For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಫೈಟ್ ಮಾಸ್ಟರ್ಸ್ ಎಂಟ್ರಿ

  |

  'ಪೊಗರು' ಸಿನಿಮಾದ ಬಳಿಕ ನಂದಕಿಶೋರ್ ಜೊತೆ 'ದುಬಾರಿ' ಅಂತಹ ಸಿನಿಮಾ ಘೋಷಣೆ ಮಾಡಿದರು. ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ, ಸ್ಕ್ರಿಪ್ಟ್ ಪೂಜೆ ಸಹ ಮುಗಿಸಿದ್ದರು. ಇನ್ನೇನು ಶೂಟಿಂಗ್ ಶುರು ಮಾಡುವ ಸಮಯದಲ್ಲಿ 'ದುಬಾರಿ' ಚಿತ್ರಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಈ ಸಿನಿಮಾ ಬಿಟ್ಟು ಮತ್ತೊಂದು ಚಿತ್ರ ಆರಂಭಿಸಿದ್ದಾರೆ ಆಕ್ಷನ್ ಪ್ರಿನ್ಸ್.

  ಧ್ರುವ ಸರ್ಜಾ ಚಿತ್ರಕ್ಕೆ ಎಂಟ್ರಿ ಕೊಟ್ಟ ರಾಮ್ - ಲಕ್ಷ್ಮಣ್

  ಹೌದು, ಅದ್ಧೂರಿ ಸಿನಿಮಾ ಮಾಡಿದ್ದ ಎಪಿ ಅರ್ಜುನ್ ಜೊತೆ ಧ್ರುವ ಸರ್ಜಾ ಐದನೇ ಚಿತ್ರ ಆರಂಭಿಸಿದ್ದು, ಶೂಟಿಂಗ್ ನಡೆಯುತ್ತಿದೆ. ಇತ್ತೀಚಿಗಷ್ಟೆ ಈ ಚಿತ್ರತಂಡದಿಂದ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ. ಧ್ರುವ ಸರ್ಜಾರ ಆಕ್ಷನ್ ದೃಶ್ಯಗಳಿಗಾಗಿ ದಕ್ಷಿಣ ಭಾರತದ ಖ್ಯಾತ ಫೈಟ್ ಮಾಸ್ಟರ್ಸ್‌ಗಳನ್ನು ಕರೆಸಿದ್ದಾರೆ.

  ಧ್ರುವ ಸರ್ಜಾ 'ದುಬಾರಿ'ಗೆ ತಾತ್ಕಾಲಿಕ ಬ್ರೇಕ್: ಆಕ್ಷನ್ ಪ್ರಿನ್ಸ್ ಮುಂದಿನ ಸಿನಿಮಾ ಯಾವುದು?ಧ್ರುವ ಸರ್ಜಾ 'ದುಬಾರಿ'ಗೆ ತಾತ್ಕಾಲಿಕ ಬ್ರೇಕ್: ಆಕ್ಷನ್ ಪ್ರಿನ್ಸ್ ಮುಂದಿನ ಸಿನಿಮಾ ಯಾವುದು?

  ಟಾಲಿವುಡ್ ಇಂಡಸ್ಟ್ರಿಯಲ್ಲಿ ಹೆಚ್ಚು ಗುರುತಿಸಿಕೊಂಡಿರುವ ರಾಮ್-ಲಕ್ಷ್ಮಣ್ ಮಾಸ್ಟರ್ ಧ್ರುವ ಸರ್ಜಾ-ಎಪಿ ಅರ್ಜುನ್ ಚಿತ್ರಕ್ಕೆ ಎಂಟ್ರಿಕೊಟ್ಟಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಡಿ5 ಚಿತ್ರಕ್ಕೆ ರಾಮ್-ಲಕ್ಷ್ಮಣ್ ಮಾಸ್ಟರ್ ಪ್ರವೇಶವಾಗಿರುವ ಬಗ್ಗೆ ಛಾಯಾಗ್ರಾಹಕ ಸತ್ಯ ಹೆಗಡೆ ತಮ್ಮ ಟ್ವಿಟ್ಟರ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

  ಧ್ರುವ ಸರ್ಜಾ ಮತ್ತು ಎಪಿ ಅರ್ಜುನ್ ಚಿತ್ರದ ಹೆಸರೇನು? ನಾಯಕಿ ಯಾರು, ಕಲಾವಿದರು ಯಾರೆಲ್ಲಾ ಇದ್ದಾರೆ ಎನ್ನುವ ಬಗ್ಗೆ ಸದ್ಯಕ್ಕೆ ಸ್ಪಷ್ಟ ಮಾಹಿತಿ ಇಲ್ಲ. ಶೂಟಿಂಗ್ ಆರಂಭಿಸಿದ್ದು, ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ. ದುಬಾರಿ ಸಿನಿಮಾ ಮಾಡಬೇಕಿದ್ದ ಉದಯ್ ಮೆಹ್ತಾ ಅವರೇ ಈ ಚಿತ್ರಕ್ಕೂ ಬಂಡವಾಳ ಹಾಕ್ತಿದ್ದಾರೆ.

  ಮತ್ತೆ ಒಂದಾದ 'ಅದ್ದೂರಿ' ಜೋಡಿ: 'ದುಬಾರಿ'ಗೂ ಮೊದಲು ಮತ್ತೊಂದು ಸಿನಿಮಾಗೆ ಸಜ್ಜಾದ ಧ್ರುವ ಮತ್ತೆ ಒಂದಾದ 'ಅದ್ದೂರಿ' ಜೋಡಿ: 'ದುಬಾರಿ'ಗೂ ಮೊದಲು ಮತ್ತೊಂದು ಸಿನಿಮಾಗೆ ಸಜ್ಜಾದ ಧ್ರುವ

  ಸುಮಾರು 9 ವರ್ಷದ ನಂತರ ಧ್ರುವ ಮತ್ತು ಅರ್ಜುನ್ ಒಟ್ಟಿಗೆ ಸಿನಿಮಾ ಮಾಡ್ತಿರುವುದು ಸಹಜವಾಗಿ ಥ್ರಿಲ್ ಹೆಚ್ಚಿಸಿದೆ. ಧ್ರುವ ಸರ್ಜಾ ಚೊಚ್ಚಲ ಸಿನಿಮಾ 'ಅದ್ಧೂರಿ' 2012ರಲ್ಲಿ ಬಿಡುಗಡೆಯಾಗಿತ್ತು. ಎಪಿ ಅರ್ಜುನ್ ಈ ಚಿತ್ರಕ್ಕೆ ನಿರ್ದೇಶಿಸಿದ್ದರು. ರಾಧಿಕಾ ಪಂಡಿತ್ ನಾಯಕಿಯಾಗಿದ್ದರು.

  Ram Lakshman master working in Dhruva sarja 5th movie

  ಬಹುಬೇಡಿಕೆಯ ರಾಮ್-ಲಕ್ಷ್ಮಣ್ ಮಾಸ್ಟರ್

  ತೆಲುಗು ಇಂಡಸ್ಟ್ರಿಯ ಟಾಪ್ ಹೀರೋಗಳಿಗೆ ಆಕ್ಷನ್ ನಿರ್ದೇಶನ ಮಾಡುವುದು ಇದೇ ರಾಮ್-ಲಕ್ಷ್ಮಣ್ ಮಾಸ್ಟರ್ಸ್. ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ ಕಡೆಯೂ ಹೆಜ್ಜೆ ಹಾಕಿದ್ದಾರೆ. ಪುಷ್ಪ, ದರ್ಬಾರ್, ಸೈರಾ ನರಸಿಂಹ ರೆಡ್ಡಿ, ಮಹರ್ಷಿ, ಸರ್ಕಾರ್, ಭರತ್ ಅನೇ ನೇನು, ಅರವಿಂದ ಸಮೇತ, ಸಾಹೋ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ಕೆಲಸ ಮಾಡಿದ್ದಾರೆ.

