For Quick Alerts
  ALLOW NOTIFICATIONS  
  For Daily Alerts

  ಕೊನೆಗೂ ರಜನಿಯ '2.0' ಚಿತ್ರದ ರಿಲೀಸ್ ದಿನಾಂಕ ಪಕ್ಕಾ ಆಯ್ತು

  By Bharath Kumar
  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ '2.0' ಸಿನಿಮಾ ಈಗ ರಿಲೀಸ್ ಆಗುತ್ತೆ, ಮುಂದಿನ ತಿಂಗಳು ಬಿಡುಗಡೆಯಾಗುತ್ತೆ, ಇದೇ ವರ್ಷ ತೆರೆಕಾಣುತ್ತೆ ಎಂದು ಚಿತ್ರಪ್ರೇಮಿಗಳು ಕಾಯ್ತಿದ್ದಾರೆ. ಮತ್ತೆ ಕೆಲವರು ಈ ಸಿನಿಮಾನೇ ಬರಲ್ಲ ಬಿಡ್ರಿ ಅಂತ ಬೇಜಾರಾಗ್ಬಿಟ್ಟಿದ್ದಾರೆ.

  ಯಾಕಂದ್ರೆ, ಸಿನಿಮಾ ಆರಂಭವಾಗಿ ಎರಡ್ಮೂರು ವರ್ಷ ಆಗ್ತಿದೆ. ಶೂಟಿಂಗ್ ಮುಗಿದಿದ್ದರೂ ಬಿಡುಗಡೆ ಮಾತ್ರ ಆಗ್ತಿಲ್ಲ. ಇದೀಗ, ಕೊನೆಗೂ 2.0 ಚಿತ್ರದ ರಿಲೀಸ್ ಡೇಟ್ ಲಾಕ್ ಆಗಿದೆ.

  ಚಿತ್ರದ ನಿರ್ದೇಶಕ ಹಾಗೂ ನಿರ್ಮಾಣ ಸಂಸ್ಥೆ ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ 2.0 ಚಿತ್ರದ ರಿಲೀಸ್ ಡೇಟ್ ಪ್ರಕಟ ಮಾಡಿದೆ. ಅಷ್ಟಕ್ಕೂ, ತಲೈವಾ ಅಭಿನಯದ ಈ ಮೆಗಾಸಿನಿಮಾಗೆ ಮುಹೂರ್ತ ಯಾವಾಗ ಎಂದು ತಿಳಿದುಕೊಳ್ಳಲು ಮುಂದೆ ಓದಿ...

  ವರ್ಷದ ಕೊನೆಯಲ್ಲಿ ಸಿನಿಮಾ

  ವರ್ಷದ ಕೊನೆಯಲ್ಲಿ ಸಿನಿಮಾ

  ಚಿತ್ರತಂಡವೇ ಸ್ವತಃ ಚಿತ್ರದ ಬಿಡುಗಡೆ ದಿನಾಂಕವನ್ನ ಘೋಷಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ 2.0 ಸಿನಿಮಾ ಈ ವರ್ಷಾಂತ್ಯಕ್ಕೆ ಅಂದ್ರೆ, ನವೆಂಬರ್ 29, 2018 ರಂದು ಜಗತ್ತಿನಾದ್ಯಂತ ತೆರೆಗೆ ಬರ್ತಿದೆ.

  60 ದಾಟಿಟ್ರು ಇವರ 'ಹವಾ' ಕಮ್ಮಿಯಾಗಿಲ್ಲ: ಯಾರೆಲ್ಲಾ ಇದ್ದಾರೆ.?60 ದಾಟಿಟ್ರು ಇವರ 'ಹವಾ' ಕಮ್ಮಿಯಾಗಿಲ್ಲ: ಯಾರೆಲ್ಲಾ ಇದ್ದಾರೆ.?

  ಸೂಪರ್ ಹಿಟ್ ರೋಬೋ2

  ಸೂಪರ್ ಹಿಟ್ ರೋಬೋ2

  ಎಲ್ಲರಿಗೂ ತಿಳಿದಿರುವಂತೆ ಇದು 2010ರ ಸೂಪರ್ ಹಿಟ್ ಸಿನಿಮಾ 'ಎಂಥಿರನ್' ಚಿತ್ರದ ಮುಂದುವರೆದ ಭಾಗ. ಶಂಕರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್, ಆಮಿ ಜಾಕ್ಸನ್ ಹಾಗೂ ರಜನಿಕಾಂತ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

  ಒಂದು ವಾರದ ನಂತರ 'ಕಾಲಾ' ಕಲೆಕ್ಷನ್ ದಾಖಲೆ.?ಒಂದು ವಾರದ ನಂತರ 'ಕಾಲಾ' ಕಲೆಕ್ಷನ್ ದಾಖಲೆ.?

  ಅತಿ ದೊಡ್ಡ ಬಜೆಟ್

  ಅತಿ ದೊಡ್ಡ ಬಜೆಟ್

  ಸುಮಾರು 450 ಕೋಟಿ ಬಜೆಟ್ ನಲ್ಲಿ ಈ ಸಿನಿಮಾ ಸಿದ್ಧವಾಗಿದೆ ಎಂದು ಹೇಳಲಾಗ್ತಿದೆ. ಇದುವರೆಗೂ ಭಾರತೀಯ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಯಾವ ಸಿನಿಮಾನೂ ತಯಾರಾಗಿಲ್ಲ. ಹಾಗಾಗಿ, ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.

  ಗ್ರಾಫಿಕ್ಸ್ ಕೆಲಸದಿಂದ ವಿಳಂಬ

  ಗ್ರಾಫಿಕ್ಸ್ ಕೆಲಸದಿಂದ ವಿಳಂಬ

  ಎಲ್ಲ ಅಂದುಕೊಂಡಂತೆ ಆಗಿದ್ದರೇ ಕಳೆದ ವರ್ಷವೇ ಸಿನಿಮಾ ಬರಬೇಕಿತ್ತು. ಆದ್ರೆ, ಗ್ರಾಫಿಕ್ಸ್ ಕೆಲಸದಿಂದ ವಿಳಂಬವಾಗಿತ್ತು. ಈಗ ಅಂತಿಮವಾಗಿ ಎಲ್ಲವೂ ಮುಗಿದಿದೆ. ವಿಶ್ವದ ಬೇರೆ ಬೇರೆ 15 ಸ್ಟುಡಿಯೋಗಳಲ್ಲಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡಲಾಗಿದೆ. ಈ ಚಿತ್ರದಿಂದ ಭಾರತ ಸಿನಿಮಾರಂಗದ ಭವಿಷ್ಯವೇ ಬದಲಾಗುತ್ತೆ ಎಂಬ ಮಾತಿದೆ.

  English summary
  Rajinikanth's 2.0 will open in theatres on November 29 this year, director Shankar Shanmugham confirmed in a tweet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X