»   » 'ಬಾಹುಬಲಿ' ನೋಡಿ ಚಿರು ಪುತ್ರ ಏನಂದ್ರು ಗೊತ್ತಾ?

'ಬಾಹುಬಲಿ' ನೋಡಿ ಚಿರು ಪುತ್ರ ಏನಂದ್ರು ಗೊತ್ತಾ?

Posted By:
Subscribe to Filmibeat Kannada

ಟಾಲಿವುಡ್ನಾದ್ಯಂತ 'ಬಾಹುಬಲಿ' ಹವಾ ಸಿಕ್ಕಾಪಟೆ ಜೋರಾಗಿದೆ. ಎಲ್ಲರ ಬಾಯಲ್ಲೂ 'ಬಾಹುಬಲಿ ನಲಿದಾಡುತ್ತಿದ್ದಾನೆ. ಎಸ್.ಎಸ್.ರಾಜಮೌಳಿ ನಿರ್ದೇಶನಕ್ಕೆ ಎಲ್ಲರೂ ಕ್ಲೀನ್ ಬೌಲ್ಡ್ ಆಗಿದ್ದಾರೆ. ಪ್ರಭಾಸ್, ರಾಣಾ, ರಮ್ಯಾಕೃಷ್ಣ ನಟನೆಗೆ ಜೈಕಾರ ಸಿಕ್ಕಿದೆ.

ಬರೀ ಸಾಮಾನ್ಯ ಪ್ರೇಕ್ಷಕರು ಮಾತ್ರ ಅಲ್ಲ, ಟಾಲಿವುಡ್ ನ ಸ್ಟಾರ್ ಸೆಲೆಬ್ರಿಟಿಗಳೂ 'ಬಾಹುಬಲಿ' ಚಿತ್ರಕ್ಕೆ ಉಘೇ ಉಘೇ ಅನ್ನುತ್ತಿದ್ದಾರೆ. ಅಂಥವರಲ್ಲಿ, ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಕೂಡ ಒಬ್ಬರು.

ram-charan-teja-praises-rajamouli-s-baahubali

'ಬಾಹುಬಲಿ' ಚಿತ್ರವನ್ನ ಕಣ್ಣಾರೆ ಕಂಡು, ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಮ್ ಚರಣ್ ಹಂಚಿಕೊಂಡಿರುವುದು ಹೀಗೆ - ''ಈಗಷ್ಟೆ 'ಬಾಹುಬಲಿ' ನೋಡ್ದೆ. ಎಪಿಕ್ ಮೇಕರ್ ಎಸ್.ಎಸ್.ರಾಜಮೌಳಿ, ವಿಜೇಂದರ್ ಪ್ರಸಾದ್, ಸೆಂಥಿಲ್ ಕುಮಾರ್ ಮತ್ತು ಇಡೀ 'ಬಾಹುಬಲಿ' ಚಿತ್ರತಂಡಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಪ್ರಭಾಸ್, ರಾಣಾ, ರಮ್ಯಾಕೃಷ್ಣ ಅಭಿನಯ ಚಿತ್ರವನ್ನ ಮತ್ತೊಂದು ಹಂತಕ್ಕೆ ತಲುಪಿಸಿದೆ. ಪಾರ್ಟ್ 2 ಗೆ ಕಾಯುತ್ತಿದ್ದೇನೆ''.

Just saw Baahubali..came out Speechless.Hats off to our Epic maker Rajamouli,Vijender prasad Garu Shobu,Senthil kumar &...

Posted by Ram Charan on Friday, July 17, 2015

''ಬಾಹುಬಲಿ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮತ್ತು ಹಾಡುಗಳು ಸದಾ ಗುನುಗುವಂತಿದೆ. ಎಮ್.ಎಮ್.ಕೀರವಾಣಿ ಸರ್ ಗೆ ನನ್ನ ಸ್ಪೆಷಲ್ ಕಂಗ್ರ್ಯಾಟ್ಸ್'' ಅಂತ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ರಾಮ್ ಚರಣ್ ತೇಜ ಪೋಸ್ಟ್ ಮಾಡಿದ್ದಾರೆ. [ಬಾಹುಬಲಿ ವಿಮರ್ಶೆ : ಓಕೆ, ಆದರೆ ಅಂಥ ನಿರೀಕ್ಷೆ ಬೇಡ ]

Baahubali's Background music &songs will be heard Forever from now. My special congrats to M.M.keeravani sir.

Posted by Ram Charan on Friday, July 17, 2015

ಹಾಗ್ನೋಡಿದರೆ, ಇದೇ ರಾಜಮೌಳಿ ನಿರ್ದೇಶನದಲ್ಲೇ ರಾಮ್ ಚರಣ್ ತೇಜ 'ಮಗಧೀರ' ಅಂತಹ ಸೂಪರ್ ಡ್ಯೂಪರ್ ಹಿಟ್ ನೀಡಿದ್ದರು. ಇದೀಗ ರಾಜಮೌಳಿ ಆಕ್ಷನ್ ಕಟ್ ಹೇಳಿರುವ ಮತ್ತೊಂದು ಚಿತ್ರಕ್ಕೆ ರಾಮ್ ಚರಣ್ ಕ್ಲೀನ್ ಬೌಲ್ಡ್ ಆಗಿದ್ದಾರೆ.

English summary
Tollywood Star Ram Charan Teja watched 'Baahubali' recently and praised the film. 'Baahubali' features Prabhas, Rana Daggubati, Ramya Krishna, Anushka Shetty directed by SS Rajamouli.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada