For Quick Alerts
ALLOW NOTIFICATIONS  
For Daily Alerts

  ಸ್ಟೈಲ್ ಕಿಂಗ್ ರಜನಿಕಾಂತ್ ಅಪೂರ್ವ ಫೋಟೋಗಳು

  By ಶಂಕರ್, ಚೆನ್ನೈ
  |

  ಸೂಪರ್ ಸ್ಟಾರ್ ರಜನಿಕಾಂತ್ ಅವರು ಬುಧವಾರ (ಡಿ.12) 62ನೇ ವಸಂತಕ್ಕೆ ಅಡಿಯಿಟ್ಟರು. ಚೆನ್ನೈನ ಅವರ ನಿವಾಸದ ಮುಂದೆ ಜನಜಾತ್ರೆಯೇ ನೆರೆದಿದೆ. ದೇಶದ ನಾನಾ ಮೂಲೆಗಳಿಂದ ಅಪಾರ ಅಭಿಮಾನಿಗಳು ಹರಿದುಬರುತ್ತಿದ್ದಾರೆ. ಅಭಿಮಾನಿಗಳ ಪಾಲಿಗೆ ಅವರು ತಲೈವರ್ (ತಮಿಳಿನಲ್ಲಿ ಹಾಗೆಂದರೆ ದೊರೆ, ಯಜಮಾನ, ದೇವರು, ಒಡೆಯ ಎದೆಲ್ಲ ಅರ್ಥಗಳಿವೆ).

  ತನ್ನ ಐದನೇ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ದುರ್ದೈವಿ ರಜನಿ. ಒಪ್ಪತ್ತಿನ ಊಟಕ್ಕೆ ನಾನಾ ಕಷ್ಟಗಳನ್ನು ಪಡುತ್ತಾ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದರು. ಬಳಿಕ ಜೀವನ ಸಂಘರ್ಷದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು.

  ಕೋಟ್ಯಾಂತರ ಸಂಭಾವನೆ ಪಡೆದರೂ ಸರಳಜೀವಿ

  ಈ ಫೊಟೋ ನೋಡಿದರೇನೇ ಗೊತ್ತಾಗುತ್ತದೆ. ರಜನಿಕಾಂತ್ ಎಷ್ಟು ಸರಳ ಎಂದು. ಬಿಳಿ ಶರ್ಟ್ ಪಂಚೆ, ಅದೇ ಹಳೆ ಚಪ್ಪಲಿ. 63ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ಕಾಣಿಸಿಕೊಂಡಿದ್ದು ಹೀಗೆ. ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ತಿಳಿಸುವಲ್ಲೂ ಒಂದು ಸ್ಟೈಲ್ ಇದೆ ಅಲ್ವಾ.

  ಹೃತಿಕ್ ರೋಷನ್ ಜೊತೆ ರಜನಿಕಾಂತ್

  ಕೇವಲ ದಕ್ಷಿಣ ಭಾರತದಲ್ಲಷ್ಟೇ ಅಲ್ಲ ಸಾಕಷ್ಟು ಹಿಂದಿ ಚಿತ್ರಗಳಲ್ಲೂ ರಜನಿ ಅಭಿನಯಿಸಿದ್ದಾರೆ. ಇನ್ನೂ ಬಾಲಿವುಡ್ ನಟ ಹೃತಿಕ್ ರೋಷನ್ ಬಾಲ ಕಲಾವಿದನಾಗಿದ್ದಾಗ ರಜನಿ ಜೊತೆ ಅಭಿನಯಿಸಿದ್ದರು. ಇದು ಭಗವಾನ್ ದಾದಾ ಚಿತ್ರದ ಸ್ಟಿಲ್.

  ರಜನಿ, ಬಾಲಚಂದರ್, ಕಾರ್ನಾಡ್ ಸಂಗಮ

  ಕಾರ್ಯಕ್ರಮವೊಂದರಲ್ಲಿ ತಮ್ಮ ಗುರು ಕೆ ಬಾಲಚಂದರ್ ಜೊತೆ ರಜನಿಕಾಂತ್. ಇದೇ ಸಂದರ್ಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರೂ ರಜನಿ ಅವರಿಗೆ ಕೈಕುಲುಕಿದ ಸಂದರ್ಭ.