  ಕನ್ನಡದಲ್ಲಿ ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್', ದರ್ಶನ್ ನಟನೆಯ 'ರಾಬರ್ಟ್' ಹಾಗೂ ಪುನೀತ್ ರಾಜ್ ಕುಮಾರ್ ನಟನೆಯ 'ಯುವರತ್ನ' ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ 'ಕಬ್ಜ' ಚಿತ್ರದಲ್ಲೂ ರಾಮ್-ಲಕ್ಷ್ಮಣ್ ಮಾಸ್ಟರ್ ಕೆಲಸ ಮಾಡುತ್ತಿದ್ದಾರೆ.

  ದುಬಾರಿ ಸಿನಿಮಾ ನಿಲ್ಲಲು ಕಾರಣವೇನು?

  ದುಬಾರಿ ಚಿತ್ರ ತಾತ್ಕಾಲಿಕವಾಗಿ ನಿಲ್ಲಲು ಸ್ಪಷ್ಟ ಕಾರಣ ಬಹಿರಂಗವಾಗಿಲ್ಲ. ಆದರೆ, ನಿರ್ದೇಶಕ ವಿಚಾರದಲ್ಲಿ ಚಿತ್ರತಂಡ ಕಾಂಪ್ರುಮೈಸ್ ಆಗಿಲ್ಲ ಎಂದು ವರದಿಯಾಗಿದೆ. ಮತ್ತೊಂದೆಡೆ ದುಬಾರಿ ಚಿತ್ರದಿಂದ ಹಿಂದೆ ಸರಿದಿರುವ ನಂದಕಿಶೋರ್ ನಿರ್ಮಾಪಕ ಕೆ ಮಂಜು ಅವರ ಮಗ ಶ್ರೇಯಸ್ ಜೊತೆ 'ರಾಣಾ' ಸಿನಿಮಾ ಮಾಡ್ತಿದ್ದಾರೆ.

  ಪ್ರೇಮ್ ಜೊತೆ ಧ್ರುವ ಸರ್ಜಾ ಸಿನಿಮಾ

  ಜೋಗಿ ಪ್ರೇಮ್ ತಮ್ಮ ಮುಂದಿನ ಸಿನಿಮಾವನ್ನು ಆಗಸ್ಟ್ 24 ರಂದು ಘೋಷಣೆ ಮಾಡಲಿದ್ದಾರೆ. ಅದಾಗಲೇ ಸ್ಕ್ರಿಪ್ಟ್ ಕೆಲಸ ಮುಗಿಸಿ ಪೂಜೆ ಸಹ ಮಾಡಿದ್ದರು. ಈ ಚಿತ್ರಕ್ಕೆ ಹೀರೋ ಯಾರಾಗ್ತಾರೆ ಎನ್ನುವ ಕುತೂಹಲ ಹೆಚ್ಚಿದ್ದು, ಧ್ರುವ ಸರ್ಜಾ ಹೆಸರು ಹೆಚ್ಚು ಚರ್ಚೆಯಲ್ಲಿದೆ. ಜಗ್ಗುದಾದ ನಿರ್ದೇಶನ ಮಾಡಿದ್ದ ರಾಘವೇಂದ್ರ ಹಗ್ಡೆ ಜೊತೆಯೂ ಧ್ರುವ ಸಿನಿಮಾವೊಂದಕ್ಕೆ ಕಮಿಟ್ ಆಗಿದ್ದಾರೆ ಎನ್ನಲಾಗಿದೆ.

  English summary
  South indian famous stunt director Ram-Lakshman master working in Dhruva sarja 5th movie with AP Arjun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X