For Quick Alerts
  ALLOW NOTIFICATIONS  
  For Daily Alerts

  ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ರಕ್ಷಿತ್ ಶೆಟ್ಟಿ 'ಪುಣ್ಯಕೋಟಿ'

  |
  ಐದು ವರ್ಷಗಳ ನಂತರ ಮತ್ತೆ ಬಹು ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ರಕ್ಷಿತ್ ಶೆಟ್ಟಿ

  ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ ಅವನೇ ಶ್ರೀಮನ್ನಾರಾಯಣ ಮತ್ತು '777 ಚಾರ್ಲಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಚಿತ್ರೀಕರಣ ಮುಗಿಸಿ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ ರಕ್ಷಿತ್. 'ಅವನೇ ಶ್ರೀಮನ್ನಾರಾಯಣ' ಚಿತ್ರ ಅದ್ಧೂರಿಯಾಗಿ ತೆರೆಗೆ ಬರುತ್ತಿರವ ಪ್ಲಾನ್ ಮಾಡಿದೆ ಚಿತ್ರತಂಡ.

  ಕನ್ನಡ ಮಾತ್ರವಲ್ಲದೆ ಐದು ಭಾಷೆಯಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಇದರ ಜೊತೆಗೆ '777 ಚಾರ್ಲಿ' ಚಿತ್ರ ಕೂಡ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಆ ನಂತರ ರಕ್ಷಿತ್ ದೊಡ್ಡ ಬಜೆಟ್ ನ ಚಿತ್ರವೊಂದನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಹೌದು ಪುಣ್ಯಕೋಟಿ ಚಿತ್ರದಲ್ಲಿ ಅಭಿನಯ ಮಾತ್ರವಲ್ಲದೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದಾರೆ.

  'ಶ್ರೀಮನ್ನಾರಾಯಣ'ನ ಬಗ್ಗೆ ತರುಣ್ ಸುಧೀರ್ ಮಾಡಿದ್ದು ವ್ಯಂಗ್ಯನಾ ಮೆಚ್ಚುಗೆನಾ?

  ಇದೆಲ್ಲ ಹಳೆ ಮ್ಯಾಟ್ರು ಆದ್ರೆ ಹೊಸ ವಿಚಾರ ಅಂದ್ರೆ ಈ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆಯಂತೆ. ಸುಮಾರು 100 ಕೋಟಿ ವೆಚ್ಚದ ಸಿನಿಮಾ ಇದಾಗುವ ಸಾಧ್ಯತೆ ಇದೆಯಂತೆ. ಜೊತೆಗೆ ಈ ಸಿನಿಮಾ ಸುಮಾರು 300ವರ್ಷಗಳ ಹಿಂದಿನ ಕತೆಯಂತೆ. ಹಾಗಾಗಿ 300 ವರ್ಷಗಳ ಹಿಂದಿನ ಬ್ಯಾಗ್ರೌಂಡ್ ನಿರ್ಮಿಸಲು ಸೆಟ್ ಬಗ್ಗೆ ಪ್ಲಾನ್ ಮಾಡುತ್ತಿದ್ದಾರಂತೆ ರಕ್ಷಿತ್.

  300 ವರ್ಷಗಳ ಹಳೆಯ ಕಥೆ ಅಂತ ಆದ್ರೆ ಹೇಗಿರಲಿದೆ ಸಿನಿಮಾ ಎನ್ನುವ ಕುತೂಹಲ ಈಗಾಗಲೆ ಅಭಿಮಾನಿಗಳಲ್ಲಿದೆ. ಒಂದು ಯುದ್ಧದ ಸನ್ನಿವೇಶವನ್ನು ಆಧರಿಸಿದ ಸಿನಿಮಾ ಇದಾಗಲಿದೆಯಂತೆ. 'ಅವನೇ ಶ್ರೀಮನ್ನಾರಾಯಣ' ಸಿನಿಮಾ ರಿಲೀಸ್ ಆದ ನಂತರ ಪುಣ್ಯಕೋಟಿ ಕೈಗೆತ್ತಿಕೊಳ್ಳಲಿದ್ದಾರೆ ರಕ್ಷಿತ್. ಎಲ್ಲವು ಅಂದುಕೊಂಡಂತೆ ಅಂದ್ರೆ ಇದೆ ವರ್ಷದ ಕೊನೆಯಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

  English summary
  Kannada actor Rakshith Shetty will direct a big budget film Punyakoti after five years. Rakshith currently busy in 777 Charlie and Avane Srimannarayana

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X