»   » ಅಯ್ಯೋ...ನಟಿ ರಕ್ಷಿತಾ ಪ್ರೇಮ್ ಕಾಲಿಗೆ ಏನಾಗಿದೆ..?

ಅಯ್ಯೋ...ನಟಿ ರಕ್ಷಿತಾ ಪ್ರೇಮ್ ಕಾಲಿಗೆ ಏನಾಗಿದೆ..?

Posted By:
Subscribe to Filmibeat Kannada

ನಟಿ ರಕ್ಷಿತಾ ಪ್ರೇಮ್ ಅವರ ಈ ಫೋಟೋ ನೋಡಿದವರು 'ಅಯ್ಯೋ...ರಕ್ಷಿತಾ ಕಾಲಿಗೆ ಏನಾಗಿದೆ..?' ಅಂತ ಆತಂಕದಿಂದ ಕೇಳಬಹುದು. ಯಾಕೆಂದರೆ ಈಗ ರಕ್ಷಿತಾ ತಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.

ಸಖತ್ ಸ್ಪೆಷಲ್ ಆಗಿತ್ತು ರಕ್ಷಿತಾ ಪ್ರೇಮ್ ಮಗನ ಬರ್ತಡೇ.!

ರಕ್ಷಿತಾ ಕಾಲಿಗೆ ಪೆಟ್ಟು ಮಾಡಿಕೊಂಡಿರುವ ಫೋಟೋವನ್ನು ಅವರ 'ರಕ್ಷಿತಾ ಫ್ಯಾನ್ಸ್ ಕ್ಲಬ್' ಟ್ವಿಟ್ಟರ್ ಖಾತೆಯಲ್ಲಿ ಹಾಕಲಾಗಿತ್ತು. ಬಳಿಕ ಈ ವಿಷಯದ ಬಗ್ಗೆ ಸ್ವತಃ ರಕ್ಷಿತಾ ಅವರೇ ಮಾತನಾಡಿದ್ದಾರೆ.

Rakshitha Prem suffers minor leg injury.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ರಕ್ಷಿತಾ ''ನೀವೆಲ್ಲರು ನೋಡಬಹುದು.. ನನ್ನ ಕಾಲು ಗಾಯವಾಗಿದೆ. ಆದರು ಕೂಡ ನಾನು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ಸೆಮಿ ಫೈನಲ್ ಶೂಟಿಂಗ್ ಗಾಗಿ ಹೊಗುತ್ತಿದ್ದೇನೆ. ನಮ್ಮ ತಂಡಕ್ಕೆ ನಿಮ್ಮ ಬೆಂಬಲ ಬೇಕು.'' ಎಂದು ವಿಡಿಯೋ ಮೂಲಕ ಹೇಳಿದ್ದಾರೆ.

Rakshitha Prem suffers minor leg injury.

ತಮ್ಮ ಕಾಲಿಗೆ ಪೆಟ್ಟಾಗಲು ಕಾರಣ ಏನು ಎಂಬುದನ್ನು ರಕ್ಷಿತಾ ಇಲ್ಲಿ ಹೇಳಿಲ್ಲ. ಕಾಲಿಗೆ ಚಿಕಿತ್ಸೆ ಪಡೆದಿರುವ ಅವರು ಸದ್ಯ ನಡೆಯುವುದಕ್ಕೆ ಸಾಧ್ಯ ಆಗುತ್ತಿಲ್ಲ. ಕಾಲು ಸಹಜ ಸ್ಥಿತಿಗೆ ಬರಲು ಕೆಲ ದಿನಗಳ ವಿಶ್ರಾಂತಿ ಬೇಕಾಗಿದೆಯಂತೆ.

English summary
Actress Rakshitha Prem suffers minor leg injury.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada