»   » ಸ್ನೇಹಿತರು-ಕುಟುಂಬವರ್ಗಕ್ಕೆ ಧನ್ಯವಾದ ಸಲ್ಲಿಸಿದ ನಿರುಪ್ ಭಂಡಾರಿ

ಸ್ನೇಹಿತರು-ಕುಟುಂಬವರ್ಗಕ್ಕೆ ಧನ್ಯವಾದ ಸಲ್ಲಿಸಿದ ನಿರುಪ್ ಭಂಡಾರಿ

Posted By:
Subscribe to Filmibeat Kannada

'ರಂಗಿತರಂಗ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸುಂದರ ಮೊಗದ ನಟ ನಿರುಪ್ ಭಂಡಾರಿ ಅವರು ಇತ್ತೀಚೆಗಷ್ಟೇ ಪ್ರೀತಿಸಿದ ಹುಡುಗಿ ಧನ್ಯಾ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ ಅನ್ನೋದನ್ನ ನೀವು ಇದೇ ಫಿಲ್ಮಿಬೀಟಲ್ಲಿ ಓದಿದ್ದೀರಿ ತಾನೆ.

ಇದೀಗ ನಟ ನಿರುಪ್ ಭಂಡಾರಿ ಅವರು ತಮ್ಮ ಮದುವೆ ಸಮಾರಂಭಕ್ಕೆ ಬಂದು ಆಶೀರ್ವದಿಸಿದ ಬಂಧು-ಬಾಂಧವರಿಗೆ ಹಾಗೂ ಗಣ್ಯರಿಗೆ ಫೇಸ್ ಬುಕ್ಕಿನಲ್ಲಿ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.[ಚಿತ್ರಗಳು ; 'ರಂಗಿತರಂಗ' ನಿರೂಪ್ ಭಂಡಾರಿ ಮದುವೆ ಸಂಭ್ರಮ]


'Rangitaranga' Hero Nirup Bhandari thankful to friends and family

'ಶುಭಾಶಯ ತಿಳಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ನನ್ನ ಮದುವೆ ದಿನವನ್ನು ತುಂಬಾ ಸ್ಪೆಷಲ್ ಆಗಿ ಮಾಡಿದ್ದಕ್ಕಾಗಿ ನನ್ನ ಸ್ನೇಹಿತರು ಮತ್ತು ಕುಟುಂಬಕ್ಕೆ ವಿಶೇಷ ಧನ್ಯವಾದ ಹೇಳಲು ಇಷ್ಟಪಡುತ್ತೇನೆ' 'ನಿಮ್ಮ ಹಾರೈಕೆ ಮತ್ತು ಆಶೀರ್ವಾದ ಸದಾ ಇರಲಿ. ನಾ ಧನ್ಯ!! ಎಂದು ಫೇಸ್ ಬುಕ್ಕಿನಲ್ಲಿ ಎಲ್ಲಾ ಅಭಿಮಾನಿಗಳಿಗೂ ಸೇರಿಸಿ ಕ್ಯೂಟ್ ಮತ್ತು ಸ್ವೀಟ್ ಆಗಿ ಧನ್ಯವಾದ ಸಲ್ಲಿಸಿದ್ದಾರೆ.


Thank you all for your wonderful wishes. Special thanks to friends and family for making it a memorable day.ನಿಮ್ಮ ಹಾರೈಕೆ ಮತ್ತು ಆರ್ಶೀವಾದ ಸದಾ ಇರಲಿ.ನಾ ಧನ್ಯ!!


Posted by Nirup Bhandari on Thursday, March 31, 2016

ಮಾರ್ಚ್ 28 ರಂದು ಮೈಸೂರಿನ Silent Shores ರೆಸಾರ್ಟ್ ನಲ್ಲಿ ಚಾಕಲೇಟು ಹೀರೋ ನಿರೂಪ್ ಭಂಡಾರಿ - ಧನ್ಯಾ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿತ್ತು.


'Rangitaranga' Hero Nirup Bhandari thankful to friends and family

ಅಣ್ಣ ಅನುಪ್ ಭಂಡಾರಿ ನಿರ್ದೇಶನದ 'ರಂಗಿತರಂಗ' ಚಿತ್ರದಲ್ಲಿ ನಟಿಸಿದ ನಂತರ ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳದ ನಟ ನಿರುಪ್ ಭಂಡಾರಿ ಅವರು ಇದೀಗ ಅನುಪ್ ಅವರ ಮುಂಬರುವ ಹೊಸ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಳ್ಳಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.

English summary
'Rangitaranga' Hero Nirup Bhandari has tied knot with his long-time girl friend Dhanya, (March 27th) in Mysore. Actor Nirup Bhandari thankful to friends and family.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada