For Quick Alerts
  ALLOW NOTIFICATIONS  
  For Daily Alerts

  ಖಾಕಿ ಧರಿಸಿ ಪುಂಡರನ್ನ ಬೆಂಡೆತ್ತಲು ತಯಾರಾದ ರಾಗಿಣಿ

  By Pavithra
  |
  ಖಾಕಿ ಧರಿಸಿ ಪುಂಡರನ್ನ ಬೆಂಡೆತ್ತಲು ತಯಾರಾದ ರಾಗಿಣಿ | Oneindia Kannada

  ನಟಿ ರಾಗಿಣಿ ಹ್ಯಾಟ್ರಿಕ್ ಬಾರಿಸುವುದಕ್ಕೆ ಸಜ್ಜಾಗಿದ್ದಾರೆ. ರಾಗಿಣಿ ಹ್ಯಾಟ್ರಿಕ್ ಬಾರಿಸುತ್ತಿರುವುದು ಸಿನಿಮಾದಲ್ಲಿ.

  ಹೌದು, 'ಮುಸ್ಸಂಜೆ ಮಹೇಶ್' ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ರಾಗಿಣಿ ಅಭಿನಯಿಸುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಚಿತ್ರ ಸೆಟ್ಟೇರಲಿದೆ. ನಿರ್ದೇಶಕ ಮಹೇಶ್ ನಿರ್ದೇಶನದ 'ನಾನೇ ನೆಕ್ಸ್ಟ್ ಸಿ.ಎಂ' ಹಾಗೂ ಆದಿತ್ಯ ಮತ್ತು ರಾಗಿಣಿ ಅಭಿನಯದ ಚಿತ್ರವನ್ನು ಮಹೇಶ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

  ಸದ್ಯ ಸೆಟ್ಟೇರಬೇಕಿರುವ ಸಿನಿಮಾದಲ್ಲಿ ರಾಗಿಣಿ ಖಾಕಿ ಧರಿಸಿ ಪುಂಡರಿಗೆ ಬೆಂಡೆತ್ತಲಿದ್ದಾರಂತೆ. 'ಇನ್ವೆಸ್ಟಿಗೇಷನ್ ಆಫೀಸರ್' ಪಾತ್ರದಲ್ಲಿ ತುಪ್ಪದ ಬೆಡಗಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಇರುವ ಚಿತ್ರವಾಗಿದ್ದು ಸಿನಿಮಾ ತಂಡ ರಾಗಿಣಿ ಅವರ ಫಸ್ಟ್ ಲುಕ್ ಅನ್ನ ರಿಲೀಸ್ ಮಾಡಿದೆ.

  ರಾಗಿಣಿ ಜೊತೆಯಲ್ಲಿ ಸಂಯುಕ್ತ, ನಕ್ಷತ್ರ, ಪ್ರಥಮ ಹಾಗೂ ಮೇಘನಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕರ್ನಾಟಕದ ಸುತ್ತ-ಮುತ್ತ ಚಿತ್ರೀಕರಣ ನಡೆಯಲಿದ್ದು, 'ಎಂ.ಎಂ.ಸಿ.ಹೆಚ್' ಅಂತ ಸಿನಿಮಾಗೆ ಟೈಟಲ್ ಇಡಲಾಗಿದೆ. ಒಟ್ಟಾರೆ ಈಗಾಗಲೇ ಖಾಕಿ ಧರಿಸಿ ತನ್ನ ಆಕ್ಟಿಂಗ್ ಖದರ್ ತೋರಿಸಿರುವ ನಟಿ ರಾಗಿಣಿ ಈ ಸಿನಿಮಾದಲ್ಲಿಯೂ ಮಿಂಚಲಿದ್ದಾರೆ.

  English summary
  Kannada Actress Ragini Dwivedi teams up for the 3rd time with Director Mussanje Mahesh

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X