ಸುದೀಪ್‌ಗೆ ರಕ್ಷಿತ್ ಶೆಟ್ಟಿ ನಿರ್ದೇಶನ: ಎಲ್ಲಿ ತನಕ ಬಂತು ಸಿನಿಮಾ!

ನಟ ರಕ್ಷಿತ್ ಶೆಟ್ಟಿ ಸದ್ಯ '777 ಚಾರ್ಲಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಜೂನ್ 10ಕ್ಕೆ ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾ ಮುಗಿಯುತ್ತಿದ್ದ ಹಾಗೆ ರಕ್ಷಿತ್ ಶೆಟ್ಟಿಯ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಬರಲಿದೆ. ಈ ಚಿತ್ರದ ಕೆಲಸಗಳು ಕೂಡ ಬಹುತೇಕ ಮುಗಿದಿದ್ದು 'ಚಾರ್ಲಿ' ಬಳಿಕ ಈ ಸಿನಿಮಾ ಹೆಚ್ಚು ಸಮಯ ತೆಗೆದುಕೊಳ್ಳದೆ ತೆರೆಗೆ ಬರಲಿದೆ.

ಇದರ ನಡುವೆ ರಕ್ಷಿತ್ ಶೆಟ್ಟಿ ಮತ್ತು ಸುದೀಪ್ ಸಿನಿಮಾ ಏನಾಯ್ತು ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ. ಸುದೀಪ್‌ಗಾಗಿ ಸಿನಿಮಾ ಮಾಡುವುದಾಗಿ ನಟ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದರು. ಕಥೆ ರೆಡಿ ಇದೆ. ಆದರೆ ಇದನ್ನು ಸುದೀಪ್ ಒಪ್ಪಿದರಾ, ಇಬ್ಬರು ಒಟ್ಟಿಗೆ ಸಿನಿಮಾ ಮಾಡುವುದು ಪಕ್ಕಾನಾ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಇವೆ.

Rakshith Shetty Directional Movie For Sudeep Will Start Soon

ಈಗ ಇದಕ್ಕೆಲ್ಲಾ ಉತ್ತರ ಸಿಕ್ಕಿದೆ. ಗಾಂಧಿ ನಗರದಲ್ಲಿ ಈ ಬಗ್ಗೆ ಹೊಸ ಸುದ್ದಿ ಹರಿದಾಡುತ್ತಾ ಇದೆ. ನಟ ರಕ್ಷಿತ್ ಶೆಟ್ಟಿ '777 ಚಾರ್ಲಿ' ಸಿನಿಮಾ ರಿಲೀಸ್ ಬಳಿಕ ಸುದೀಪ್‌ ಸಿನಿಮಾದ ಕೆಲಸಗಳನ್ನು ಶುರು ಮಾಡಲಿದ್ದಾರಂತೆ. ಸ್ಕ್ರಿಪ್ಟ್ ಕೆಲಸಗಳನ್ನು ಅಂತಿಮಗೊಳಿಸಳಿದ್ದಾರಂತೆ.

ಇನ್ನು ಈ ಹಿಂದೆ ಸುದೀಪ್‌ಗೆ ಸಿನಿಮಾ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದರು. '777 ಚಾರ್ಲಿ' ಬಿಡುಗಡೆಯ ನಂತರ, 'ಸಪ್ತಸಾಗರದಾಚೆ ಎಲ್ಲೊ' ಸಿನಿಮಾ ಇದೆ. ಅದರ ನಂತರ ರಿಚ್ಚಿ ಸಿನಿಮಾ ಶುರುವಾಗಲಿದೆ. ಆ ನಂತರ 'ಪುಣ್ಯಕೋಟಿ' ಸಿನಿಮಾ ಪ್ರಾರಂಭವಾಗಲಿದೆ. ಸುದೀಪ್‌ ಅವರಿಗಾಗಿ ಕತೆ ತಯಾರು ಮಾಡುತ್ತಿದ್ದೇನೆ. ನನ್ನ ಕೆಲಸಗಳು ಪೂರ್ಣಗೊಂಡ ಬಳಿಕ ಸುದೀಪ್ ಜೊತೆ ಸಿನಿಮಾ ಪ್ರಾರಂಭಿಸುತ್ತೇನೆ ಎಂದಿದ್ದಾರೆ.

Rakshith Shetty Directional Movie For Sudeep Will Start Soon

ರಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ 'ಥಗ್ಸ್ ಆಫ್ ಮಾಲ್ಗುಡಿ' ಹೆಸರಿನ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಸಿನಿಮಾ ಈಗ ಸುದೀಪ್ ಅವರಿಗೆ ರಕ್ಷಿತ್ ಶೆಟ್ಟ ಮಾಡಲು ಹೊರಟಿರುವು 'ಥಗ್ಸ್ ಆಫ್ ಮಾಲ್ಗುಡಿ' ಕಥೆಯಾ ಅಥವಾ ಬೇರೆ ಕಥೆಯ ಎನ್ನುವುದನ್ನು ಅವರೇ ಸ್ಪಷ್ಟ ಪಡಿಸಬೇಕು.

More from Filmibeat

English summary
Rakshith Shetty Directional Movie For Sudeep Will Start Soon,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X