»   » ಠಾಕ್ರೆಗೆ ಸಂತಾಪ ಸೂಚಿಸಿ ರಜನಿ ಬರೆದ ಪತ್ರ..

ಠಾಕ್ರೆಗೆ ಸಂತಾಪ ಸೂಚಿಸಿ ರಜನಿ ಬರೆದ ಪತ್ರ..

Posted By:
Subscribe to Filmibeat Kannada

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡಾ ಮರಾಠ ನಾಯಕ ಬಾಳಾ ಠಾಕ್ರೆ ಅವರ ಹಿಂಬಾಲಕರಲ್ಲಿ ಒಬ್ಬರು. ಬಾಳಾ ಠಾಕ್ರೆ ಅವರ ನಿಧನಕ್ಕೆ ಕಂಬನಿ ಮಿಡಿದ ದೇಶದ ಮಹಾನ್ ತಾರೆಗಳ ಸಾಲಿನಲ್ಲಿ ರಜನಿಕಾಂತ್ ಕೂಡಾ ಸೇರಿದ್ದಾರೆ.

ಬಾಲಿವುಡ್ ದಿಗ್ಗಜರಾದ ಅಮಿತಾಬ್ ಬಚ್ಚನ್, ಲತಾ ಮಂಗೇಶ್ವರ್ ರಂಥ ಮಹಾನ್ ಕಲಾವಿದರೇ ಬಾಳಾ ಠಾಕ್ರೆ ಅಂತಿಮ ದರ್ಶನಕ್ಕೆ ಬಂದ ಮೇಲೆ ಇಡೀ ಬಾಲಿವುಡ್ ಇಂಡಸ್ಟ್ರೀಯೇ ಮಹರಾಷ್ಟ್ರದ ಹುಲಿ ಬಾಳಾ ಸಾಹೇಬ್ ಅವರಿಗೆ ಗೌರವ ಸಲ್ಲಿಸಿದೆ.

ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅವರ ನಿಧನಕ್ಕೆ ಸಂತಾಪ ಸೂಚಿಸಿ ಸೂಪರ್ ಸ್ಟಾರ್ ರಜನಿಕಾಂತ್ ಬರೆದ ಪತ್ರ ಇಲ್ಲಿದೆ.


ಬಾಳಾ ಠಾಕ್ರೆಗೆ ಆತ್ಮೀಯ ರಾಗಿದ್ದ ರಜನಿಕಾಂತ್ ಅವರು ಹಿಂದು ಹೃದಯ ಸಾಮ್ರಾಟ್ ಎಂದು ಠಾಕ್ರೆ ಅವರನ್ನು ಕರೆದಿದ್ದಾರೆ. ಮರಾಠಿ ಮಾನೂಸ್ ಬಗ್ಗೆ ಠಾಕ್ರೆ ಹೊಂದಿದ್ದ ಕಾಳಜಿಯನ್ನು ರಜನಿ ಕೊಂಡಾಡಿದ್ದಾರೆ.

ತಮಿಳರ ಆರಾಧ್ಯ ದೈವವಾಗಿರುವ ಬೆಂಗಳೂರಿನಲ್ಲಿ ಕಂಡೆಕ್ಟರ್ ಆಗಿ ವೃತ್ತಿಜೀವನ ಆರಂಭಿಸಿ ನಂತರ ಸೂಪರ್ ಸ್ಟಾರ್ ಆಗಿ ಬೆಳೆದ ರಜನಿಕಾಂತ್ ಅವರು ಮೂಲತಃ ಮಹಾರಾಷ್ಟ್ರದವರು ಎಂಬುದನ್ನು ಮರೆಯುವಂತಿಲ್ಲ.

ಮಹಾರಾಷ್ಟ್ರದಲ್ಲಿ ಹುಟ್ಟಿದ ರಜನಿಕಾಂತ್ ಅವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್ ಆಗಿದೆ.

ಬಾಳಾ ಠಾಕ್ರೆ ನನ್ನನ್ನು ಸೇರಿದಂತೆ ಎಲ್ಲರಿಗೂ ತಂದೆ ಸಮಾನ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಅಭೂತ ಪೂರ್ವ ಅಂತಿಮ ಯಾತ್ರೆ : ಬಾಳಾ ಠಾಕ್ರೆ ಅವರ ಅಂತಿಮ ಯಾತ್ರೆಯಲ್ಲಿಸುಮಾರು 20 ಲಕ್ಷ ಜನರು ಪ್ರವಾಹೋಪಾದಿಯಲ್ಲಿ ಸಾಗಿದರು. 1 ಲಕ್ಷ ಆಟೋ, 30 ಸಾವಿರ ಟ್ಯಾಕ್ಸಿಗಳು ಸಂಚಾರ ಸ್ಥಗಿತಗೊಳಿಸಿದ್ದು, ಇಡೀ ಮುಂಬೈ ದಾದರ್ ನಲ್ಲಿರುವ ಶಿವಾಜಿ ಪಾರ್ಕಿನಲ್ಲಿ ನಲ್ಲಿ ನೆರೆದ್ದಿತ್ತು. ನಿಗದಿತ ಸಮಯಕ್ಕೆ ಸರ್ಕಾರಿ ಗೌರವದ ನಡುವೆ, ಹಿಂದೂ ಸಂಪ್ರದಾಯದ ಪ್ರ್ರಕಾರ ಬಾಳಾ ಠಾಕ್ರೆ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಒನ್ ಇಂಡಿಯಾ ಕನ್ನಡ

English summary
Kollywood icon Rajinikanth released a handwritten note, condoling the demise of Shiv Sena supremo Bal Thackeray yesterday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada