For Quick Alerts
  ALLOW NOTIFICATIONS  
  For Daily Alerts

  ವಿಶ್ವ ಮಹಿಳಾ ದಿನದಂದು ಅಚ್ಚರಿ ಮೂಡಿಸಿದ ವರ್ಮಾ ಟ್ವೀಟ್.!

  By Bharath Kumar
  |

  ರಾಮ್ ಗೋಪಾಲ್ ವರ್ಮಾ ಅಂದ್ರೆನೇ ಹಾಗೆ. ಏನಾದರೂ ಕಾಮೆಂಟ್ ಮಾಡಿ ಎಲ್ಲರ ಕಾಲೆಳೆಯುವ ಗುಣ ಅವರದ್ದು. ಅದೇ ರೀತಿ ಹೊಗಳಿ ಅಟ್ಟಕ್ಕೇರಿಸಿರುವ ಉದಾಹರಣೆಗಳು ಇವೆ. ಇಂದು ವಿಶ್ವ ಮಹಿಳಾ ದಿನಾಚರಣೆಯ ದಿನ. ಹೀಗಾಗಿ, ಸಹಜವಾಗಿ ರಾಮ್ ಗೋಪಾಲ್ ವರ್ಮಾ ಅವರ ಮೇಲೊಂದು ಕಣ್ಣು ಇರಲೇಬೇಕು.

  ಯಾಕಂದ್ರೆ, ಕಳೆದ ಭಾರಿ ಇದೇ ದಿನ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದ್ರೆ, ಈ ಭಾರಿ ಅಚ್ಚರಿ ಮೂಡಿಸಿರುವ ಆರ್.ಜಿ.ವಿ ಮಹಿಳೆಯರ ಪರ ದನಿ ಎತ್ತಿದ್ದಾರೆ. ಮಹಿಳೆಯರ ಬಗ್ಗೆ ಅವಮಾನ ಮಾಡುತ್ತಿದ್ದ ವರ್ಮಾ ಸ್ತ್ರೀಯರು ಮೆಚ್ಚುವಂತಹ ಹೇಳಿಕೆ ನೀಡಿದ್ದಾರೆ.

  ಮಹಿಳೆಯರ ದೇಹದ ಬಗ್ಗೆ ಸೆಕ್ಸಿ ಕಾಮೆಂಟ್ ಮಾಡಿದ ವರ್ಮ

  ಅಷ್ಟಕ್ಕೂ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವೀಟ್ ನಲ್ಲಿ ಏನಿದೆ.? ಸದಾ ವಿವಾದಗಳನ್ನ ಹುಟ್ಟುಹಾಕುವ ಆರ್.ಜಿ.ವಿ ಮತ್ತೆ ಅದೇ ರೀತಿ ಕಾಮೆಂಟ್ ಮಾಡಿದ್ದಾರ.? ಮುಂದೆ ಓದಿ.....

  ಇದೊಂದು ರೀತಿ ಮಹಿಳೆಯರಿಗೆ ಅವಮಾನ

  ಇದೊಂದು ರೀತಿ ಮಹಿಳೆಯರಿಗೆ ಅವಮಾನ

  ''ವರ್ಷದಲ್ಲಿ ಕೇವಲ ಒಂದು ದಿನ ಮಾತ್ರ ಮಹಿಳಾ ದಿನಾಚರಣೆ ಮಾಡುವುದು ನನ್ನ ಪ್ರಕಾರ ಇದು ಕೂಡ ಒಂದು ರೀತಿ ಅವರಿಗೆ ಮಾಡುವ ಅವಮಾನ. ಯಾಕಂದ್ರೆ ಉಳಿದ 364 ದಿನಗಳು ಪುರುಷರ ದಿನವಾಗಿರುತ್ತೆ'' ಎಂದು ರಾಮ್ ಗೋಪಾಲ್ ವರ್ಮಾ ಮಹಿಳೆಯರ ಪರವಾಗಿ ದನಿ ಎತ್ತಿದ್ದಾರೆ.

