For Quick Alerts
  ALLOW NOTIFICATIONS  
  For Daily Alerts

  2ನೇ ಚಿತ್ರಕ್ಕೆ ಮೊದಲೇ 3ನೇ ಚಿತ್ರ ಅನೌನ್ಸ್ ಮಾಡಿದ ನಿರ್ದೇಶಕ ಗಿರೀಶ್

  |

  ನಿರ್ದೇಶಕ ದುನಿಯಾ ಸೂರಿ ತಮ್ಮ 'ಕೆಂಡಸಂಪಿಗೆ' ಚಿತ್ರದ ಪಾರ್ಟ್ 1 ಗೂ ಮುಂಚೆಯೇ ಪಾರ್ಟ್ 2 ಸಿನಿಮಾವನ್ನು ಮಾಡಿದ್ದರು. ಈಗ ಒಬ್ಬ ಯುವ ನಿರ್ದೇಶಕ ತನ್ನ ಎರಡನೇ ಸಿನಿಮಾಗೂ ಮುಂಚೆಯೇ ಮೂರನೇ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.

  'ಒಂದ್ ಕಥೆ ಹೇಳ್ಲಾ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ನಿರ್ದೇಶಕ ಗಿರೀಶ್ ವೈರಮುಡಿ ಈಗ ತಮ್ಮ ಎರಡನೇ ಹಾಗೂ ಮೂರನೇ ಚಿತ್ರದ ತಯಾರಿಯಲ್ಲಿ ಇದ್ದಾರೆ. ವಿಶೇಷ ಅಂದರೆ, ಎರಡನೇ ಸಿನಿಮಾಗೆ ಮುಂಚೆಯೇ ಮೂರನೇ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ.

  Ondh Kathe Hella Review : ಹಾರರ್ ಪ್ರಿಯರಿಗೆ ಆಪ್ತವಾಗುವ ಸಿನಿಮಾ

  ಈ ಸಿನಿಮಾಗೆ 'ರಹದಾರಿ' ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಆದರೆ, ಎರಡನೇ ಸಿನಿಮಾಗೂ ಮುಂಚೆಯೇ ಯಾಕೆ ಮೂರನೇ ಸಿನಿಮಾ ಎಂದರೆ ಅದಕ್ಕೆ ನಿರ್ದೇಶಕ ಗಿರೀಶ್ ಈ ರೀತಿ ಉತ್ತರ ನೀಡಿದ್ದಾರೆ.

  'ರಹದಾರಿ' ಚಿತ್ರದ ಪ್ರೀ ಪ್ರೊಡಕ್ಷನ್ ಗೆ ತುಂಬ ಸಮಯ ಬೇಕಾಗುತ್ತದೆಯಂತೆ. ಅದನ್ನು ದೊಡ್ಡ ಮಟ್ಟದಲ್ಲಿ ಮಾಡುವ ಪ್ಲಾನ್ ಇದೆಯಂತೆ. ಹೀಗಾಗಿ, ಸದ್ಯಕ್ಕೆ ಚಿತ್ರದ ಪೋಸ್ಟರ್ ಬಿಟ್ಟು, ಟೈಟಲ್ ಅನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ.

  ಅಂದಹಾಗೆ, ಈ ಸಿನಿಮಾ ಒಂದು ನೈಜ ಘಟನೆ ಆಧಾರವಾಗಿ ಇಟ್ಟುಕೊಂಡು ಮಾಡಲಾಗಿದೆ. ಸಖತ್ ಕ್ರೇಜಿಯಾದ ರಾಬರಿಯ ಕಥೆ ಚಿತ್ರದಲ್ಲಿ ಇರಲಿದೆಯಂತೆ. ಇದೊಂದು ಕುತೂಹಲಕಾರಿ ಘಟನೆಯಾಗಿದ್ದು, ಎಲ್ಲೂ ಹೆಚ್ಚು ಬೆಳಕಿಗೆ ಬಂದಿಲ್ಲ ಎನ್ನುತ್ತಾರೆ ಗಿರೀಶ್.

  ಇನ್ನು, ಮುಂದಿನ ವರ್ಷ ಅಂದರೆ, 2020ಕ್ಕೆ ಈ ಸಿನಿಮಾ ಶುರು ಆಗಲಿದೆ. ಇತಿಹಾಸ ಪ್ರೊಡಕ್ಷನ್ಸ್ ನಲ್ಲಿ ಕೀರ್ತೇಶ್ ಚಿತ್ರದ ನಿರ್ಮಾಣ ಮಾಡಿದ್ದು, ಮಂಜುನಾಥ್ ಸಹ ನಿರ್ಮಾಪಕರಾಗಿದ್ದಾರೆ. 'ಒಂದ್ ಕಥೆ ಹೇಳ್ಲಾ' ತಂಡವೇ ಈ ಸಿನಿಮಾದ ತಾಂತ್ರಿಕ ವರ್ಗದಲ್ಲಿ ಇರಲಿದೆ.

  English summary
  'Rahadari' kannada movie poster released. The movie is directing by Girish Vairamudi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X