»   » ಭಂಡಾರಿ ಬ್ರದರ್ಸ್ ವಿವಾದ : 'ರಾಜರಥ' ಚಿತ್ರ ನೋಡದಿದ್ದವರು 'ಕಚಡ ಲೋಫರ್ ನನ್ ಮಕ್ಳು'

ಭಂಡಾರಿ ಬ್ರದರ್ಸ್ ವಿವಾದ : 'ರಾಜರಥ' ಚಿತ್ರ ನೋಡದಿದ್ದವರು 'ಕಚಡ ಲೋಫರ್ ನನ್ ಮಕ್ಳು'

Posted By:
Subscribe to Filmibeat Kannada
ಭಂಡಾರಿ ಬ್ರದರ್ಸ್ ವಿವಾದ : 'ರಾಜರಥ' ಚಿತ್ರ ನೋಡದಿದ್ದವರು 'ಕಚಡ ಲೋಫರ್ ನನ್ ಮಕ್ಳು' | Filmibeat Kannada

'ರಂಗಿತರಂಗ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತವಾದ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಅವರ ಸಹೋದರ ಹೀರೋ ನಿರೂಪ್ ಭಂಡಾರಿ 'ರಾಜರಥ' ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾ ಎರಡು ವಾರಗಳ ಹಿಂದೆ ಬಿಡುಗಡೆಯಾಗಿತ್ತು. ಆದರೆ 'ರಂಗಿತರಂಗ' ರೇಂಜ್ ಗೆ ಈ ಸಿನಿಮಾ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

'ರಾಜರಥ'ದಲ್ಲಿ ಸವಾರಿ ಮಾಡಿದ ವಿಮರ್ಶಕರ ಅನುಭವ ಹೇಗಿತ್ತು.?

'ರಾಜರಥ' ಸಿನಿಮಾ ನೋಡಿದ ಬಹುಪಾಲು ಮಂದಿ ಸಿನಿಮಾ ಅಷ್ಟೊಂದು ಚೆನ್ನಾಗಿಲ್ಲ, ಸಿಕ್ಕಾಪಟ್ಟೆ ಬೋರ್ ಎಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೇಳಿ ಬಂದಿರಲಿಲ್ಲ.

ವಿಮರ್ಶೆ: ಅಲ್ಲಲ್ಲಿ ನಿಂತು ಮುಂದೆ ಸಾಗುವ 'ರಾಜರಥ'

ಇಷ್ಟೆಲ್ಲ ಆದ ನಂತರ ಈಗ 'ರಾಜರಥ' ಸಿನಿಮಾ ನೋಡದ ಪ್ರೇಕ್ಷಕರಿಗೆ ಅಣ್ಣ-ತಮ್ಮ ಇಬ್ಬರೂ 'ಕಚಡ ನನ್ ಮಕ್ಳು' ಎಂದು ಬೈದಿದ್ದಾರೆ. ಭಂಡಾರಿ ಸಹೋದರರು ಬೈದಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮುಂದೆ ಓದಿ...

ಏನಿದು ವಿವಾದ ?

ಇತ್ತೀಚಿಗೆ 'ರಾಜರಥ' ಸಿನಿಮಾದ ಬಗ್ಗೆ ನಡೆದ ಸಂದರ್ಶನದಲ್ಲಿ ಚಿತ್ರದ ನಾಯಕ ಅನೂಪ್ ಭಂಡಾರಿ, ನಿರ್ದೇಶಕ ನಿರೂಪ್ ಭಂಡಾರಿ ಮತ್ತು ಚಿತ್ರದ ನಾಯಕಿ ಅವಾಂತಿಕಾ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ನಿರೂಪಕಿ Rapid ರಶ್ಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೂರು ಮಂದಿ 'ರಾಜರಥ' ಸಿನಿಮಾ ನೋಡದ ಪ್ರೇಕ್ಷಕರಿಗೆ 'ಕಚಡ ನನ್ ಮಕ್ಳು' ಎಂದು ಬೈದಿದ್ದಾರೆ.

ಬಿಟ್ಟ ಸ್ಥಳ ತುಂಬಿ

ಸಂದರ್ಶನದ ನಡುವೆ ನಿರೂಪಕಿ Rapid ರಶ್ಮಿ ''ರಾಜರಥ' ಸಿನಿಮಾ ನೋಡದ ಪ್ರೇಕ್ಷಕರು______'' ಎಂದು ಬಿಟ್ಟ ಸ್ಥಳವನ್ನು ತುಂಬಿಸುವಂತೆ ಕೇಳುತ್ತಾರೆ. ಮೊದಲು ಉತ್ತರಿಸಿದ ಅನೂಪ್ ಭಂಡಾರಿ ''ರಾಜರಥ' ಸಿನಿಮಾ ನೋಡದ ಪ್ರೇಕ್ಷಕರು 'ಕಚಡ ನನ್ ಮಕ್ಳು'' ಎಂದು ಹೇಳುತ್ತಾರೆ. ನಂತರ ಆ ಪ್ರಶ್ನೆ ನಟಿ ಅವಾಂತಿಕಾ ಶೆಟ್ಟಿಗೆ ಹೋಗುತ್ತದೆ. ಅವರೂ ಸಹ ಅನೂಪ್ ಅವರ ಉತ್ತರವನ್ನೇ ಮತ್ತೆ ಹೇಳುತ್ತಾರೆ. ಕೊನೆಗೆ ನಿರೂಪ್ ಭಂಡಾರಿ ಕೂಡ ''ರಾಜರಥ' ಸಿನಿಮಾ ನೋಡದ ಪ್ರೇಕ್ಷಕರು 'ಕಚಡ ಮಾತ್ರವಲ್ಲ ಲೋಫರ್ ನನ್ ಮಕ್ಳು'' ಎಂದು ಹೇಳಿಬಿಡುತ್ತಾರೆ.

