For Quick Alerts
  ALLOW NOTIFICATIONS  
  For Daily Alerts

  ಹುಚ್ಚ ವೆಂಕಟ್ 'ಆಸ್ತಿ' ವಿವರ ನೋಡಿ ಹೇಳಿ ಈತ 'ಶ್ರೀಮಂತನಾ-ಬಡವನಾ.?

  By Bharath Kumar
  |
  Karnataka Elections 2018 : ರಾಜರಾಜೇಶ್ವರಿ ನಗರದ ಅಭ್ಯರ್ಥಿ ಹುಚ್ಚ ವೆಂಕಟ್ ಆಸ್ತಿ ಎಷ್ಟು ಗೊತ್ತಾ?

  ಯುವತಿ, ಮಹಿಳೆಯರಿಗೆ ಅನ್ಯಾಯವಾದರೇ ಸಿಡಿದೇಳ್ತಾರೆ....ಕಾವೇರಿ ನೀರಿನ ವಿಷ್ಯಕ್ಕೆ ಬಂದ್ರೆ ಹೋರಾಟಕ್ಕೆ ನಿಲ್ತಾರೆ....ಬಡವರ ಕಂಡ್ರೆ ಕರುಣೆ ತೋರಿಸ್ತಾರೆ. ಲಕ್ಷಾಂತರ ರೂಪಾಯಿ ಆಸಕ್ತಿ ಇದ್ದರೂ ಹುಚ್ಚನಂತೆ ಕಾಣ್ತರೆ...ಇಷ್ಟೆಲ್ಲಾ ವಿಶೇಷತೆಗಳನ್ನ ಹೊಂದಿರುವ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಬೆಂಗಳೂರಿನ ಪ್ರತಿಷ್ಠಿತ ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಿದ್ದಾರೆ.

  ನಿಮ್ಗೆಲ್ಲ ಗೊತ್ತಿರಬಹುದು, ನೋಡಲು ಹುಚ್ಚನಂತೆ, ಪೊರ್ಕಿಯಂತೆ ಕಾಣುವ ಹುಚ್ಚ ವೆಂಕಟ್ ಶ್ರೀಮಂತ ಮನೆತನದವರು. ರಸ್ತೆಯಲ್ಲಿ ಯಾರಾದರೂ ಸಹಾಯಕರು, ವೃದ್ಧರು ವೆಂಕಟ್ ಗೆ ಎದುರಾದರೇ ನೂರರಿಂದ ಐನೂರು ರೂಪಾಯಿ ಕೊಟ್ಟಿರುವ ಉದಾಹರಣೆ ಇದೆ.

  ಆರ್ ಆರ್ ನಗರದಲ್ಲಿ ಮುನಿರತ್ನ ವಿರುದ್ಧ ಹುಚ್ಚ ವೆಂಕಟ್ ಸ್ಪರ್ಧೆಆರ್ ಆರ್ ನಗರದಲ್ಲಿ ಮುನಿರತ್ನ ವಿರುದ್ಧ ಹುಚ್ಚ ವೆಂಕಟ್ ಸ್ಪರ್ಧೆ

  ಇಂತಹ ವೆಂಕಟ್ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟಿರಬಹುದು ಎಂಬ ಕುತೂಹಲ, ಪ್ರಶ್ನೆ ಬಹುತೇಕರನ್ನ ಕಾಡಿರಬಹುದು. ಅದಕ್ಕೆ ಸ್ಪಷ್ಟ ಉತ್ತರ ಈಗ ಸಿಕ್ಕಿದೆ. ಚುನಾವಣೆಗೆ ಸ್ಪರ್ಧಿಸಿರುವ ವೆಂಕಟ್ ತಮ್ಮ ಆಸ್ತಿ ವಿವರವನ್ನ ಚುನಾವಣೆ ಅಧಿಕಾರಿ ನೀಡಿದ್ದಾರೆ. ಇದರಲ್ಲಿ ವೆಂಕಟ್ ಅವರ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ.? ಮುಂದೆ ಓದಿ.....

  ವೆಂಕಟ್ ಒಟ್ಟು ಆಸ್ತಿ ಮೊತ್ತ.?

  ವೆಂಕಟ್ ಒಟ್ಟು ಆಸ್ತಿ ಮೊತ್ತ.?

  ನಟ, ನಿರ್ದೇಶಕ, ನಿರ್ಮಾಪಕ, ಹಾಡುಗಾರ, ಸಾಹಿತಿ, ಚಿತ್ರಕತೆಗಾರ, ಸಂಭಾಷಣೆಗಾರ ವೆಂಕಟ್ ರಾಮ್ ಅವರ ಒಟ್ಟು ಆಸ್ತಿಯ ಮೊತ್ತ 13,08,733 ರುಪಾಯಿಗಳು ಮಾತ್ರ. ಇದು ಚುನಾವಣೆ ಅಫಿಡವಿಟ್ಟಿನಲ್ಲಿ ಸ್ವತಃ ವೆಂಕಟ್ ಅವರು ನೀಡಿರುವ ವಿವರ.

