For Quick Alerts
  ALLOW NOTIFICATIONS  
  For Daily Alerts

  ವಿಕ್ಷಿಪ್ತ ವ್ಯಕ್ತಿತ್ವದ ರಾಮ್‌ಗೋಪಾಲ್ ವರ್ಮಾ ತೋರಿದ ಮಾನವೀಯತೆ

  |

  ರಾಮ್‌ಗೋಪಾಲ್ ವರ್ಮಾ ಅತ್ಯಂತ ಚಾಣಾಕ್ಷ ನಿರ್ದೇಶಕ ಜೊತೆಗೆ ಅಷ್ಟೇ ವಿಕ್ಷಿಪ್ತ, ವಿಲಕ್ಷಣ ವ್ಯಕ್ತಿತ್ವ ಉಳ್ಳ ವ್ಯಕ್ತಿ ಸಹ.

  ಟ್ವಿಟ್ಟರ್‌ನಲ್ಲಿ ಮತ್ತೊಬ್ಬರ ಕಾಲೆಳೆಯುವ, ಸದಾ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲೇ ನಿರತವಾಗಿರುವ ರಾಮ್‌ಗೋಪಾಲ್ ವರ್ಮಾ ಬಹು ವಿರಳವಾಗಿ ಸಾಮಾಜಿಕ ಕಾರ್ಯವೊಂದಕ್ಕೆ ಕೈ ಹಾಕಿದ್ದಾರೆ.

  ಆದರೆ ವರ್ಮಾ, ತಾವು ಆಯ್ಕೆ ಮಾಡಿಕೊಂಡಿರುವ ಸಾಮಾಜಿಕ ಕಾರ್ಯದಲ್ಲೂ ತಾವು ಉಳಿದವರಿಗಿಂತ 'ಭಿನ್ನ' ಎಂಬುದನ್ನು ವರ್ಮಾ ತೋರಿಸಿದ್ದಾರೆ.

  ಅತ್ಯಾಚಾರ ಪ್ರಕರಣದ ಆರೋಪಿ ಪತ್ನಿ ಸಹಾಯಕ್ಕೆ ಮನವಿ

  ಅತ್ಯಾಚಾರ ಪ್ರಕರಣದ ಆರೋಪಿ ಪತ್ನಿ ಸಹಾಯಕ್ಕೆ ಮನವಿ

  ಅತ್ಯಾಚಾರ ಆರೋಪಿ ಒಬ್ಬನ ಪತ್ನಿಯ ಗೆ ಸಹಾಯ ಮಾಡುವಂತೆ ರಾಮ್‌ ಗೋಪಾಲ್ ವರ್ಮಾ ಮನವಿ ಮಾಡಿದ್ದು, ಟ್ವಿಟ್ಟರ್‌ನಲ್ಲಿ ಬ್ಯಾಂಕ್ ಖಾತೆ ಮಾಹಿತಿ ನೀಡಿ ದನ ಸಹಾಯಕ್ಕೆ ಕೇಳಿಕೊಂಡಿದ್ದಾರೆ.

  ಮಗುವಿನ ಭವಿಷ್ಯ ಭದ್ರಗೊಳಿಸಲು ನೆರವಿನ ಅವಶ್ಯಕತೆ

  ಮಗುವಿನ ಭವಿಷ್ಯ ಭದ್ರಗೊಳಿಸಲು ನೆರವಿನ ಅವಶ್ಯಕತೆ

  ದೇಶವನ್ನು ತಲ್ಲಣಗೊಳಿಸಿದ್ದ ಪಶುವೈದ್ಯೆ ದಿಶಾ ಅತ್ಯಾಚಾರ ಆರೋಪಿ ಒಬ್ಬನಾದ ಚೆನ್ನಕೇಶವಲು ಮಡದಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆಕೆ ಮಗುವಿನ ಭವಿಷ್ಯ ಭದ್ರಗೊಳಿಸಲು ನೆರವಿನ ಅವಶ್ಯಕತೆ ಇದೆ ಎಂದು ರಾಮ್‌ಗೋಪಾಲ್ ವರ್ಮಾ ಮನವಿ ಮಾಡಿದ್ದಾರೆ.

  ಅತ್ಯಾಚಾರಿಯ ನೆರಳು ಮಗುವಿನ ಭವಿಷ್ಯ ಕತ್ತಲು ಮಾಡದಿರಲಿ

  ಅತ್ಯಾಚಾರಿಯ ನೆರಳು ಮಗುವಿನ ಭವಿಷ್ಯ ಕತ್ತಲು ಮಾಡದಿರಲಿ

  ''ಚೆನ್ನಕೇಶವಲು ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾಯಿ-ಮಗು ಇಬ್ಬರೂ ಆರಾಮವಾಗಿದ್ದಾರೆ. ಅತ್ಯಾಚಾರಿಯ ನೆರಳಿನಿಂದಾಗಿ ಆ ಮಗುವಿನ ಭವಿಷ್ಯ ಕತ್ತಲಾಗುವುದು ಬೇಡ, ಸಹೃದಯರ ಮಗುವಿನ ಭವಿಷ್ಯ ಭದ್ರವಾಗಿಸಲು ಸಹಾಯ ಮಾಡಿ'' ಎಂದು ಕರೆ ನೀಡಿದ್ದ ರಾಮ್‌ಗೋಪಾಲ್ ವರ್ಮಾ.

  ಡಿಸೆಂಬರ್ 6 ರಂದು ಪೊಲೀಸರ ಎನ್‌ಕೌಂಟರ್‌ ನಲ್ಲಿ ಸಾವು

  ಡಿಸೆಂಬರ್ 6 ರಂದು ಪೊಲೀಸರ ಎನ್‌ಕೌಂಟರ್‌ ನಲ್ಲಿ ಸಾವು

  ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಾಲ್ವರು ಆರೋಪಿಗಳನ್ನು ಪೊಲೀಸರು ಡಿಸೆಂಬರ್ 6 ರಂದು ಎನ್‌ಕೌಂಟರ್‌ ನಲ್ಲಿ ಕೊಂದರು. ಆ ನಾಲ್ವರಲ್ಲಿ ಚೆನ್ನಕೇಶವಲು ಸಹ ಒಬ್ಬನಾಗಿದ್ದು, ಆತ ಕೆಲವು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ. ಸಾಯುವಾಗ ಆತನ ಪತ್ನಿ ಗರ್ಭಿಣಿ ಆಗಿದ್ದರು.

  English summary
  Ram Gopal Varma request to help rape accused wife who gave birth to baby girl. Disha Rape accused Chennakeshavalu died in police encounter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X