ವೈರಲ್ ಆದ ವಿಡಿಯೋ

ಅನೂಪ್, ನಿರೂಪ್ ಮತ್ತು ಅವಂತಿಕಾ ಶೆಟ್ಟಿ ''ರಾಜರಥ' ಸಿನಿಮಾ ನೋಡದ ಪ್ರೇಕ್ಷಕರು ಕಚಡ ನನ್ ಮಕ್ಳು'' ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಕಷ್ಟು ಜನರು ಭಂಡಾರಿ ಬ್ರದರ್ಸ್ ಬಾಯಿಂದ ಬಂದಿರುವ ಮಾತಿಗೆ ಕೆಂಡಾಮಂಡಲವಾಗಿದ್ದಾರೆ. ಈ ವಿಡಿಯೋ ಈಗ ದೊಡ್ಡ ವಿವಾದ ಹುಟ್ಟುಹಾಕಿದೆ.

ಬಿಡುಗಡೆಗೆ ಮುಂಚೆ ನಡೆದ ಕಾರ್ಯಕ್ರಮ?

ಇನ್ನೊಂದು ಕಡೆ ಈ ಸಂದರ್ಶನದ ಚಿತ್ರೀಕರಣ ನಡೆದಿರುವುದು ಸಿನಿಮಾದ ಬಿಡುಗಡೆಗೆ ಮುಂಚೆ ಎನ್ನುವ ಗೊಂದಲ ಸಹ ಇದೆ. ಯಾಕಂದ್ರೆ ನಿರೂಪಕಿ Rapid ರಶ್ಮಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಂದರ್ಶನದ ವೇಳೆ ತೆಗೆದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 19, 20ಕ್ಕೆ ಈ ಫೋಟೋಗಳು ಅಪ್ ಲೋಡ್ ಆಗಿದೆ. ಆದರೆ 'ರಾಜರಥ' ಸಿನಿಮಾ ಬಿಡುಗಡೆಯಾಗಿದ್ದು ಮಾರ್ಚ್ 23 ರಂದು.

ಸಂದರ್ಶನದ ವಿಡಿಯೋ ಇಲ್ಲ

ಆಶ್ಚರ್ಯ ಅಂದರೆ ಸಿನಿಮಾ ಬಿಡುಗಡೆಯ ವಿಶೇಷವಾಗಿ ನಡೆದ ಈ ಸಂದರ್ಶನದ ಪೂರ್ಣ ವಿಡಿಯೋ ಸದ್ಯ Rapid ರಶ್ಮಿ ಫೇಸ್ ಬುಕ್ ಖಾತೆಯಲ್ಲಾಗಲಿ ಅಥವಾ ಯೂಟ್ಯೂಬ್ ಚಾನಲ್ ನಲ್ಲಾಗಿ ಇಲ್ಲ. ಈ ಸಂದರ್ಶನವನ್ನು ಅಪ್ ಲೋಡ್ ಮಾಡಿದ್ದಾರಾ, ಇಲ್ವಾ ಎಂಬುದೂ ಸಹ ಗೊತ್ತಿಲ್ಲ. ಆದರೆ ಸಂದರ್ಶನದ ವಿವಾದಿತ ಭಾಗ ಮಾತ್ರ ಹೊರ ಬಂದಿದೆ.

ಕ್ಷಮೆ ಕೇಳಿದ ಭಂಡಾರಿ

ಈ ವಿವಾದ ಹೆಚ್ಚಾಗುತ್ತಿದ್ದ ಹಾಗೆ ಇದೀಗ ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ತಮ್ಮ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಕ್ಷಮೆ ಕೇಳಿದ್ದಾರೆ. ಆದರೆ ಸಂದರ್ಶನದಲ್ಲಿ ಭಾಗಿಯಾಗಿದ್ದ ನಾಯಕಿ ಅವಂತಿಕಾ ಶೆಟ್ಟಿ ಮಾತ್ರ ಇದುವರೆಗೆ ತಮ್ಮ ಟ್ವಿಟ್ಟರ್ ಅಥವಾ ಫೇಸ್ ಬುಕ್ ಖಾತೆಯಲ್ಲಿ ಕ್ಷಮೆ ಕೇಳಿಲ್ಲ. ಇದು ಇನ್ನಷ್ಟು ಜನರಿಗೆ ಕೋಪ ಉಂಟು ಮಾಡಿದೆ.

English summary
Rajaratha kannada movie controversy : Director Anup Bandari, Actor Nirup Bhandari and Actress Avantika Shetty scolds kannada movie audience.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X