»   » ಬಾಕ್ಸ್ ಆಫೀಸಲ್ಲಿ ಥಂಡಾ ಆದ ರಜನಿಕಾಂತ್ 'ಲಿಂಗಾ'

ಬಾಕ್ಸ್ ಆಫೀಸಲ್ಲಿ ಥಂಡಾ ಆದ ರಜನಿಕಾಂತ್ 'ಲಿಂಗಾ'

Posted By:
Subscribe to Filmibeat Kannada

ಈ ವರ್ಷದ ಬಹುನಿರೀಕ್ಷಿತ, ಭಾರಿ ಬಜೆಟ್ ಚಿತ್ರ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಲಿಂಗಾ'. ಮೊದಲ ವಾರ ಬಾಕ್ಸಾಫೀಸಲ್ಲಿ 'ಲಿಂಗಾ' ಚಿತ್ರದ ಮೇಲೆ ಕಾಸಿನ ಅಭಿಷೇಕವನ್ನೇ ಮಾಡಿದರು ಪ್ರೇಕ್ಷಕ ಪ್ರಭುಗಳು.

ಆದರೆ ಎರಡನೇ ವಾರ ಕಳೆಯುತ್ತಿದ್ದಂತೆ 'ಲಿಂಗಾ' ಚಿತ್ರದ ಬಾಕ್ಸ್ ಆಫೀಸ್ ರಿಪೋರ್ಟ್ ತಲೆಕೆಳಗಾಗುತ್ತಿದೆ. ಸಾಧಾರಣ ಕಥೆ ಇರುವ ಈ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಳಿಕ ಸಾಕಷ್ಟು ಚಿತ್ರಗಳು ತೆರೆಗೆ ಬಂದದ್ದು ಬಾಕ್ಸ್ ಆಫೀಸ್ ಕಲೆಕ್ಷನ್ ಕಡಿಮೆಯಾಗಲು ಕಾರಣ ಎನ್ನುತ್ತವೆ ಮೂಲಗಳು. [ಲಿಂಗಾ ಚಿತ್ರವಿಮರ್ಶೆ]

ವಿತರಕರು ಹಾಗೂ ಚಿತ್ರಮಂದಿರದ ಮಾಲೀಕರ ಮುಖದಲ್ಲಿ ನಗು ಮಾಸಿದ್ದು ಸಂಕಷ್ಟಕ್ಕೆ ಗುರಿ ಮಾಡಿದೆ ಎನ್ನುತ್ತದೆ ಲಿಂಗಾ ಚಿತ್ರದ ತಾಜಾ ಬಾಕ್ಸ್ ಆಫೀಸ್ ರಿಪೋರ್ಟ್. ಎರಡನೇ ವಾರದಲ್ಲಿ ಚಿತ್ರದ ಗಳಿಕೆ, ಪ್ರಮುಖವಾಗಿ ಕೇರಳದಲ್ಲಿ ತಳಕಚ್ಚಿರುವ ಕಾರಣ ವಿತರಕರು ಹಾಗೂ ಚಿತ್ರಮಂದಿರದ ಮಾಲೀಕರು ತುರ್ತು ಸಭೆಯನ್ನು ಕರೆದಿದ್ದು ಈ ಬಗ್ಗೆ ಚರ್ಚಿಸಲು ಮುಂದಾಗಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Rajinikanth's Lingaa Box Office: Heading Towards Loss?

ಇನ್ನೊಂದು ಮೂಲದ ಪ್ರಕಾರ, "ತಮಗಾಗಿರುವ ನಷ್ಟವನ್ನು ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಹಾಗೂ ಸ್ವತಃ ರಜನಿಕಾಂತ್ ಅವರು ತುಂಬು ಕೊಡಬೇಕು" ಎಂಬ ಮಾತುಗಳು ಕೇಳಿಬರುತ್ತಿವೆ. ಬಿಡುಗಡೆಯಾದ ಮೊದಲ ವಾರದಲ್ಲೇ ಸಾಕಷ್ಟು ಭರವಸೆ ಮೂಡಿಸಿದ್ದ ಚಿತ್ರ ಎರಡನೇ ವಾರಕ್ಕೆ ಥಂಡಾ ಹೊಡೆಯುತ್ತಿರುದು ಚರ್ಚೆಯ ವಿಷಯವಾಗಿದೆ.

ಸರಿಸುಮಾರು ರು.100 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರು ಚಿತ್ರ ಇದುವರೆಗೂ, ತಮಿಳುನಾಡಿನಲ್ಲೇ ರು.38 ಕೋಟಿ ಗಳಿಸಿದೆ. ಉಳಿದಂತೆ ಚಿತ್ರದ ಗಳಿಕೆ ನಿರಾಶಾದಾಯಕವಾಗಿದೆ. ಅದರಲ್ಲೂ ಚೆನ್ನೈ ಪಾಲು ಮಾತ್ರ ಆಶಾದಾಯವಾಗಿದ್ದು, ಉಳಿದ ನಗರಗಳಲ್ಲಿ ಹೇಳಿಕೊಳ್ಳುವಂತಿಲ್ಲ ಎನ್ನಲಾಗಿದೆ.

ಇದೀಗ ಅಮೀರ್ ಖಾನ್ ಅಭಿನಯದ 'ಪಿಕೆ' ಚಿತ್ರ ಬಿಡುಗಡೆಯಾಗಿರುವುದು ಲಿಂಗಾ ಚಿತ್ರದ ಗಳಿಕೆಗೆ ಭಾರಿ ಹೊಡೆತ ಬೀಳುವ ಸಾಧ್ಯತೆಗಳಿವೆ. ಒಟ್ಟಾರೆಯಾಗಿ ಬಾಕ್ಸ್ ಆಫೀಸಲ್ಲಿ 'ಲಿಂಗಾ' ಚಿತ್ರದ ಸದ್ದಡಗುತ್ತಿದೆ. (ಏಜೆನ್ಸೀಸ್)

English summary
Despite enjoying the biggest opening for any Tamil movie worldwide, Lingaa's collections at the box office have dipped substantially in its second week thanks to fans' mixed response and a few new releases. According to the latest box office news, the movie might put its distributors and theatre owners in trouble.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada