For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್' ಎಫೆಕ್ಟ್: ಕನ್ನಡಕ್ಕೆ ರಜನಿ-ರಾಮ್ ಚರಣ್ ಸಿನಿಮಾ.!

  |
  KGF Movie: ಕೆಜಿಎಫ್' ಎಫೆಕ್ಟ್: ಕನ್ನಡದಲ್ಲಿ ಮತ್ತೆ ಡಬ್ಬಿಂಗ್ ಕಹಳೆ ಸದ್ದು ಮಾಡ್ತಿದೆ|FILMIBEAT KANNADA

  ಕನ್ನಡದಲ್ಲಿ ಮತ್ತೆ ಡಬ್ಬಿಂಗ್ ಕಹಳೆ ಸದ್ದು ಮಾಡ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಎರಡು ಮೆಗಾ ಪರಭಾಷಾ ಚಿತ್ರಗಳು ಕನ್ನಡಕ್ಕೆ ಬರ್ತಿದೆ ಎನ್ನಲಾಗ್ತಿದೆ. ಸದ್ಯ, ದೇಶದಾದ್ಯಂತ ಕನ್ನಡದ ಕೆಜಿಎಫ್ ಐದು ಭಾಷೆಗಳಲ್ಲಿ ಮಿಂಚುತ್ತಿದ್ದು, ಅದೇ ರೀತಿ ಪರಭಾಷೆ ಸಿನಿಮಾಗಳು ಚಂದನವನಕ್ಕೆ ಕಾಲಿಡಲಿದೆಯಂತೆ.

  ಡಬ್ಬಿಂಗ್ ಚಿತ್ರಗಳು ಕನ್ನಡಕ್ಕೆ ಬಂದ್ರೆ ಇಲ್ಲಿನ ಕಲಾವಿದರಿಗೆ, ತಂತ್ರಜ್ಞರಿಗೆ ಅನ್ಯಾಯವಾಗುತ್ತೆ. ಕನ್ನಡ ಮಾರುಕಟ್ಟೆ ಚಿಕ್ಕದು ಎಂದು ಹೇಳ್ತಾರೆ. ಹೀಗಿದ್ದರೂ, ಅಲ್ಲೊಂದು ಇಲ್ಲೊಂದು ಪರಭಾಷೆ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗಿ ಬಂದಿದೆ.

  ಇನ್ಮುಂದೆ ಡಬ್ಬಿಂಗ್ ವಿರೋಧದ ಹೋರಾಟ ಮಾಡಲ್ವಂತೆ ನಟ ಜಗ್ಗೇಶ್

  ಆದ್ರೀಗ, ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ರಾಮ್ ಚರಣ್ ತೇಜ ಚಿತ್ರಗಳು ಕನ್ನಡದಲ್ಲಿ ಡಬ್ ಆಗಿ ತೆರೆಕಾಣಲು ಸಜ್ಜಾಗಿದೆ. ಮೂಲ ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ದಿನವೇ ಕನ್ನದಲ್ಲೂ ಡಬ್ ಆಗಲಿದೆಯಂತೆ. ಇದು ಡಬ್ಬಿಂಗ್ ಬೆಂಬಲಿಗರಿಗೆ ಖುಷಿ ನೀಡಿದೆ. ಯಾವ ಚಿತ್ರಗಳು, ಯಾವಾಗ ಬರುತ್ತೆ? ಮುಂದೆ ಓದಿ....

  ರಜನಿಕಾಂತ್ 'ಪೆಟ್ಟಾ'

  ರಜನಿಕಾಂತ್ 'ಪೆಟ್ಟಾ'

  ಸನ್ ನೆಟ್ ವರ್ಕ್ ಸಂಸ್ಥೆ ನಿರ್ಮಾಣ ಮಾಡಿರುವ ರಜನಿಕಾಂತ್ ಅಭಿನಯದ 'ಪೆಟ್ಟಾ' ಚಿತ್ರ ಸಂಕ್ರಾಂತಿ ಹಬ್ಬಕ್ಕೆ ತೆರೆಕಾಣುವ ಸಾಧ್ಯತೆ ಇದೆ. ಈಗ ವಿಷ್ಯ ಏನಪ್ಪಾ ಅಂದ್ರೆ, ಅದೇ ದಿನ 'ಪೆಟ್ಟಾ' ಸಿನಿಮಾ ಕನ್ನಡದಲ್ಲೂ ಡಬ್ ಆಗಿ ಬರ್ತಿದೆಯಂತೆ. ಈಗಾಗಲೇ ಡಬ್ಬಿಂಗ್ ಕೆಲಸ ಮುಗಿದಿದೆ ಎನ್ನಲಾಗಿದೆ.

  ಡಬ್ಬಿಂಗ್ ಗೆ ಪರೋಕ್ಷವಾಗಿ ಜೈ ಎಂದ ರಾಕಿಂಗ್ ಸ್ಟಾರ್.!

  ರಾಮ್ ಚರಣ್ ಸಿನಿಮಾ

  ರಾಮ್ ಚರಣ್ ಸಿನಿಮಾ

  ರಜನಿಕಾಂತ್ ಅವರ 'ಪೆಟ್ಟಾ' ಚಿತ್ರದಂತೆ ತೆಲುಗು ನಟ ರಾಮ್ ಚರಣ್ ಅಭಿನಯದ 'ವಿನಯ ವಿಧೇಯ ರಾಮ' ಚಿತ್ರವೂ ಕನ್ನಡಕ್ಕೆ ಡಬ್ ಆಗಲಿದೆಯಂತೆ. ಬಯೋಪಟಿ ಶೀನು ನಿರ್ದೇಶನದ ಈ ಚಿತ್ರವೂ ಸಂಕ್ರಾಂತಿಗೆ ಬರುವ ಸಾಧ್ಯತೆ ಇದೆ.

  ಕನ್ನಡದಲ್ಲಿ ಬರ್ತಿದ್ಯಾ ರಜನಿಯ '2.0'.? ಎಲ್ಲೆಲ್ಲೂ ಹರಿದಾಡ್ತಿದೆ ಕನ್ನಡ ಟೀಸರ್.!

  ಐದು ಭಾಷೆಯಲ್ಲಿ ಮಿಂಚಿದ್ದ ಕೆಜಿಎಫ್

  ಐದು ಭಾಷೆಯಲ್ಲಿ ಮಿಂಚಿದ್ದ ಕೆಜಿಎಫ್

  ಕನ್ನಡದ ಕೆಜಿಎಫ್ ಸಿನಿಮಾ ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ಐದು ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗಿದ್ದ ಈ ಚಿತ್ರಕ್ಕೆ ಭಾರಿ ಮೆಚ್ಚುಗೆ ಸಿಕ್ಕಿತ್ತು. ಈಗ ಅದೇ ರೀತಿ ಬೇರೆ ಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಬರಬೇಕು ಎಂಬ ಮಾತು ಡಬ್ಬಿಂಗ್ ವಲಯದಲ್ಲಿ ಕೇಳಿಬರ್ತಿದೆ. ಇಷ್ಟು ದಿನ ಸುಮ್ಮನಿದ್ದ ಡಬ್ಬಿಂಗ್ ಹೋರಾಟಗರಾರು ಈಗ ಕೆಜಿಎಫ್ ಯಶಸ್ಸು ನೋಡಿ, ಮತ್ತೆ ಸದ್ದು ಮಾಡ್ತಿದ್ದಾರೆ.

  ವಾಣಿಜ್ಯ ಮಂಡಳಿಯ ನಿಲುವೇನು?

  ವಾಣಿಜ್ಯ ಮಂಡಳಿಯ ನಿಲುವೇನು?

  ಈ ಬಗ್ಗೆ ವಾಣಿಜ್ಯ ಮಂಡಳಿ ಯಾವುದೇ ನಿಲುವು ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಯಾಕಂದ್ರೆ, ಡಬ್ಬಿಂಗ್ ವಿರೋಧಿಸಿದ್ರೆ ದಂಡ ಕಟ್ಟಬೇಕಾಗುತ್ತೆ. ಇನ್ನು ಕನ್ನಡ ಸಿನಿಮಾ ಬೇರೆ ಭಾಷೆಗೆ ಹೋದಾಗ ಅಲ್ಲಿನ ಸ್ವಾಗತಿಸಿದ್ದಾರೆ. ಈಗ ಅವರ ಭಾಷೆಯ ಚಿತ್ರಗಳು ಕನ್ನಡಕ್ಕೆ ಬಂದಾಗ, ಇಲ್ಲಿಯೂ ಸ್ವಾಗತ ಮಾಡಬೇಕು ಎನ್ನುವುದು ಡಬ್ಬಿಂಗ್ ಪರ ಹೋರಾಟಗಾರರ ಅಭಿಪ್ರಾಯವಾಗಿದೆ. ಇದೆಲ್ಲವನ್ನ ಮೀರಿ ರಜನಿ ಮತ್ತು ರಾಮ್ ಚರಣ್ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬರುತ್ತಾ ಕಾದು ನೋಡಬೇಕಿದೆ.

  English summary
  According to reports, the filmmakers are in the process of making the Kannada version of Rajinikanth starrer Petta, which is also being dubbed in Telugu and Hindi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X