twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪುಗಾಗಿ ಬಂದೇ ಬರ್ತೀವಿ: ಪತ್ರ ಬರೆದ ರಜನೀಕಾಂತ್, ಜೂ ಎನ್‌ಟಿಆರ್

    |

    ಪುನೀತ್ ರಾಜ್‌ಕುಮಾರ್ ಅವರಿಗೆ ಸರ್ಕಾರವು ಮರಣೋತ್ತರವಾಗಿ 'ಕರ್ನಾಟಕ ರತ್ನ' ನೀಡಲಿದ್ದು, ಸಮಾರಂಭವನ್ನು ನವೆಂಬರ್ 1 ರಂದು ಹಮ್ಮಿಕೊಂಡಿದೆ.

    ವಿಧಾನಸೌಧದ ಮುಂಭಾಗ ನಡೆಯಲಿರುವ ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲು ಸರ್ಕಾರ ಯೋಜಿಸಿದ್ದು, ಪುನೀತ್‌ಗೆ ಆಪ್ತರಾಗಿರುವ ಇಬ್ಬರು ಪರಭಾಷಾ ಸ್ಟಾರ್ ನಟರನ್ನು ಕಾರ್ಯಕ್ರಮಕ್ಕೆ ಅತಿಥಿಗಳನ್ನಾಗಿ ಆಹ್ವಾನಿಸಿದೆ.

    ಕೆಲವು ದಿನಗಳ ಹಿಂದಷ್ಟೆ ಸಿಎಂ ಅವರೇ ಈ ವಿಷಯವನ್ನು ಮಾಧ್ಯಮದೊಟ್ಟಿಗೆ ಹಂಚಿಕೊಂಡಿದ್ದು, ರಜನೀಕಾಂತ್ ಹಾಗೂ ಜೂ ಎನ್‌ಟಿಆರ್ ಅವರಿಗೆ ಆಹ್ವಾನ ಕಳಿಸಿದ್ದೇವೆ, ನಮ್ಮ ಆಹ್ವಾನವನ್ನು ಅವರು ಒಪ್ಪಿಕೊಳ್ಳುವ ನಿರೀಕ್ಷೆ ಇದೆ ಎಂದಿದ್ದರು. ಇದೀಗ ಇಬ್ಬರೂ ಸ್ಟಾರ್ ನಟರು ಪುನೀತ್ ಅವರಿಗೆ 'ಕರ್ನಾಟಕ ರತ್ನ' ಗೌರವ ನೀಡಲು ಬರುತ್ತೇವೆ ಎಂದು ಸರ್ಕಾರಕ್ಕೆ ಪತ್ರ ಬರೆದು ತಮ್ಮ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿದ್ದಾರೆ.

    ಪತ್ರ ಬರೆದಿರುವ ರಜನೀಕಾಂತ್

    ಪತ್ರ ಬರೆದಿರುವ ರಜನೀಕಾಂತ್

    ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಉದ್ದೇಶಿಸಿ ಪತ್ರ ಬರೆದಿರುವ ನಟ ರಜನೀಕಾಂತ್, ''ನವೆಂಬರ್ 1 ರಂದು ನಡೆಯಲಿರುವ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಅತಿಥಿಯಾಗಿ ನನ್ನನ್ನು ಕರೆದಿರುವುದಕ್ಕೆ ಧನ್ಯವಾದ. ಘನ ಗೌರವದೊಂದಿಗೆ ನಾನು ಈ ಅಹ್ವಾನವನ್ನು ಸ್ವೀಕರಿಸುತ್ತಿದ್ದೇನೆ ಹಾಗೂ ಪ್ರತಿದಿನವೂ ನಮ್ಮಲ್ಲಿ ಸ್ಪೂರ್ತಿ ತುಂಬುತ್ತಿರುವ 'ನಮ್ಮ ಅಪ್ಪು'ವಿನ ಕಾರ್ಯಕ್ರಮದಲ್ಲಿ ಭಾಗಿಯಾಗುವುದನ್ನು ನಾನು ಖುಷಿಯಿಂದ ಖಾತ್ರಿಪಡಿಸುತ್ತಿದ್ದೇನೆ. ನವೆಂಬರ್ 1 ರಂದು ಮಧ್ಯಾಹ್ನ 1 ಗಂಟೆಗೆ ನಾನು ಚೆನ್ನೈನಿಂದ ಹೊರಟು, 3 ಗಂಟೆ ವೇಳೆಗೆ ಬೆಂಗಳೂರು ತಲುಪಲಿದ್ದೇನೆ'' ಎಂದಿದ್ದಾರೆ.