  ಅಮೀರ್ ಜೊತೆ ರಜನಿಕಾಂತ್ ಚಿತ್ರ

  ಅಮೀರ್ ಖಾನ್ ಜೊತೆಗೂ ರಜನಿಕಾಂತ್ ಅಭಿನಯಿಸಿದ್ದಾರೆ. 'ಆತಂಕ್ ಹೈ ಆತಂಕ್' ಎಂಬ ಚಿತ್ರದಲ್ಲಿ ಇಬ್ಬರೂ ತೆರೆ ಹಂಚಿಕೊಂಡಿದ್ದರು. ಆ ಚಿತ್ರದ ಒಂದು ಸ್ಟೈಲಿಶ್ ಫೋಟೋ.

  ಮೇರುನಟ ರಾಜ್ ಜೊತೆ ರಜನಿಕಾಂತ್

  ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ರಜನಿಕಾಂತ್ ಮೇರುನಟ ಡಾ.ರಾಜ್ ಕುಮಾರ್ ಅವರೊಂದಿಗೆ ಬೆರೆತ ಅಪೂರ್ವ ಚಿತ್ರ. ಅಣ್ಣಾವ್ರ ಸೌಮ್ಯತೆ, ರಜನಿಕಾಂತ್ ಅವರ ವಿನಮ್ರಭಾವ ಚಿತ್ರದಲ್ಲಿ ಕಾಣಬಹುದು.

  ಅಟಲ್ ಬಿಹಾರಿ ವಾಜಪೇಯಿ ಭೇಟಿ

  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡಿದ ಸಂದರ್ಭ. ಲೋಕಾಭಿರಾಮವಾಗಿ ಮಾಜಿ ಪ್ರಧಾನಿ ಜೊತೆ ರಜನಿ ಮಾತನಾಡುತ್ತಿದ್ದಾರೆ. ರಜನಿ ಏನು ಡೈಲಾಗ್ ಹೊಡೆದರೋ ಏನೋ.

  ಬಿಗ್ ಬಿ ಅಮಿತಾ ಜೊತೆ ಅಣ್ಣಾಮಲೈ

  ಅಮಿತಾಬ್ ಅವರೊಂದಿಗೆ ಆತ್ಮೀಯ ಭೇಟಿ. ಅಮಿತಾಬ್ ಆರೋಗ್ಯ ಕೈಕೊಟ್ಟಾಗ ರಜನಿ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ ಅವರಲ್ಲಿ ಹುಮ್ಮಸ್ಸು ತುಂಬಿದ್ದರು.

  ಸ್ಟೈಲ್ ಕಿಂಗ್ ಜೊತೆ ರಿಯಲ್ ಸ್ಟಾರ್

  ಕನ್ನಡ ಚಿತ್ರರಂಗ ಅಮೃತಮಹೋತ್ಸವ ಆಚರಿಸಿಕೊಂಡ ಸಂದರ್ಭವದು. ರಜನಿಕಾಂತ್ ಅವರು ಬೆಂಗಳೂರಿಗೆ ಬಂದು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಕನ್ನಡದಲ್ಲೇ ಡೈಲಾಗ್ ಹೊಡೆದು ಅಭಿಮಾನಿಗಳ ಚಪ್ಪಾಳೆ ಶಿಳ್ಳೆ ಗಿಟ್ಟಿಸಿದರು.

  ಮೋಹನ್ ಬಾಬು ಜೊತೆ ಬೊಂಬಾಟ್ ಭೋಜನ

  ತೆಲುಗು ಚಿತ್ರರಂಗದ ಡೈಲಾಗ್ ಕಿಂಗ್ ಮೋಹನ್ ಬಾಬು ಹಾಗೂ ರಜನಿ ಆತ್ಮೀಯ ಮಿತ್ರರು. ಇವರಿಬ್ಬರೂ ಸಮಯ ಸಂದರ್ಭ ಸಿಕ್ಕಾಗಲೆಲ್ಲಾ ಕೈಕೈ ಹಿಡಿದು, ಹೆಗಲ ಮೇಲೆ ಹೆಗಲು ಹಾಕಿಕೊಂಡು ಹೀಗೆ ಕಾಣಿಸುತ್ತಿರುತ್ತಾರೆ. ಇಬ್ಬರೂ ಒಟ್ಟಿಗೆ ಬೊಂಬಾಟ್ ಭೋಜನ ಸವಿದ ಸಂದರ್ಭ.