  ಹುಚ್ಚ ವೆಂಕಟ್ ಚುನಾವಣೆ ಪ್ರಣಾಳಿಕೆಯಲ್ಲಿ ಬಂಪರ್ ಕೊಡುಗೆಗಳು: ಊಹೆಗೂ ಮೀರಿದ್ದು.!ಹುಚ್ಚ ವೆಂಕಟ್ ಚುನಾವಣೆ ಪ್ರಣಾಳಿಕೆಯಲ್ಲಿ ಬಂಪರ್ ಕೊಡುಗೆಗಳು: ಊಹೆಗೂ ಮೀರಿದ್ದು.!

  1 ಕೋಟಿ 7 ಲಕ್ಷ ರುಪಾಯಿ ಸಾಲ

  1 ಕೋಟಿ 7 ಲಕ್ಷ ರುಪಾಯಿ ಸಾಲ

  13,08,733 ರುಪಾಯಿ ಒಟ್ಟು ಆಸ್ತಿ ಹೊಂದಿರುವಸ ವೆಂಕಟ್ ರಾಮ್ ಅವರು ತಮ್ಮ ಅಪ್ಪನಿಂದ 1 ಕೋಟಿ 7 ಲಕ್ಷ ರುಪಾಯಿ ಸಾಲ ಪಡೆದಿದ್ದಾರಂತೆ. ಇದರಿಂದ ಹುಚ್ಚ ವೆಂಕಟ್, ಪೊರ್ಕಿ ಹುಚ್ಚ ವೆಂಕಟ್, ಸ್ವತಂತ್ರ ಪಾಳ್ಯ ಅಂತಹ ಚಿತ್ರಗಳನ್ನ ನಿರ್ಮಾಣ ಮಾಡಿದ್ದಾರೆ.

  ವೆಂಕಟ್ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ.?

  ವೆಂಕಟ್ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ.?

  ಇಷ್ಟೆಲ್ಲಾ ಆಸ್ತಿ ಮತ್ತು ಸಾಲ ಹೊಂದಿರುವ ವೆಂಕಟ್ ಬ್ಯಾಂಕಿನಲ್ಲಿ ಎಷ್ಟು ಹಣ ಇಟ್ಟಿದ್ದಾರೆ ಎಂಬುದು ಇಲ್ಲಿದೆ. ವೆಂಕಟ್ ಕೈಯಲ್ಲಿ ಸದ್ಯ 10 ಸಾವಿರ ರುಪಾಯಿ ಮಾತ್ರ ಇದೆ. ಕಾರ್ಪೊರೇಷನ್ ಬ್ಯಾಂಕಲ್ಲಿ 124.42 ರುಪಾಯಿ, ಐಸಿಐಸಿಐ ಬ್ಯಾಂಕಲ್ಲಿ 133.85 ರುಪಾಯಿ, ಎಚ್‌ಡಿಎಫ್ ಸಿ ಬ್ಯಾಂಕಲ್ಲಿ ಸೊನ್ನೆ, ಇಂಡಿಯನ್ ಓವರ್ ಸೀಸ್ ಬ್ಯಾಂಕಲ್ಲಿ 61.06 ರುಪಾಯಿ, ಅವರ ಬಳಿ 1.5 ಲಕ್ಷ ರುಪಾಯಿ ಮೌಲ್ಯದ ಹ್ಯುಂಡೈ ಎಸೆಂಟ್ ಕಾರಿದೆ. ಅವರ ಒಟ್ಟು ಚರಾಸ್ತಿಯ ಮೊತ್ತ 1,60,319 ರುಪಾಯಿಗಳು ಮಾತ್ರ.

  ಸ್ಥಿರಾಸ್ತಿ ಇಲ್ಲ, ಮಕ್ಕಳೂ ಇಲ್ಲ

  ಸ್ಥಿರಾಸ್ತಿ ಇಲ್ಲ, ಮಕ್ಕಳೂ ಇಲ್ಲ

  ಇನ್ನು ವೆಂಕಟ್ ಅವರ ಬಳಿ ಸ್ಥಿರಾಸ್ತಿ ಇಲ್ಲ. ಕೃಷಿ ಅಥವಾ ಕೃಷಿಯೇತರ ಯಾವುದೇ ಸ್ಥಿರಾಸ್ತಿ ಇಲ್ಲವೇ ಇಲ್ಲ. ಹೆಂಡತಿ (ವಿಚ್ಛೇದನ) ಮತ್ತು ಮಕ್ಕಳಿಲ್ಲ. ತಂದೆಯಿಂದ ಯಾವುದೇ ಆಸ್ತಿ ಬಳುವಳಿಯಾಗಿಯೂ ಬಂದಿಲ್ಲ. ಉಳಿದ ರಾಜಕಾರಣಿಗಳಿಂತೆ ಅವರ ಬಳಿ ಕಟ್ಟಡಗಳಾಗಲಿ, ಕೆಜಿಗಟ್ಟಲೆ ತೂಗುವ ಚಿನ್ನ ಬೆಳ್ಳಿಯಾಗಲಿ ಇಲ್ಲ. ಈ ಚಿತ್ರ ಮಾಡಲು ಅವರು ಯಾವುದೇ ಬ್ಯಾಂಕಲ್ಲಿ ಸಾಲವನ್ನೂ ಪಡೆದಿಲ್ಲ. ಸಾಲ ಪಡೆದಿದ್ದು ಅವರ ತಂದೆ ಲಕ್ಷ್ಮಣ್ ಬಳಿ ಮಾತ್ರ.