    ನನ್ನ ಹೃದಯಕ್ಕೆ ಬಹಳ ಆಪ್ತವಾಗಿದ್ದರು ಅಪ್ಪು: ಜೂ ಎನ್‌ಟಿಆರ್

    ನನ್ನ ಹೃದಯಕ್ಕೆ ಬಹಳ ಆಪ್ತವಾಗಿದ್ದರು ಅಪ್ಪು: ಜೂ ಎನ್‌ಟಿಆರ್

    ಅಪ್ಪುವಿನ ಆತ್ಮೀಯ ಸ್ನೇಹಿತರಾಗಿದ್ದ ಜೂ ಎನ್‌ಟಿಆರ್‌ ಅವರನ್ನೂ ಸಹ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಿತ್ತು. ಅದಕ್ಕೆ ಪತ್ರಮುಖೇನ ಪ್ರತಿಕ್ರಿಯೆ ನೀಡಿರುವ ಜೂ ಎನ್‌ಟಿಆರ್, ''ಪುನೀತ್ ರಾಜ್‌ಕುಮಾರ್ ಒಬ್ಬ ಅದ್ಭುತ ನಟ ಹಾಗೂ ಮಾನವತಾವಾದಿ ಎಂಬ ನಿಮ್ಮ ಮಾತನ್ನು ಅಕ್ಷರಷಃ ಅನುಮೋದಿಸುತ್ತೇನೆ. ಅವರ ಆಕಸ್ಮಿಕ ಅಗಲಿಕೆ, ಕರ್ನಾಟಕ ಚಿತ್ರರಂಗಕ್ಕೆ ಮಾತ್ರವಲ್ಲ ಇಡೀಯ ಭಾರತ ಚಿತ್ರರಂಗಕ್ಕೆ ಆದ ನಷ್ಟ. ವೈಯಕ್ತಿಕವಾಗಿ ನನ್ನ ಹೃದಯಕ್ಕೆ ಬಹಳ ಹತ್ತಿರದ ವ್ಯಕ್ತಿ ಅವರು, ನಮ್ಮಿಬ್ಬರಲ್ಲಿ ಹಲವು ವಿಷಯಗಳಲ್ಲಿ ಸಮಾನತೆ ಇತ್ತು, ನಾವಿಬ್ಬರೂ ಒಟ್ಟಿಗಿರುವ ಭಾವುಕ ಕ್ಷಣಗಳು ಅದೆಷ್ಟೋ ಇವೆ'' ಎಂದಿದ್ದಾರೆ ಜೂ ಎನ್‌ಟಿಆರ್.

    ಕಾರ್ಯಕ್ರಮದಲ್ಲಿ ಹಾಜರಿರುವುದು ನನ್ನ ಜವಾಭ್ದಾರಿ: ಜೂ ಎನ್‌ಟಿಆರ್

    ಕಾರ್ಯಕ್ರಮದಲ್ಲಿ ಹಾಜರಿರುವುದು ನನ್ನ ಜವಾಭ್ದಾರಿ: ಜೂ ಎನ್‌ಟಿಆರ್

    ಮುಂದುವರೆದು, ''ಅಪ್ಪುಗೆ ಗೌರವ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ದೊಡ್ಡ ಗೌರವ ಮಾತ್ರವಲ್ಲ ನನ್ನ ಜವಾಭ್ದಾರಿಯೂ ಸಹ ಎಂದೇ ನಾನು ಭಾವಿಸಿದ್ದೇನೆ. ನವೆಂಬರ್ 1 ರಂದು ಕರ್ನಾಟಕ ಸರ್ಕಾರವು ಆಯೋಜಿಸುತ್ತಿರುವ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುತ್ತಿದ್ದೇನೆ ಎಂಬುದನ್ನು ನಾನು ಖಾತ್ರಿಪಡಿಸುತ್ತಿದ್ದೇನೆ. ಇದೇ ಸಂದರ್ಭದಲ್ಲಿ 'ಕರ್ನಾಟಕ ರಾಜ್ಯೋತ್ಸವ' ಶುಭಾಶಯಗಳನ್ನು ಕರ್ನಾಟಕದ ನನ್ನ ಎಲ್ಲ ಸಹೋದರ-ಸಹೋದರಿಯರಿಗೆ ತಿಳಿಸಲು ಸಂತೋಷಿಸುತ್ತೇನೆ'' ಎಂದಿದ್ದಾರೆ.

    ಮರಣೋತ್ತರ 'ಕರ್ನಾಟಕ ರತ್ನ'

    ಮರಣೋತ್ತರ 'ಕರ್ನಾಟಕ ರತ್ನ'

    ರಾಜ್ಯ ಸರ್ಕಾರವು ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 1 ರಂದು ಸಂಜೆ 4 ಗಂಟೆಗೆ ವಿಧಾನಸೌಧ ಮೆಟ್ಟಿಲುಗಳ ಮೇಲೆ ಅದ್ಧೂರಿಯಾಗಿ ನೆರವೇರಲಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು, 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಅಪ್ಪು ಪರವಾಗಿ ಸ್ವೀಕಾರ ಮಾಡಲಿದ್ದಾರೆ.

    English summary
    Rajinikanth And Jr NTR wrote letter to Karnataka Government and confirms their presence in Karnataka Ratna award ceremony which will given to Puneeth Rajkumar on November 01.
    Saturday, October 29, 2022, 18:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X