  ರೆಬೆಲ್ ಸ್ಟಾರ್ ಜೊತೆ ಶಿವಾಜಿ ರಜನಿಕಾಂತ್

  ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ ಸಂದರ್ಭದಲ್ಲಿ ರಜನಿಕಾಂತ್ ಶುಭಹಾರೈಸಿದ ಶುಭ ಘಳಿಗೆ. ಚಿರಂಜೀವಿ, ಮೋಹನ್ ಬಾಬು, ಖುಷ್ಬು, ಶತ್ರುಜ್ಞ ಸಿನ್ಹಾ ಅವರನ್ನೂ ಚಿತ್ರದಲ್ಲಿ ಕಾಣಬಹುದು.

  ಕನ್ನಡದಲ್ಲಿ ಡೈಲಾಗ್ ಹೊಡೆದ ರಜನಿ

  ಇಂದು ತಮ್ಮ 62ನೇ ಹುಟ್ಟುಹಬ್ಬ ಸಂದರ್ಭದಲ್ಲಿ ರಜನಿಕಾಂತ್ ಅವರು ಕನ್ನಡದಲ್ಲೇ ಮಾತನಾಡಿದರು. ಎಲ್ಲ ಕನ್ನಡಿಗರಿಗೂ ಶುಭಾಶಯಗಳು. ಕರ್ನಾಟಕದಿಂದಲೂ ತಮ್ಮ ಅಭಿಮಾನಿಗಳು ಶುಭ ಕೋರಲು ಬಂದಿದ್ದಾರೆ. ಇದರಿಂದ ತಮ್ಮ ಮನಸ್ಸಿಗೆ ಖುಷಿಯಾಗುತ್ತಿದೆ ಎಂದರು ಅಣ್ಣಾಮಲೈ.


  ಮೂಟೆ ಹೊರೆಯುವ ಕೂಲಿಯಾಗಿ, ಆ ಬಳಿಕ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದರು. ರಂಗಭೂಮಿ ಮೇಲಿನ ಆಕರ್ಷಣೆಗೆ ಒಳಗಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಗೆಳೆಯರ ಪ್ರೋತ್ಸಾಹದಿಂದ ಮದ್ರಾಸ್ ಫಿಲಂ ಇನ್ಸಿಟಿಟ್ಯೂಟ್‌ನಲ್ಲಿ ಸೇರಿದರು. ಖ್ಯಾತ ನಿರ್ದೇಶಕ ಬಾಲಚಂದರ್ ಕಣ್ಣಿಗೆ ಬೀಳುವ ಮೂಲಕ 'ಅಪೂರ್ವ ರಾಗಂಗಲ್' ಚಿತ್ರದ ಮೂಲಕ 1975ರಲ್ಲಿ ಬೆಳ್ಳಿತೆರೆಗೆ ಅಡಿಯಿಟ್ಟರು.

  ಅಲ್ಲಿಂದ ಆರಂಭವಾದ ರಜನಿ ಸಿನಿ ಜೀವನದಲ್ಲಿ ಇದುವರೆಗೂ ಅಸಂಖ್ಯಾತ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಜನಿ ಅಭಿಮಾನಿಗಳು ಡಿ.12ನ್ನು World Style Day ಎಂದು ಸೆಲಿಬ್ರೇಟ್ ಮಾಡುತ್ತಾರೆ. ಅವರ ಹುಟ್ಟುಹಬ್ಬದ ನಿಮಿತ್ತ ರಜನಿಕಾಂತ್ ಅವರ ಅಪೂರ್ವ ಫೋಟೋಗಳು.

  English summary
  Super Star Rajinikanth celebrates his 62nd birthday in Chennai. On this special occasion, we would like to bring our readers some of his rare and unseen pictures with celebrities.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more