»   » ರಜನಿಕಾಂತ್ ಪುತ್ರಿಯ 7 ವರ್ಷದ ದಾಂಪತ್ಯ ಕೊನೆಗೂ ಅಂತ್ಯ

ರಜನಿಕಾಂತ್ ಪುತ್ರಿಯ 7 ವರ್ಷದ ದಾಂಪತ್ಯ ಕೊನೆಗೂ ಅಂತ್ಯ

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅವರ ಎರಡನೇ ಪುತ್ರಿ ಸೌಂದರ್ಯ ಮತ್ತು ಪತಿ ಅಶ್ವಿನ್ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆ ಮೆರೆಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಮಂಗಳವಾರ (ಜುಲೈ 4) ಅರ್ಜಿ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಅಧಿಕೃತವಾಗಿ ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಮೂಲಕ ಸೌಂದರ್ಯ ಅಶ್ವಿನ್ ಅವರ 7 ವರ್ಷಗಳ ಸುಂದರ ದಾಂಪತ್ಯ ಅಂತ್ಯವಾಗಿದೆ. ಸೌಂದರ್ಯ ಮತ್ತು ಅಶ್ವಿನ್ ಕುಮಾರ್ ಅವರ ಸಂಸಾರ ಸರಿಗಮಪದಲ್ಲಿ, ಕಳೆದ ಕೆಲವು ಸಮಯಗಳಿಂದ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಅದು ಸರಿಹೋಗದ ಪರಿಣಾಮ ಇದೀಗ ವಿಚ್ಛೇದನಕ್ಕೆ ಎಡೆ ಮಾಡಿಕೊಟ್ಟಿದೆ.

ಹಾಗಿದ್ರೆ, ಸೌಂದರ್ಯ ದಂಪತಿಯ ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಿದ ಕೋರ್ಟ್ ಏನು ಹೇಳಿದೆ? ಜೀವನಾಂಶದ ಬಗ್ಗೆ ನ್ಯಾಯಾಲಯದ ತೀರ್ಮಾನವೇನು ಎಂಬುದನ್ನ ತಿಳಿದುಕೊಳ್ಳಲು. ಮುಂದೆ ಓದಿ...

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ

ಕಾಲಿವುಡ್ ನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಎರಡನೇ ಮಗಳು ಸೌಂದರ್ಯ ರಜನಿಕಾಂತ್ ಮತ್ತವರ ಪತಿ ಖ್ಯಾತ ಉದ್ಯಮಿ ಅಶ್ವಿನ್ ರಾಮ್ ಕುಮಾರ್ ಅವರು, ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದು, ಚೆನ್ನೈ ಕೌಟುಂಬಿಕ ನ್ಯಾಯಾಲಯ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇಬ್ಬರಲ್ಲೂ ಭಿನ್ನಾಭಿಪ್ರಾಯವಿದ್ದ ಕಾರಣ ಬೇರೆಯಾಗಲು ನಿರ್ಧರಿಸಿದ್ದರು. ಕಳೆದ ವರ್ಷದಿಂದ ಬೇರೆಯಾಗಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

ವಿಚ್ಛೇದನ ಸುದ್ದಿ ಖಚಿತಪಡಿಸಿದ ರಜನಿ ಪುತ್ರಿ ಸೌಂದರ್ಯ

ಪ್ರೀತಿಸಿ ಮದುವೆಯಾಗಿದ್ದ ಸೌಂದರ್ಯ ರಜನಿಕಾಂತ್

ಸುಮಾರು 4 ವರ್ಷಗಳ ಕಾಲ ಪ್ರೀತಿಸಿ, 2010ರಲ್ಲಿ ಕುಟುಂಬದವರ ಸಮ್ಮುಖದಲ್ಲಿ ಸೌಂದರ್ಯ ಮತ್ತು ಅಶ್ವಿನ್ ಅವರು ಮದುವೆಯಾಗಿದ್ದರು. ಈ ದಂಪತಿಗಳಿಗೆ ವೇದ್ ಎನ್ನುವ 4 ವರ್ಷದ ಮಗನಿದ್ದಾನೆ.

ರಜನಿ ಎರಡನೇ ಮಗಳು ಸೌಂದರ್ಯಾ ವಿಚ್ಛೇದನದ ಸುದ್ದಿ ನಿಜವಾ?

ರಜನಿಕಾಂತ್ ಸಂಧಾನವೂ ಯಶಸ್ವಿಯಾಗಲಿಲ್ಲ

ಸೌಂದರ್ಯ ಅಶ್ವಿನ್ ಅವರ ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟಂತೆ ಸೂಪರ್ ಸ್ಟಾರ್ ರಜನಿಕಾಂತ್ ದಂಪತಿಗಳನ್ನು ಕೂರಿಸಿ ಮಾತಾನಾಡಿದ್ದರು. ಇಬ್ಬರ ನಡುವೆ ರಾಜಿ ಮಾಡಲು ಪ್ರಯತ್ನಪಟ್ಟಿದ್ದರು. ಆದರೆ ರಜಿನಿ ಅವರ ಪ್ರಯತ್ನ ಫಲ ಕೊಡಲಿಲ್ಲ.

ರಜನಿಕಾಂತ್ ಮಗಳು ಸೌಂದರ್ಯ ನಿಶ್ಚಿತಾರ್ಥ

ಜೀವನಾಂಶದ ಬಗ್ಗೆ ಮಾಹಿತಿಯಿಲ್ಲ

ಇನ್ನು ಇಬ್ಬರು ಬೇರ್ಪಡಲು ಒಪ್ಪಿಗೆ ಸೂಚಿಸಿರುವ ಚೆನ್ನೈ ಕೌಟುಂಬಿಕ ನ್ಯಾಯಾಲಯ, ಜೀವನಾಂಶದ ಬಗ್ಗೆ ಏನು ಹೇಳಿದೆ ಎಂಬ ಮಾಹಿತಿ ಹೊರ ಬಿದ್ದಿಲ್ಲ. ಇನ್ನು ಮಗನ ವಿಚಾರದಲ್ಲೂ ಕೋರ್ಟ್ ಏನು ತೀರ್ಮಾನಕ್ಕೆ ಬಂದಿದೆ ಎಂಬುದರ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ.

English summary
Superstar Rajinikanth's younger daughter Soundarya has finally put a legal end to her wedding seven year wedding with Ashwin on Tuesday after a family court in Chennai granted divorced to them.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada