For Quick Alerts
  ALLOW NOTIFICATIONS  
  For Daily Alerts

  'ನಟಭಯಂಕರ'ನಿಗೆ ಜೊತೆಯಾದ 'ನಾರಾಯಣ'

  |
  Rakshit Shetty to help Pratham release his movie song

  ಪ್ರಥಮ್ ಅಂದ್ರೆನೇ ಹಾಗೆ. ಕಷ್ಟಪಟ್ಟು ಮಾಡಿರುವ ಸಿನಿಮಾನ ಜನರಿಗೆ ತಲುಪಿಸಬೇಕು ಎಂಬ ಕಾರಣಕ್ಕೆ ಎಂತಹ ಸಾಹಸಕ್ಕೆ ಬೇಕಾದರೂ ಕೈ ಹಾಕ್ತಾರೆ. ದೇವೇಗೌಡರಿಂದ ವಿಶ್ ಮಾಡಿಸ್ತಾರೆ, ಅಡ್ವಾಣಿ ಅವರಿಂದ ಸಿನಿಮಾ ಲಾಂಚ್ ಮಾಡಿಸ್ತಾರೆ. ಕೈಗೆ ಸಿಗದ ಸ್ಟಾರ್ ನಟರಿಂದ ಸಿನಿಮಾ ಪ್ರಚಾರ ಮಾಡಿಸ್ತಾರೆ.

  ಈಗ, ಪ್ರಥಮ್ ನಟಿಸಿ, ನಿರ್ದೇಶಿಸಿರುವ ನಟಭಯಂಕರ ಚಿತ್ರಕ್ಕೆ 'ಅವನೇ ಶ್ರೀಮನ್ನಾರಾಯಣ' ರಕ್ಷಿತ್ ಶೆಟ್ಟಿ ಜೊತೆಯಾಗಿದ್ದಾರೆ. ನಟಭಯಂಕರ ಸಿನಿಮಾದ 'ಗೀತಾ ಗೀತಾ ಗಾಂಚಲಿ ಗೀತಾ.....' ಮೆಲೋಡಿ ಹಾಡನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಲಿದ್ದಾರೆ.

  ಈ ವಿಷ್ಯದಲ್ಲಿ 'ದಬಾಂಗ್ 3'ಯನ್ನು ಮೀರಿಸಿದೆ 'ಅವನೇಈ ವಿಷ್ಯದಲ್ಲಿ 'ದಬಾಂಗ್ 3'ಯನ್ನು ಮೀರಿಸಿದೆ 'ಅವನೇ

  ಸದ್ಯಕ್ಕೆ ರಕ್ಷಿತ್ ಶೆಟ್ಟಿ ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ತಾವಾಯ್ತು, ತಮ್ಮ ಸಿನಿಮಾ ಆಯ್ತು ಎಂದು ಬ್ಯುಸಿ ಆಗಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಎಂಬ ಪ್ಯಾನ್ ಇಂಡಿಯಾ ಸಿನಿಮಾ ಜೊತೆ 'ಚಾರ್ಲಿ 777' ಚಿತ್ರವನ್ನು ಮಾಡುತ್ತಿದ್ದಾರೆ.

  ಎಲ್.ಕೆ.ಅಡ್ವಾಣಿ ಅವರನ್ನು ಭೇಟಿ ಮಾಡಿದ ಲಾರ್ಡ್ ಪ್ರಥಮ್ಎಲ್.ಕೆ.ಅಡ್ವಾಣಿ ಅವರನ್ನು ಭೇಟಿ ಮಾಡಿದ ಲಾರ್ಡ್ ಪ್ರಥಮ್

  ಇಂತಹ ಸಂದರ್ಭದಲ್ಲಿ ಪ್ರಥಮ್, ರಕ್ಷಿತ್ ಶೆಟ್ಟಿ ಅವರನ್ನ ಭೇಟಿ ಮಾಡಿ, ಅವರಿಂದ ಆಡಿಯೋ ರಿಲೀಸ್ ಮಾಡಿಸಲು ತಯಾರಾಗಿದ್ದಾರೆ. ಅಂದ್ಹಾಗೆ, ಈ ಡ್ಯುಯೆಟ್ ಹಾಡನ್ನು ರಕ್ಷಿತ್ ಶೆಟ್ಟಿ ಕೇಳಿದ್ದಾರಂತೆ. ಹಾಡು ಕೇಳಿದ್ಮೇಲೆ ಬಹಳ ಖುಷಿಯಾದ ಶೆಟ್ಟರು, ''ಒಂಥರಾ ನಮಗೂ ಕನೆಕ್ಟ್ ಆಗ್ತಿದೆ, ಹಾಡು ತುಂಬಾ ಚೆನ್ನಾಗಿದೆ'' ಎಂದರಂತೆ.

  ಈ ಹಾಡಿಗೆ ಅರಸು ಅಂತಾರೆ ಸಾಹಿತ್ಯ ರಚಿಸಿದ್ದಾರೆ. ಸಂಚಿತ್ ಹೆಗ್ಡೆ ಹಾಡಿದ್ದಾರೆ. ಪ್ರದ್ಯೋಥನ್ (ದೇವ್ರಂಥಾ ಮನುಷ್ಯ) ಸಂಗೀತ ನೀಡಿದ್ದಾರೆ. 'ರನ್ ಅಂಟೋನಿ' ಚಿತ್ರದಲ್ಲಿ ನಟಿಸಿದ್ದ ಸುಶ್ಮಿತಾ ನಾಯಕಿಯಾಗಿ ನಟಿಸಿದ್ದಾರೆ. ಡೈಲಾಗ್ ಕಿಂಗ್ ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಲೀಲಾವತಿ, ಕುರಿ ಪ್ರತಾಪ್, ಶೋಭರಾಜ್, ಓಂ ಪ್ರಕಾಶ್ ರಾವ್, ಬಿರಾದರ್ ಅಂತಹ ಕಲಾವಿದರು ಇದ್ದಾರೆ.

  English summary
  Kannada Actor Rakshit Shetty will release the romantic song of Nata bhayankara movie. directed by pratham and acted himself.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X