  ಹುಚ್ಚ ವೆಂಕಟ್ ಗೂ ಕಂಗನಾ ರನೌತ್ ಇಬ್ಬರಿಗೂ ಒಂದೇ ಆಸೆ.! ಈಡೇರುತ್ತಾ.?ಹುಚ್ಚ ವೆಂಕಟ್ ಗೂ ಕಂಗನಾ ರನೌತ್ ಇಬ್ಬರಿಗೂ ಒಂದೇ ಆಸೆ.! ಈಡೇರುತ್ತಾ.?

  ಅಂಬೇಡ್ಕರ್ ಅವಹೇಳನ ಮಾಡಿದ್ದಕ್ಕಾಗಿ ಕೇಸು

  ಅಂಬೇಡ್ಕರ್ ಅವಹೇಳನ ಮಾಡಿದ್ದಕ್ಕಾಗಿ ಕೇಸು

  ಬಿಗ್ ಬಾಸ್ ನಲ್ಲಿ ಕಪಾಳಮೋಕ್ಷ ಮಾಡಿದ್ದರಾದರೂ ಕೇಸು ದಾಖಲಾಗಿಲ್ಲ. ಆದರೆ, ಭಾರತದ ಸಂವಿಧಾನದ ಕರ್ತೃ ಡಾ. ಬಿ.ಆರ್ ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಕ್ಕಾಗಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಕೇಸನ್ನು ಹಾಕಲಾಗಿದೆ (ಕ್ರೈಂ.ನಂ. 440/2015). ಎಸ್ಸಿ ಎಸ್ಟಿ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಾಗಿರುವುದಲ್ಲದೆ, ಅವರನ್ನು ಪೊಲೀಸರು ಬಂಧಿಸಿದ್ದರು ಕೂಡ. ಇದನ್ನು ಹೊರತುಪಡಿಸಿದರೆ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.

  ಬಂದು ವೋಟು ಕೇಳಲ್ಲ, ಮತದ ಭಿಕ್ಷೆ ಬೇಡಲ್ಲ

  ಬಂದು ವೋಟು ಕೇಳಲ್ಲ, ಮತದ ಭಿಕ್ಷೆ ಬೇಡಲ್ಲ

  ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಹಾಲಿ ಶಾಸಕ ಮುನಿರತ್ನ ಮತ್ತೆ ಸ್ಪರ್ಧಿಸಿದ್ದಾರೆ. ಜೆಡಿಎಸ್ ನಿಂದ ಅಮೂಲ್ಯ ಅವರ ಮಾವ ರಾಮಚಂದ್ರಪ್ಪ ಅವರು ಕಣದಲ್ಲಿದ್ದಾರೆ. ಬಿಜೆಪಿಯಿಂದ ಮುನಿರಾಜು ಅಖಾಡದಲ್ಲಿದ್ದಾರೆ. ಇವರ ಜೊತೆಗೆ ಪಕ್ಷೇತರ ಅಭ್ಯರ್ಥಿಯಾಗಿ ಹುಚ್ಚ ವೆಂಕಟ್ ಕಣಕ್ಕಿಳಿದಿದ್ದಾರೆ. ಈಗಾಗಲೇ ವೆಂಕಟ್ ಹೇಳಿರುವಾಗೆ, ಮನೆಮನೆಗೆ ಬಂದು ವೋಟು ಕೇಳಲ್ಲ, ಮತದ ಭಿಕ್ಷೆ ಬೇಡಲ್ಲ. ನಾನು ಶಾಸಕನಾಗಬೇಕಿದ್ದರೆ ನೀವೇ ಬಂದು ನನಗೆ ಮತ ಹಾಕಬೇಕ್ ಎಂದು ಆಜ್ಞೆ ಮಾಡಿದ್ದಾರೆ. ಯಾರಾದ್ರೂ ಕುಕ್ಕರ್ ಗಿಕ್ಕರ್ ಆಮಿಷ ಒಡ್ಡಲು ಬಂದರೆ ಅದೇ ಕುಕ್ಕರಿನಿಂದ ಕೊಡುವವರ ತಲೆಯ ಮೇಲೆಯೇ ಕುಕ್ಕಿ ಎಂದು ಕೂಡ ಆದೇಶ ನೀಡಿದ್ದಾರೆ ಹುಚ್ಚ ವೆಂಕಟ್.

  English summary
  Karnataka Assembly Elections 2018: Rajarajeshwari Nagar independent candidate, film star, firing star Huccha Venkat Asset details as per his affidavit. The actor, producer, director is contesting against sitting MLA Muniratna of Congress. Let's wish him all the best.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X