedly took a flight to Singapore. Where she has spend holidays and spent some time with her brother Rudraksh, who is doing fashion designing course in Singapore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X