  ಪ್ರತಿ ದಿನವೂ ಮಹಿಳಾ ದಿನ

  ಪ್ರತಿ ದಿನವೂ ಮಹಿಳಾ ದಿನ

  ''ಪ್ರತಿ ದಿನವೂ ಮಹಿಳಾ ದಿನವೆಂದು ನಾನು ನಂಬುತ್ತೇನೆ. ಯಾಕಂದ್ರೆ ಯಾವ ಪುರುಷನಿಗೂ ಅವನದ್ದೇ ಆದ ದಿನವಿಲ್ಲ. ಪುರುಷರ ದಿನವೆಂದು ಯಾರೂ ಆಚರಿಸಲ್ಲವೇಕೆ.?'' ಎಂದು ಇನ್ನೊಂದು ಟ್ವೀಟ್ ಮಾಡಿ ಪುರುಷರ ಕಾಲೆಳೆದಿದ್ದಾರೆ.

  ಕಳೆದ ವರ್ಷ ಆಕ್ರೋಶಕ್ಕೆ ಗುರಿಯಾದ ವರ್ಮಾ ಟ್ವೀಟ್...

  ಕಳೆದ ವರ್ಷ ಆಕ್ರೋಶಕ್ಕೆ ಗುರಿಯಾದ ವರ್ಮಾ ಟ್ವೀಟ್...

  'ಜಗತ್ತಿನಲ್ಲಿರುವ ಎಲ್ಲಾ ಮಹಿಳೆಯರು ಸನ್ನಿ ಲಿಯೋನ್ ತರಹ ಪುರುಷರಿಗೆ ಸಂತಸ ನೀಡಿ' ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. ಇದನ್ನ ಖಂಡಿಸಿದ್ದ ಮಹಿಳಾ ಸಂಘಟನೆಗಳು ಆರ್.ಜಿ.ವಿ ವಿರುದ್ಧ ದೂರು ದಾಖಲಿಸಿದ್ದರು. ಜನರು ಕೂಡ ವರ್ಮಾ ಅವರ ಟ್ವೀಟ್ ವಿರುದ್ಧ ಕೆಂಡ ಕಾರಿದ್ದರು.

  'ಮಹಿಳಾ ದಿನ'ಕ್ಕೆ ವರ್ಮಾ ಕೀಳು ಶುಭಾಶಯ, ದೂರು ದಾಖಲು

  ಸಮರ್ಥನೆ ಮಾಡಿಕೊಂಡಿದ್ದ ನಿರ್ದೇಶಕ

  ಸಮರ್ಥನೆ ಮಾಡಿಕೊಂಡಿದ್ದ ನಿರ್ದೇಶಕ

  ಕಳೆದ ವರ್ಷ ವಿಶ್ವ ಮಹಿಳಾ ದಿನದಂದು ಮಾಡಿದ್ದ ಟ್ವೀಟ್ ಗೆ ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆ ಮತ್ತೊಂದು ಟ್ವೀಟ್ ನಲ್ಲಿ ಸಮರ್ಥನೆ ನೀಡಿದ್ದರು. ಮೊದಲ ಟ್ವೀಟ್ ಗೆ ಖಾರ ಪ್ರತಿಕ್ರಿಯೆ ಬರುತ್ತಿದ್ದಂತೆಯೇ ಸಮರ್ಥಿಸಿಕೊಳ್ಳಲು ಯತ್ನಿಸಿದ ವರ್ಮಾ, "ಸನ್ನಿ ಲಿಯೋನ್ ಹೆಚ್ಚು ಪ್ರಮಾಣಿಕಳು ಮತ್ತು ಇತರೆ ಮಹಿಳೆಯರಿಗಿಂತ ಹೆಚ್ಚು ಆತ್ಮ ಗೌರವ ಹೊಂದಿದ್ದಾಳೆ'' ಎಂದು ಇನ್ನೊಂದು ಟ್ವೀಟ್ ಮಾಡಿದ್ದರು. ಇದರಿಂದ ಮತ್ತಷ್ಟು ಕೋಪಗೊಂಡಿದ್ದ ಮಹಿಳೆ ಮಣಿಗಳು ದೂರು ನೀಡಿದ್ದರು.

  ರಾಮ್ ಗೋಪಾಲ್ ವರ್ಮಾ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ನಗ್ಮ

  English summary
  Sensational filmmaker Ram Gopal Varma, who is super active on all social media handles, took to his official Twitter account and reacted to the Women’s Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X